ADVERTISEMENT

ಕ್ರೀಡಾ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2017, 19:30 IST
Last Updated 30 ಏಪ್ರಿಲ್ 2017, 19:30 IST
ಕ್ರೀಡಾ ಕ್ವಿಜ್‌
ಕ್ರೀಡಾ ಕ್ವಿಜ್‌   

ಚೆನ್ನೈಯಲ್ಲಿ ಇದೇ ಏಪ್ರಿಲ್‌ 26ರಿಂದ 30ರವರೆಗೆ ನಡೆದ ಏಷ್ಯನ್‌ ಇಂಡಿವಿಜುವಲ್‌ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ ಭಾರತದ ಮಟ್ಟಿಗೆ ಹಲವು ಕಾರಣಗಳಿಗಾಗಿ ಮಹತ್ವದ್ದಾಗಿದೆ. ಏಷ್ಯನ್‌ ಸ್ಕ್ವಾಷ್‌ ಕುರಿತ ಕೆಲವು ಮಾಹಿತಿಗಳು ಇಲ್ಲಿವೆ.

1) ಏಷ್ಯನ್‌ ಸ್ಕ್ವಾಷ್‌ ಫೆಡರೇಷನ್‌ ಹುಟ್ಟು ಪಡೆದದ್ದು ಯಾವಾಗ?

2) ಈ ಫೆಡರೇಷನ್‌ನ ಐದು ಸ್ಥಾಪಕ ಸದಸ್ಯ ದೇಶಗಳಲ್ಲಿ ಭಾರತ ಇತ್ತೇ?

ADVERTISEMENT

3) ಈ ಫೆಡರೇಷನ್‌ನ ಮೊದಲ ಅಧ್ಯಕ್ಷರು ಯಾರು?

4) ಕರಾಚಿಯಲ್ಲಿ 1981ರಲ್ಲಿ ನಡೆದ ಮೊದಲ ಏಷ್ಯನ್‌ ಇಂಡಿವಿಜುವಲ್‌ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ ಪ್ರಶಸ್ತಿ ಗೆದ್ದವರು?

5) ಈ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ಭಾರತದ ಏಕೈಕ ಸ್ಕ್ವಾಷ್‌ ತಾರೆಯ ಹೆಸರೇನು?

6) ಏಷ್ಯನ್‌ ಸ್ಕ್ವಾಷ್‌ ಫೆಡರೇಷನ್‌ಗೆ 2001ರಿಂದ 2009ರವರೆಗೆ ಅಧ್ಯಕ್ಷರಾಗಿದ್ದ ಭಾರತೀಯ ಯಾರು?

7)  ಈ ಫೆಡರೇಷನ್‌ನ ಸದಸ್ಯ ರಾಷ್ಟ್ರಗಳ ಸಂಖ್ಯೆ ಎಷ್ಟು?

8) ಚೆನ್ನೈಯಲ್ಲಿ ಭಾನುವಾರ ಮುಗಿದ ಕೂಟವನ್ನು ಹೊರತು ಪಡಿಸಿ, ಈವರೆಗೆ ನಡೆದ 18 ಏಷ್ಯನ್‌ ಇಂಡಿವಿಜುವಲ್‌ ಚಾಂಪಿಯನ್‌ಷಿಪ್‌ಗಳಲ್ಲಿ ಪಾಕಿಸ್ತಾನ ಎಷ್ಟು ಸಲ ಪ್ರಶಸ್ತಿ ಗೆದ್ದಿದೆ?

9) ಏಷ್ಯನ್‌ ಸ್ಕ್ವಾಷ್‌ ಫೆಡರೇಷನ್‌ನ ಕೇಂದ್ರ ಕಚೇರಿ ಎಲ್ಲಿದೆ?

10) ಈ ಚಾಂಪಿಯನ್‌ಷಿಪ್‌ನ ಮೂರೂವರೆ ದಶಕಗಳ ಇತಿಹಾಸದಲ್ಲಿ ಭಾರತ ಎಷ್ಟು ಸಲ ಆತಿಥ್ಯ ವಹಿಸಿದೆ ?

***

ಉತ್ತರಗಳು

1) 29ನೇ ನವೆಂಬರ್‌ 1980

2)ಇಲ್ಲ

3) ಪಾಕಿಸ್ತಾನದ ಅನ್ವರ್‌ ಶಹೀಮ್‌

4) ಪಾಕಿಸ್ತಾನದ ಜಹಂಗೀರ್‌ ಖಾನ್‌

5) 1996ರಲ್ಲಿ  ಮಿಶಾ ಗ್ರೆವಾಲ್‌ 

6) 

ಎನ್‌.ರಾಮಚಂದ್ರನ್‌

7) 27

8) 9 ಸಲ

9) ಕ್ವಾಲಾಲಂಪುರ

10) ಮೂರು ಸಲ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.