ADVERTISEMENT

ಪವನ್, ಸುಜಲ್ ನಾಲ್ಕನೇ ಸುತ್ತಿಗೆ

ಅಖಿಲ ಭಾರತ ಸಬ್ ಜೂನಿಯರ್ ರ‍್ಯಾಂಕಿಂಗ್ ಬ್ಯಾಡ್ಮಿಂಟನ್‌

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 19:57 IST
Last Updated 16 ಜನವರಿ 2018, 19:57 IST
15ರ ವಯೋಮಾನದ ಬಾಲಕರ ಸಿಂಗಲ್ಸ್‌ನಲ್ಲಿ ಆಂಧ್ರಪ್ರದೇಶದ ನಾಗ ಮಣಿಕಂಠ ಗಾದೆ ಎದುರು ಗೆದ್ದ ಕರ್ನಾಟಕದ ಲವ ಟಿ.ವಡಕಲ್ ಅವರ ಆಟದ ವೈಖರಿ ಪ್ರಜಾವಾಣಿ ಚಿತ್ರ/ಎಚ್‌.ಜಿ.ಪ್ರಶಾಂತ್‌
15ರ ವಯೋಮಾನದ ಬಾಲಕರ ಸಿಂಗಲ್ಸ್‌ನಲ್ಲಿ ಆಂಧ್ರಪ್ರದೇಶದ ನಾಗ ಮಣಿಕಂಠ ಗಾದೆ ಎದುರು ಗೆದ್ದ ಕರ್ನಾಟಕದ ಲವ ಟಿ.ವಡಕಲ್ ಅವರ ಆಟದ ವೈಖರಿ ಪ್ರಜಾವಾಣಿ ಚಿತ್ರ/ಎಚ್‌.ಜಿ.ಪ್ರಶಾಂತ್‌   

– ಸತೀಶ್‌ ಬಿ.

ಕಲಬುರ್ಗಿ: ಉತ್ತಮ ಆಟವಾಡಿದ ಕರ್ನಾಟಕದ ಪವನ್ ಅಲಂಕಾರ್‌ ಮತ್ತು ಎಸ್‌.ಸುಜಲ್ ಇಲ್ಲಿನ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಖಿಲ ಭಾರತ ಸಬ್ ಜೂನಿಯರ್ ರ‍್ಯಾಂಕಿಂಗ್ ಬ್ಯಾಡ್ಮಿಂಟನ್‌ ಟೂರ್ನಿಯ 15 ವರ್ಷದೊಳಗಿನವರ ಬಾಲಕರ ಸಿಂಗಲ್ಸ್‌ನಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿದರು.

ಪವನ್ ಅಲಂಕಾರ್‌ 15–8, 15–10ರಲ್ಲಿ ಮಧ್ಯಪ್ರದೇಶದ ಅಂಗದ್ ಮಚ್ಚಲ್ ಎದುರು, ಎಸ್‌. ಸುಜಲ್ 15–7, 15–10ರಲ್ಲಿ ಮಹಾರಾಷ್ಟ್ರದ ಪ್ರಜ್ವಲ್ ಸೋನವಾನೆ ವಿರುದ್ಧ ಜಯಿಸಿದರು.

ADVERTISEMENT

ಅದೇ ರೀತಿ ಲವ ಟಿ.ವಡಕಲ್ 15–13, 11–15, 21–20ರಲ್ಲಿ ಆಂಧ್ರಪ್ರದೇಶದ ನಾಗ ಮಣಿಕಂಠ ಗಾದೆ ಎದುರು ಅಮೋಘ ಜಯ ಸಾಧಿಸಿದರು. ಎಚ್‌.ವಿ.ಸಂತೃಪ್ತ್ 15–9, 15–5ರಿಂದ ಪುದುಚೆರಿಯ ಜಿ.ವಿಶ್ವೇಶ್ವರನ್ ಎದುರು, ತುಷಾರ್ ಸುವೀರ್‌ ಹರಿಯಾಣದ ಗಗನ್‌ ವಿರುದ್ಧ 16–14, 11–15, 15–11ರಲ್ಲಿ ಗೆದ್ದರು.

ಬಾಲಕಿಯರ  ಸಿಂಗಲ್ಸ್‌ನಲ್ಲಿ ಎ.ನೈಸಾ ಕಾರ್ಯಪ್ಪ ತೆಲಂಗಾಣದ ಡಿ.ವಿ.ಶ್ರುತಿ ಎದುರು 15–10, 8–15, 15–11ರಲ್ಲಿ ಗೆದ್ದು ನಾಲ್ಕನೇ ಸುತ್ತಿಗೆ ಲಗ್ಗೆ ಇಟ್ಟರು.

13 ವರ್ಷದೊಳಗಿನವರ ಬಾಲಕರ ಸಿಂಗಲ್ಸ್‌ನ ಎರಡನೇ ಸುತ್ತಿನಲ್ಲಿ ರಾಜ್ಯದ ಆರ್‌.ದರ್ಶೀಲ್ ಸೂರ್ಯಗೌಡ ಅವರು 15–13, 15–11ರಲ್ಲಿ ಕೇರಳದ ಪಾರ್ಥಿಪ್ ಯಶ್‌ ಗೆ ಸೋಲುಣಿಸಿದರು. ಆರ್‌.ರಕ್ಷಿತ್ ಸೂರ್ಯಗೌಡ 15–9, 15–13ರಲ್ಲಿ ತೆಲಂಗಾಣದ ದಿವ್ಯೇಶ್‌ ಜೈನ್ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.