ADVERTISEMENT

ವಿಶ್ಲೇಷಣೆ ವಿವೇಚನೆ

ಯಶಸ್ಸಿನತ್ತ...

ಡಾ.ಫಕೀರಪ್ಪ ಕಾಗಿನೆಲಿ
Published 15 ಮಾರ್ಚ್ 2015, 19:30 IST
Last Updated 15 ಮಾರ್ಚ್ 2015, 19:30 IST

ಮಹಿಳೆಯರ ರಕ್ಷಣೆಗೆ ಹಿಮ್ಮತ್ ಆಪ್ ಬಿಡುಗಡೆ: ತುರ್ತು ಸಂಧರ್ಭದಲ್ಲಿ ಪೊಲೀಸರು, ಸಂಬಂಧಿಗಳು ಮತ್ತು  ಸೇಹಿತರ ಸಹಾಯ ಯಾಚಿಸುವ ಹಿಮ್ಮತ್ ಆಪ್ ಅನ್ನು  ದೆಹಲಿ ಪೊಲೀಸರು ಅಭಿವೃದ್ಧಿಪಡಿಸಿದ್ದಾರೆ.  ಇದೆ ರೀತಿಯಾಗಿ ಇನ್ನು ಕೆಲವು ಆ್ಯಪ್‌ ಬಳಕೆಯಲ್ಲಿವೆ. ಮುಖ್ಯವಾಗಿ nirbhaya app, circle of six aap, Hollaback app, bsafe, safetypin app, ifollow ಆ್ಯಪ್‌ಗಳ ಬಗ್ಗೆಯೂ ಕೇಳಬಹುದು. ಮಂಗಳಯಾನಕ್ಕೆ ಅಮೇರಿಕಾದ ವಾಷಿಂಗ್ಟನ್‌ ಲ್ಲಿರುವ ನ್ಯಾಷನಲ್ ಸ್ಟೇಸ್ ಸೂಸೈಟಿಯಿಂದ ಸ್ಟೇಸ್ ಪಯನಿರ್ಸ ಪ್ರಶಸ್ತಿ ಪ್ರಕಟ. ಈ ಕುರಿತು ಮಂಗಳಯಾನದ ವಿಶೇಷ ಅಧ್ಯಯನ ಬಹು ಮುಖ್ಯವಾದುದು.

ದೆಹಲಿಯನ್ನು ದೇಶದ ಮೊದಲ ಸ್ಮಾರ್ಟ್‌ ಸಿಟಿಯಾಗಿ ಅಭಿವೃದ್ಧಿ: ನರೇಂದ್ರ ಮೋದಿ ನೇತೃತ್ವದ ಸರಕಾರವು ದೇಶದಲ್ಲಿ 100 ನಗರಗಳನ್ನು ಸ್ಮಾರ್ಟ್‌ ಸಿಟಿಗಳಾಗಿ ಅಭಿವೃದ್ಧಿ ಪಡಿಸಲು ಯೋಜನೆಯನ್ನು  ಹಮ್ಮಿಕೊಂಡಿದೆ. 2013 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ, ಜೀವಮಾನ ಸಾಧನೆಗಾಗಿ ನೀಡುವ ಡಾ. ರಾಜಕುಮಾರ ಪ್ರಶಸ್ತಿಗೆ  ಹಿರಿಯ ನಟ ಶ್ರೀನಾಥ, ಪುಟ್ಟಣ್ಣ ಕಣಗಾಲ  ಪ್ರಶಸ್ತಿಗೆ ನಿರ್ದೇಶಕ ಪಿ.ಹೆಚ್. ವಿಶ್ವನಾಥ, ಡಾ. ವಿಷ್ಣುವರ್ಧನ್ ಪ್ರಶಸ್ತಿಗೆ ನಿರ್ಮಾಪಕ ಕೆ.ವಿ ಗುಪ್ತಾ ಆಯ್ಕೆಯಾಗಿದ್ದಾರೆ.

ಮುಂಬೈ ಮಾದರಿಯ 26/11ರೀತಿಯ ದಾಳಿಗೆ ಸಜ್ಜಾಗಿದ್ದ ಪಾಕಿಸ್ತಾನದ ಹಡಗನ್ನು ಭಾರತದ ಕರಾವಳಿ ಕಾವಲು ಪಡೆಯವರು ಸ್ಫೋಟಗೊಳಿಸಿದರು. ಗ್ರಾಮ ಪಂಚಾಯಿತಿ ಕಾಯ್ದೆಯ ತಿದ್ದುಪಡಿಗೆ ಶಾಸಕ ಕೆ.ಆರ್.ರಮೇಶ ಕುಮಾರ ನೇತೃತ್ವದಲ್ಲಿ ಸಮಿತಿ ರಚನೆ.  ಕರ್ನಾಟಕ  ಪಂಚಾಯಿತಿ ರಾಜ್ಯ ಕಾಯ್ದೆ -1993 ತಿದ್ದುಪಡಿ ಸಾಧ್ಯತೆ, ಈ ಕುರಿತು ಸಂವಿಧಾನದ ತಿದ್ದುಪಡಿ ಪರಿಚ್ಛೇದ 73, 74 ಹಾಗೂ ಬಲವಂತರಾಯ್ ಮೆಹ್ತಾ, ಮತ್ತು ಅಶೋಕ ಮೆಹ್ತಾ ಸಮಿತಿಗಳ ವರದಿ ಅಧ್ಯಯನ ಮಾಡಬೇಕಿರುವುದು ಅಗತ್ಯವಾಗಿದೆ. ಇವುಗಳ ಸ್ಥೂಲ ಪರಿಚಯವಿದ್ದಲ್ಲಿ ಅನುಕೂಲವಾಗುವುದು. 

ಚಾಮರಾಜನಗರ ಜ್ಯೋತಿಗೌಡನಪುರದಲ್ಲಿ ರಾಜ್ಯಮಟ್ಟದ ಬೌದ್ಧ ಮಹಾಸಮ್ಮೇಳನ ಜರುಗಿತು. ಪಹಲ್ ಎಂಬುದು ಎಲ್.ಪಿ.ಜಿ ಬಳಿಕೆದಾರರಿಗೆ ರಿಯಾಯಿತಿ ದರವನ್ನು ನೇರವಾಗಿ ಬಳಕೆದಾರರ ಬ್ಯಾಂಕ್‌ ಖಾತೆಗೆ ವರ್ಗಾಯಿಸುವ ಕೇಂದ್ರ ಸರಕಾರದ ಮಹಾತ್ವಾಕಾಂಕ್ಷೆಯ ಯೋಜನೆ. ಭಾರತೀಯ ಕ್ರೀಡಾ ಪ್ರಾಧಿಕಾರದ ಮಹಾನಿರ್ದೇಶಕ ಜೆ.ಜೆ. ಥಾಮ್ಸನ್ ರಾಜೀನಾಮೆ .

(ಮುಂದಿನ ವಾರ ಇನ್ನಷ್ಟು ಮಾಹಿತಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT