ADVERTISEMENT

‘ವಿಕಾಸ್‌ ಭಾರತದ ಹೆಮ್ಮೆ ’

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2014, 20:22 IST
Last Updated 1 ಆಗಸ್ಟ್ 2014, 20:22 IST

ಚಂಡೀಗಡ (ಪಿಟಿಐ): ಕಾಮನ್‌ವೆಲ್ತ್‌ ಕ್ರೀಡಾಕೂಟದ ಡಿಸ್ಕಸ್‌ ಎಸೆತ ಸ್ಪರ್ಧೆ ಯಲ್ಲಿ ಚಿನ್ನ ಜಯಿಸಿರುವ ಕರ್ನಾಟಕದ ವಿಕಾಸ್ ಗೌಡ ಸಾಧನೆಗೆ ಖ್ಯಾತ ಅಥ್ಲೀಟ್‌ ಮಿಲ್ಖಾ ಸಿಂಗ್‌ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

‘ಗ್ಲಾಸ್ಗೊದಲ್ಲಿ ಪದಕ ಗೆದ್ದ ಎಲ್ಲಾ ಕ್ರೀಡಾಪಟುಗಳು ಅಭಿನಂದನೆಗೆ ಅರ್ಹರು.  ಇವರು ನಿಜವಾದ ಭಾರತದ ಕ್ರೀಡಾ ರಾಯ ಭಾರಿಗಳು. ಈ ಸಾಧ ನೆಯ ಶ್ರೇಯ ಕ್ರೀಡಾಪಟುಗಳ ಪಾಲಕ ರಿಗೂ ಸಲ್ಲ ಬೇಕು. ಇವರೆಲ್ಲರ ನಡುವೆ ವಿಕಾಸ್‌ ಅವರು ಭಾರತ ಮಾತೆಯ ಹೆಮ್ಮೆಯ ಪುತ್ರರಾಗಿ ಕಂಗೊಳಿಸು ತ್ತಿದ್ದಾರೆ’ ಎಂದು ಮಿಲ್ಖಾ ಸಿಂಗ್‌ ಶ್ಲಾಘಿಸಿದ್ದಾರೆ.

‘ಮೊದಲ ಕಾಮನ್‌ವೆಲ್ತ್‌ ಕೂಟ ದಿಂದಲೂ ಅಥ್ಲೆಟಿಕ್ಸ್‌ನಲ್ಲಿ    ಭಾರತಕ್ಕೆ ಬಂಗಾರದ ಪದಕಗಳು ಬಂದಿದ್ದು ಕಡಿಮೆ. 2010ರಲ್ಲಿ ಡಿಸ್ಕಸ್‌ ಎಸೆತದಲ್ಲಿ ಕೃಷ್ಣಾ ಪೂನಿಯಾ ಬಂಗಾರ ಗೆದ್ದಿದ್ದರು. ನಂತರ 4X400ಮೀ. ಮಹಿಳಾ ರಿಲೇ ತಂಡ ಪದಕ ಜಯಿಸಿತು. ಆದರೆ, ಭಾರತದಂಥ ದೊಡ್ಡ ರಾಷ್ಟ್ರದಲ್ಲಿ ಕೆಲ ಅಥ್ಲೀಟ್‌ಗಳಿಗಷ್ಟೇ ಪದಕ ಗೆಲ್ಲಲು ಸಾಧ್ಯವಾಗುತ್ತಿದೆ. ಅಥ್ಲೆಟಿಕ್ಸ್‌ ಎಲ್ಲಾ ಕ್ರೀಡೆಗಳ ತಾಯಿ. ಆದ್ದರಿಂದ ಮುಂದೆ ಇನ್ನಷ್ಟು ಪದಕಗಳು ಬರಲಿ’ ಎಂದು ಮಿಲ್ಖಾ ಆಶಿಸಿದರು.

‘ವಿಕಾಸ್‌ ಸಾಧನೆ ಮೆಚ್ಚುವಂಥದ್ದು. ಈ ಸಾಧನೆಯಿಂದ ಸ್ಫೂರ್ತಿ ಪಡೆದು ಉಳಿದ ಕ್ರೀಡಾಪಟುಗಳು ಮುಂದಿನ ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆಲ್ಲ ಬೇಕು.’ ಎಂದು 1958ರ ಕಾಮನ್‌ವೆಲ್ತ್ ಕೂಟದಲ್ಲಿ ಚಿನ್ನ ಜಯಿಸಿದ್ದ ಮಿಲ್ಖಾ ಸಿಂಗ್‌ ಹಾರೈಸಿದರು.
ಕಾಮನ್‌ವೆಲ್ತ್‌ನ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್‌ ಎನ್ನುವ ಕೀರ್ತಿಯನ್ನು ಮಿಲ್ಖಾ ಸಿಂಗ್‌ ಹೊಂದಿದ್ದಾರೆ. ಕಾರ್ಡಿಫ್‌ನಲ್ಲಿ ನಡೆದ ಕೂಟದಲ್ಲಿ ಅವರು 400ಮೀ. ವಿಭಾಗದಲ್ಲಿ 46.71ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.