ADVERTISEMENT

ಸೋತರೂ ಸ್ವಚ್ಛತೆ ಮರೆಯದ ಜಪಾನಿಗರು!

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 19:52 IST
Last Updated 3 ಜುಲೈ 2018, 19:52 IST
ಬೆಲ್ಜಿಯಂ ಎದುರಿನ ಪಂದ್ಯದ ನಂತರ ಜಪಾನ್ ತಂಡದ ಅಭಿಮಾನಿಯೊಬ್ಬರು ಗ್ಯಾಲರಿಯಲ್ಲಿ ಬಿದ್ದಿದ್ದ ತ್ಯಾಜ್ಯವನ್ನು ಸ್ವಚ್ಛಗೊಳಿಸಿದರು ಎಎಫ್‌ಪಿ ಚಿತ್ರ
ಬೆಲ್ಜಿಯಂ ಎದುರಿನ ಪಂದ್ಯದ ನಂತರ ಜಪಾನ್ ತಂಡದ ಅಭಿಮಾನಿಯೊಬ್ಬರು ಗ್ಯಾಲರಿಯಲ್ಲಿ ಬಿದ್ದಿದ್ದ ತ್ಯಾಜ್ಯವನ್ನು ಸ್ವಚ್ಛಗೊಳಿಸಿದರು ಎಎಫ್‌ಪಿ ಚಿತ್ರ   

ಮಾಸ್ಕೊ: ಸೋಮವಾರ ರಾತ್ರಿ ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲಿ ಸೋತ ಜಪಾನ್ ತಂಡವು ಈಗ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ!

ಜಪಾನ್ ತಂಡದ ಆಟಗಾರರು ಸೋಲಿನ ನಿರಾಶೆಯಲ್ಲಿದ್ದರೂ ತಮ್ಮ ಡ್ರೆಸ್ಸಿಂಗ್ ಕೋಣೆಯನ್ನು ಸ್ವಚ್ಛಗೊಳಿಸಲು ಮರೆಯಲಿಲ್ಲ. ಆಟಗಾರರು ಕೋಣೆಯನ್ನು ಸಂಪೂರ್ಣ ಶುಚಿಗೊಳಿಸಿದ್ದಾರೆ. ‘ನಮಗೆ ಉತ್ತಮ ಆದರಾತಿಥ್ಯ ನೀಡಿದ ನಿಮಗೆ ಧನ್ಯವಾದ’ ಎಂಬ ಒಕ್ಕಣೆ ಇರುವ ಪತ್ರವನ್ನೂ ಬರೆದಿಟ್ಟು ಹೋಗಿದ್ದಾರೆ.

ಇತ್ತ ಪ್ರೇಕ್ಷಕರ ಗ್ಯಾಲರಿಗಳಲ್ಲಿದ್ದ ಜಪಾನ್ ಅಭಿಮಾನಿಗಳು ಕೂಡ ಕಣ್ಣೀರು ಹಾಕುತ್ತಲೇ ತ್ಯಾಜ್ಯವಸ್ತುಗಳನ್ನು ತಮ್ಮ ಚೀಲಗಳಲ್ಲಿ ತುಂಬಿಕೊಂಡು ಹೊರನಡೆದರು. ಜಪಾನಿಗರ ಈ ನಡವಳಿಕೆಗೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಟ್ವಿಟರ್, ಫೆಸ್‌ಬುಕ್‌ಗಳಲ್ಲಿ ಬಹಳಷ್ಟು ಮಂದಿ, ‘ನೀವು ಪಂದ್ಯ ಸೋತಿದ್ದೀರಿ, ಆದರೆ ನಮ್ಮ ಹೃದಯ ಗೆದ್ದಿದ್ದೀರಿ’ ಎಂದು ಬರೆದಿದ್ದಾರೆ.

ADVERTISEMENT

ಲೀಗ್ ಹಂತದಲ್ಲಿ ಪ್ರತಿ ಪಂದ್ಯ ನಡೆದಾಗಲೂ ಜಪಾನ್ ಬೆಂಬಲಿಗರು ಗ್ಯಾಲರಿಗಳನ್ನು ಸ್ವಚ್ಛ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.