ADVERTISEMENT

ಹ್ಯಾಟ್ರಿಕ್‌ ಜಯದ ಮೇಲೆ ಡೇರ್‌ಡೆವಿಲ್ಸ್‌ಕಣ್ಣು

ಹಾಲಿ ಚಾಂಪಿಯನ್‌ ನೈಟ್‌ ರೈಡರ್ಸ್‌ ಎದುರು ಇಂದು ಪೈಪೋಟಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 19:30 IST
Last Updated 19 ಏಪ್ರಿಲ್ 2015, 19:30 IST

ನವದೆಹಲಿ (ಪಿಟಿಐ/ಐಎಎನ್‌ಎಸ್‌): ಹಿಂದಿನ ಎರಡೂ ಪಂದ್ಯಗಳಲ್ಲಿ ಬಲಿಷ್ಠ ತಂಡಗಳ ಎದುರು ಗೆಲುವು ಪಡೆದು ವಿಶ್ವಾಸದ ಗಣಿ ಎನಿಸಿರುವ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡಕ್ಕೆ ಈಗ ಕಠಿಣ ಸವಾಲು ಎದುರಾಗಿದೆ. ಸೋಮವಾರ ನಡೆಯುವ ಪಂದ್ಯದಲ್ಲಿ ಡೆಲ್ಲಿ ತಂಡ ಹಾಲಿ ಚಾಂಪಿಯನ್‌ ಕೋಲ್ಕತ್ತ ನೈಟ್ ರೈಡರ್ಸ್‌ ಎದುರು ಪೈಪೋಟಿ ನಡೆಸಲಿದೆ.

ಫಿರೋಜ್‌ ಷಾ ಕೋಟ್ಲಾ ಕ್ರೀಡಾಂಗ ಣದಲ್ಲಿ ನಡೆಲಿರುವ ಪಂದ್ಯದಲ್ಲಿ ಡುಮಿನಿ ನಾಯಕತ್ವದ ಡೇರ್‌ಡೆವಿಲ್ಸ್ ತವರಿನ ಅಂಗಳದಲ್ಲಿ ಚೊಚ್ಚಲ ಗೆಲು ವಿನ ನಿರೀಕ್ಷೆಯಲ್ಲಿದೆ. ಈ ತಂಡ ರಾಜ ಸ್ತಾನ ರಾಯಲ್ಸ್ ಎದುರು ಇಲ್ಲಿ ಒಂದು ಪಂದ್ಯ ಆಡಿ ಸೋಲು ಕಂಡಿತ್ತು. ಮೊದಲ ಎರಡೂ ಪಂದ್ಯಗಳಲ್ಲಿ ಗೆಲುವಿನ ಸನಿಹ ಬಂದು ಸೋತಿತ್ತು. ಗೌತಮ್ ಗಂಭೀರ್‌ ಸಾರಥ್ಯದ ನೈಟ್‌ ರೈಡರ್ಸ್‌ ಮತ್ತೊಂದು ಜಯದ ಮೇಲೆ ನಿರೀಕ್ಷೆ ಇಟ್ಟಿದೆ. ಈತಂಡ ಪುಣೆಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಎದುರು ನಾಲ್ಕು ವಿಕೆಟ್‌ಗಳ ಗೆಲುವು ಸಾಧಿಸಿತ್ತು.

ಡೇರ್‌ಡೆವಿಲ್ಸ್‌ ಶನಿವಾರ ಸನ್‌ರೈಸರ್ಸ್ ಹೈದರಾಬಾದ್ ಎದುರು ರೋಚಕ ಗೆಲುವು ಪಡೆದಿತ್ತು. ಇನ್ನೇನು ಸೋಲು ಎದುರಾಯಿತು ಎನ್ನುವಾಗಲೇ ಬೌಲರ್‌ಗಳು ಚುರುಕಿನ ದಾಳಿ ನಡೆಸಿದ್ದರು. ಕರ್ನಾಟಕದ ಮಯಂಕ್‌ ಅಗರವಾಲ್‌ ಸೊಗಸಾಗಿ ಫೀಲ್ಡಿಂಗ್‌ ಮಾಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಆರಂಭಿಕ ಬ್ಯಾಟ್ಸ್‌ಮನ್ ಮಯಂಕ್‌ ಒಂದು ರನ್‌ ಗಳಿಸಿ ಔಟಾಗಿದ್ದರು. ಶ್ರೇಯಸ್ ಅಯ್ಯರ್‌ ಮತ್ತು ನಾಯಕ ಡುಮಿನಿ ಅರ್ಧಶತಕ ಗಳಿಸಿ ಆಸರೆಯಾಗಿದ್ದರು.

₨ 16 ಕೋಟಿಗೆ ಡೇರ್‌ಡೆವಿಲ್ಸ್‌ ಪಾಲಾಗಿರುವ ಯುವರಾಜ್‌ ಸಿಂಗ್‌, ಏಂಜೆಲೊ ಮ್ಯಾಥ್ಯೂಸ್‌, ಶ್ರೇಯಸ್‌ ಅಯ್ಯರ್‌ ಮತ್ತು ಮಹಾರಾಷ್ಟ್ರ ಮೂಲದ ಕೇದಾರ್‌ ಜಾಧವ್‌ ಅವರ ಮೇಲೆ ಡೇರ್‌ಡೆವಿಲ್ಸ್ ತಂಡದ ಬ್ಯಾಟಿಂಗ್‌ ವಿಭಾಗ ಅವಲಂಬಿತವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಡುಮಿನಿ ತಂಡದ ಪ್ರಮುಖ ಶಕ್ತಿ ಎನಿಸಿದ್ದಾರೆ. ಸನ್‌ರೈಸರ್ಸ್‌ ಎದುರಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಆಟಗಾರ ಆಲ್‌ರೌಂಡ್‌ ಆಟವಾಡಿದ್ದರು. ಪ್ರಮುಖ ನಾಲ್ಕು ವಿಕೆಟ್‌ ಉರುಳಿಸಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಈ ತಂಡ ಬೌಲಿಂಗ್‌ನಲ್ಲಿ ಇಮ್ರಾನ್‌ ತಾಹಿರ್‌ ಅವರನ್ನು ಹೆಚ್ಚಾಗಿ ನೆಚ್ಚಿ ಕೊಂಡಿದೆ. ದಕ್ಷಿಣ ಆಫ್ರಿಕಾದ ತಾಹಿರ್‌ ಐಪಿಎಲ್‌ ಎಂಟನೇ ಆವೃತ್ತಿಯಲ್ಲಿ ಆಡಿದ ನಾಲ್ಕು ಪಂದ್ಯಗಳಿಂದ ಎಂಟು ವಿಕೆಟ್‌ಗಳನ್ನು ಉರುಳಿಸಿದ್ದಾರೆ.

ಮತ್ತೊಂದು ಜಯದ ನಿರೀಕ್ಷೆ: ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಪಡೆದಿರುವ ಬಾಲಿವುಡ್‌ ನಟ ಶಾರೂಕ್ ಖಾನ್‌ ಒಡೆತನದ ನೈಟ್‌ ರೈಡರ್ಸ್ ಪಾಯಿಂಟ್‌ ಪಟ್ಟಿಯಲ್ಲಿ ಮೂರನೇ ಸ್ಥಾನ ಹೊಂದಿದೆ.

ಗಂಭೀರ್‌ ಪಡೆ ಆರ್‌ಸಿಬಿ ತಂಡದ ಎದುರು ಮಾತ್ರ ಸೋತಿದೆ. ಉಳಿದ ಎರಡು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಕಿಂಗ್ಸ್‌ ಇಲೆವೆನ್‌ ಎದುರು ಜಯ ಪಡೆದಿದೆ. ಪಂಜಾಬ್‌ ಎದುರಿನ ಪಂದ್ಯದಲ್ಲಿ ನೈಟ್‌ ರೈಡರ್ಸ್‌ ಚುರುಕಿನ ಬೌಲಿಂಗ್‌ ನಡೆಸಿ ಎದುರಾಳಿ ತಂಡವನ್ನು 155 ರನ್‌ಗೆ ಕಟ್ಟಿ ಹಾಕಿತ್ತು. 17. 5 ಓವರ್‌ಗಳಲ್ಲಿ ಗುರಿ ಮುಟ್ಟಿತ್ತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.