ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2017, 19:30 IST
Last Updated 26 ಫೆಬ್ರುವರಿ 2017, 19:30 IST
1)  ಮಹಾತ್ಮ ಗಾಂಧೀಜಿ ಅವರು ದಕ್ಷಿಣಾ ಆಫ್ರಿಕಾದಲ್ಲಿ ಆರಂಭಿಸಿದ ಪತ್ರಿಕೆ ಯಾವುದು?
a) ಇಂಡಿಯನ್ ಒಪಿನಿಯನ್  
b) ಹರಿಜನ 
c) ಹಿಂದ್ ಸ್ವರಾಜ್                
d) ಸರ್ವೋದಯಾ
 
2) ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ 22  ಪೊಲೀಸರು ಸಜೀವ ದಹನಗೊಂಡ ಚೌರಿ ಚೌರಿ ಘಟನೆ ಯಾವ ರಾಜ್ಯದಲ್ಲಿ ನಡೆದಿತ್ತು?
a) ಉತ್ತರ ಪ್ರದೇಶ                  
b) ಹರಿಯಾಣ
c) ಗುಜರಾತ್                        
d) ರಾಜಸ್ತಾನ
 
3) 1929ರಲ್ಲಿ ನಡೆದ ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ ‘ಪೂರ್ಣ ಸ್ವರಾಜ್’ ಘೋಷಣೆಯನ್ನು ಮೊಟ್ಟಮೊದಲ ಬಾರಿಗೆ ಕೂಗಿದವರು ಯಾರು?
a) ಜವಾಹರ ಲಾಲ್ ನೆಹರೂ    
b) ಸುಭಾಷ್ ಚಂದ್ರಬೋಸ್
c) ಮೋತಿಲಾಲ್ ನೆಹರೂ        
d) ಬಿಪಿನ್ ಚಂದ್ರಪಾಲ್
 
4) ಮೊದಲನೇ ದುಂಡು ಮೇಜಿನ ಪರಿಷತ್ತಿನಲ್ಲಿ ಈ ಕೆಳಕಂಡ ಯಾವ ಪಕ್ಷ ಅಥವಾ ಸಂಘ ಭಾಗವಹಿಸಿರಲಿಲ್ಲ?
a) ಮುಸ್ಲಿಂ ಲೀಗ್                  
b) ಕಾಂಗ್ರೆಸ್ ಪಕ್ಷ 
c) ಹಿಂದೂ ಮಹಾಸಭಾ          
d) ಭಾರತೀಯ ಪ್ರಜಾಸತ್ತಾತ್ಮಕ ಸಂಘ
 
5) ಭಾರತದಲ್ಲಿ ಎರಡನೇ ಹಸಿರು ಕ್ರಾಂತಿಯನ್ನು 2005ರಲ್ಲಿ ಘೋಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಭಾರತದ ಪ್ರಧಾನಮಂತ್ರಿ ಯಾರಾಗಿದ್ದರು?
a) ಎ.ಬಿ. ವಾಜಪೇಯಿ          
b) ಪಿ.ವಿ. ನರಸಿಂಹರಾವ್
c) ಮನಮೋಹನ್ ಸಿಂಗ್      
d) ನರೇಂದ್ರ ಮೋದಿ
 
6) ಸ್ವಾತಂತ್ರ್ಯ ನಂತರದಲ್ಲಿ ಮೊಟ್ಟಮೊದಲ ಕೈಗಾರಿಕೆ ನೀತಿಯನ್ನು ಘೋಷಣೆ ಮಾಡಿದಾಗ ಭಾರತದ ಕೈಗಾರಿಕಮಂತ್ರಿ ಯಾರಾಗಿದ್ದರು?
a) ರಾಜೇಂದ್ರ ಪ್ರಸಾದ್                  
b) ಕೃಷ್ಣಮಾಚಾರಿ
c) ಶ್ಯಾಮ್ ಪ್ರಸಾದ್ ಮುಖರ್ಜಿ          
d) ಬಿ.ಆರ್. ಅಂಬೇಡ್ಕರ್
 
7) 1770ರಲ್ಲಿ ಕೋಲ್ಕತ್ತಾದಲ್ಲಿ ಸ್ಥಾಪನೆಯಾದ ಬಂಗಾಳದ ಮೊಟ್ಟಮೊದಲ ಬ್ಯಾಂಕ್ ಯಾವುದು ?
a) ಪಂಜಾಬ್ ನ್ಯಾಷನಲ್ ಬ್ಯಾಂಕ್    
b) ಬ್ಯಾಂಕ್ ಆಫ್ ಮದ್ರಾಸ್
c)  ಬ್ಯಾಂಕ್ ಆಫ್ ಬೆಂಗಾಲ್          
d) ಹಿಂದೂಸ್ಥಾನ್ ಬ್ಯಾಂಕ್
 
8)  ಭಾರತದ 16ನೇ ರಾಜ್ಯವಾಗಿ ರೂಪಗೊಂಡ ನಾಗಾಲ್ಯಾಂಡ್ ರಾಜ್ಯವನ್ನು ಯಾವ ರಾಜ್ಯದಿಂದ ಪ್ರತ್ಯೇಕಿಸಲಾಗಿದೆ?
a) ಹಿಮಾಚಲಾ ಪ್ರದೇಶ                
b) ಮಣಿಪುರ
c) ಪಶ್ಚಿಮ ಬಂಗಾಳ                      
d) ಅಸ್ಸಾಂ
 
9) 1951ರಲ್ಲಿ ಪ್ರಥಮ ಹಣಕಾಸು ಆಯೋಗವನ್ನು ರಚಿಸಲಾಯಿತು. ಈ ಹಣಕಾಸು ಆಯೋಗದ ಬಗ್ಗೆ ಸಂವಿಧಾನದ ಎಷ್ಟನೇ ವಿಧಿ ತಿಳಿಸುತ್ತದೆ?
a) 280ನೇ ವಿಧಿ                          
b) 290ನೇ ವಿಧಿ
c) 300ನೇ ವಿಧಿ                          
d) 310ನೇ ವಿಧಿ
 
10) ವಂಶವಾಹಿ (ಜೀನ್) ವ್ಯತ್ಯಾಸದಿಂದ ಬರುವ ರೋಗಗಳಲ್ಲಿ ಇದು ಕೂಡ ಒಂದು………..?
a) ಅಪಸ್ಮಾರ                                
b) ಹಿಮೋಫಿಲಿಯಾ
c) ಸಿಂಡ್ರೋಮ್                          
d) ಕ್ಷಯಾ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.