ADVERTISEMENT

‘ಕಠಿಣ ಪರಿಶ್ರಮವೇ ಯಶಸ್ಸಿನ ಹಾದಿ’

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:32 IST
Last Updated 3 ಸೆಪ್ಟೆಂಬರ್ 2015, 19:32 IST

ಬೆಂಗಳೂರು:  ‘ಕಠಿಣ ಪರಿಶ್ರಮ ಹಾಗೂ ದೃಢ ಮನಸ್ಸು ಇದ್ದರೆ ಕ್ರೀಡೆಯಲ್ಲಿ ಎತ್ತ ರಕ್ಕೆ ಏರಬಹುದು’ ಎಂದು ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಗುರುವಾರ ಕಾಸಾ ಹರ್ಬಲೈಫ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಕಿವಿಮಾತು ಹೇಳಿದರು.

ನಗರದಲ್ಲಿ  ಹರ್ಬಲೈಫ್‌ 3ನೇ ಹಂತದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಹರ್ಬಲೈಫ್‌ ಹಾಗೂ ಸ್ಪೈಲ್‌ ಸಂಸ್ಥೆ ಸಾವಿ ರಕ್ಕೂ ಹೆಚ್ಚು ಮಕ್ಕಳಿಗೆ ಪೌಷ್ಠಿಕಾಂಶ ಆಹಾ ರದ ನೆರವು ನೀಡಿದೆ. ನಾನು ಆರು ವರ್ಷ ಗಳಿಂದ ಈ ಸಂಸ್ಥೆಯ ನೆರವು ಪಡೆಯು ತ್ತಿದ್ದೇನೆ’ ಎಂದೂ ಅವರ ಹೇಳಿದ್ದಾರೆ.

‘ಸೈನಾ ನೆಹ್ವಾಲ್‌, ಸಾನಿಯಾ ಮಿರ್ಜಾ ಅವರಂತೆ ಆಗುತ್ತೇನೆ ಎನ್ನುವುದು ಸುಲಭ. ಆದರೆ ಇದು ಕಷ್ಟದ ಹಾದಿ. ಮಕ್ಕಳಿಗೆ ನೀವು ಇದೇ ದಾರಿಯಲ್ಲಿ ಹೋಗಿ ಎಂದು ತಂದೆ ತಾಯಿ ಒತ್ತಡ ಹಾಕುವುದೂ ತಪ್ಪು. 

ನನ್ನ ಪೋಷಕರು ಯಾವತ್ತೂ ನನ್ನ ಮೇಲೆ ಒತ್ತಡ ಹೇರಲಿಲ್ಲ.  ಊಟ, ಆಟ ಎಲ್ಲವೂ ಮುಖ್ಯ.  ದೈಹಿಕವಾಗಿ ಸಮರ್ಥರಾಗಿರ ಬೇಕೆಂದರೆ ಸದಾ ಚಟುವಟಿಕೆ ಯಿಂದಿರಬೇಕು. ಇದಕ್ಕಾಗಿ ಪೌಷ್ಠಿಕಾಂಶ ಇರುವ ಆಹಾರವೂ ಮುಖ್ಯ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT