ADVERTISEMENT

60 ದೇಶಗಳಲ್ಲಿ ದೋನಿ ಸಿನಿಮಾ ತೆರೆಗೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2016, 12:02 IST
Last Updated 25 ಸೆಪ್ಟೆಂಬರ್ 2016, 12:02 IST
60 ದೇಶಗಳಲ್ಲಿ ದೋನಿ ಸಿನಿಮಾ ತೆರೆಗೆ
60 ದೇಶಗಳಲ್ಲಿ ದೋನಿ ಸಿನಿಮಾ ತೆರೆಗೆ   

ಮುಂಬೈ:  ನೀರಜ್ ಪಾಂಡೆ ನಿರ್ದೇಶನದ ಟೀಮ್ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ದೋನಿ ಅವರ ಜೀವನಾಧರಿತ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.

‘ಎಂ.ಎಸ್ ದೋನಿ: ದಿ ಅನ್‌ಟೋಲ್ಡ್‌  ಸ್ಟೋರಿ’  ಎಂಬ ಹೆಸರಿನ ಸಿನಿಮಾ ತೆರೆಗೆ  ಬರುತ್ತಿದೆ.  ಈ   ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು  ಇದನ್ನು ಸುಮಾರು 30 ಲಕ್ಷ  ಮಂದಿ ವೀಕ್ಷಣೆ ಮಾಡಿದ್ದಾರೆ.  ಸುಶಾಂತ್ ಸಿಂಗ್ ರಜಪೂತ್ ಅವರು ದೋನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರವನ್ನು  4500 ಚಿತ್ರ ಮಂದಿರಗಳಲ್ಲಿ ಪ್ರದರ್ಶಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.  ಇದೇ ಸೆಪ್ಟೆಂಬರ್‌ 30 ರಂದು 60 ದೇಶಗಳಲ್ಲಿ ಈ ಸಿನಿಮಾ ತೆರೆ ಕಾಣುವ ಸಾಧ್ಯತೆಗಳಿವೆ ಎಂದು ಬಾಲಿವುಡ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT