ADVERTISEMENT

ಇನ್‌ಬಾಕ್ಸ್‌ನ ಕಸದ ರಾಶಿ ಖಾಲಿ ಮಾಡಿ

ದಯಾನಂದ ಎಚ್‌.ಎಚ್‌.
Published 10 ಮೇ 2017, 19:30 IST
Last Updated 10 ಮೇ 2017, 19:30 IST
ಇನ್‌ಬಾಕ್ಸ್‌ನ ಕಸದ ರಾಶಿ ಖಾಲಿ ಮಾಡಿ
ಇನ್‌ಬಾಕ್ಸ್‌ನ ಕಸದ ರಾಶಿ ಖಾಲಿ ಮಾಡಿ   

ಇಮೇಲ್‌ ಬಳಸುವ ಬಹುತೇಕರ ಇನ್‌ಬಾಕ್ಸ್‌ನಲ್ಲಿ ಸಾವಿರಗಟ್ಟಲೆ ತೆರೆಯದ (ಅನ್‌ರೀಡ್‌) ಮೆಸೇಜ್‌ಗಳು ತುಂಬಿಕೊಂಡಿರುತ್ತವೆ. ಅಂದಂದಿನ ಮೆಸೇಜ್‌ಗಳನ್ನು ತೆರೆದು ನೋಡಿ ಬೇಕಿಲ್ಲದ ಮೆಸೇಜ್‌ಗಳನ್ನು ಡಿಲೀಟ್‌ ಮಾಡುವುದು ಒಳ್ಳೆಯ ಅಭ್ಯಾಸ. ಆದರೆ, ಈ ಅಭ್ಯಾಸವನ್ನು ಬಹುತೇಕರು ರೂಢಿಸಿಕೊಂಡಿರುವುದಿಲ್ಲ. ಹೀಗಾಗಿ ಅಂಥವರ ಇನ್‌ಬಾಕ್ಸ್‌ನಲ್ಲಿ ಸಾವಿರಾರು ಅನ್‌ರೀಡ್‌ ಮೆಸೇಜ್‌ಗಳು ತುಂಬಿಕೊಂಡಿರುತ್ತವೆ.

ಇನ್‌ಬಾಕ್ಸ್‌ನಲ್ಲಿ ಹೀಗೆ ಸಾವಿರಗಟ್ಟಲೆ ಅನ್‌ರೀಡ್‌ ಮೆಸೇಜ್‌ಗಳು ದಿನದಿಂದ ದಿನಕ್ಕೆ ತುಂಬಿಕೊಳ್ಳುತ್ತಾ ಹೋದರೆ ನಿಮ್ಮ ಇಮೇಲ್‌ ಸ್ಟೋರೇಜ್‌ ಸ್ಪೇಸ್‌ ಕಡಿಮೆಯಾಗುತ್ತಾ ಬರುತ್ತದೆ. ಗೂಗಲ್‌ ತನ್ನ ಮೇಲ್‌, ಡ್ರೈವ್‌ ಮತ್ತು ಫೋಟೊ ಸೇವೆಗಳೆಲ್ಲಾ ಸೇರಿ 15 ಜಿಬಿ ಸ್ಟೋರೇಜ್‌ ಸ್ಪೇಸ್‌ ಕೊಡುತ್ತಿದೆ. ನಿಮ್ಮ ಜಿಮೇಲ್‌ ಇನ್‌ಬಾಕ್ಸ್‌ನಲ್ಲಿ ಅನ್‌ರೀಡ್‌ ಮೆಸೇಜ್‌ಗಳು ಹೆಚ್ಚುತ್ತಾ ಹೋದಷ್ಟೂ ನಿಮ್ಮ ಮೇಲ್‌ನಲ್ಲಿ ಜಾಗದ ಕೊರತೆ ಉಂಟಾಗಬಹುದು.

ಹೀಗೆ ಬೇಕಿಲ್ಲದ ಸಾವಿರಾರು ಅನ್‌ರೀಡ್‌ ಮೆಸೇಜ್‌ಗಳು ನಿಮ್ಮ ಜಿಮೇಲ್‌ನ ಇನ್‌ಬಾಕ್ಸ್‌ನಲ್ಲಿ ಉಳಿದಿದ್ದರೆ ಅವನ್ನೆಲ್ಲಾ ಒಂದೇ ಬಾರಿಗೆ ಡಿಲೀಟ್‌ ಮಾಡುವ ಆಯ್ಕೆಯ ಬಗ್ಗೆ ಇಂದು ತಿಳಿಯೋಣ. ಇನ್‌ಬಾಕ್ಸ್‌ನಲ್ಲಿರುವ ಅನ್‌ರೀಡ್‌ ಮೆಸೇಜ್‌ಗಳೆಲ್ಲವನ್ನೂ ಒಮ್ಮೆಲೇ ಡಿಲೀಟ್‌ ಮಾಡಲು ಮೊದಲು ಜಿಮೇಲ್‌ಗೆ ಸೈನ್‌ಇನ್‌ ಆಗಿ.

ಮೇಲ್‌ ಪೇಜ್‌ನ ಮೇಲ್ಭಾಗದ ಸರ್ಚ್‌ ಬಾರ್‌ನಲ್ಲಿ in:inbox is:unread ಎಂದು ಟೈಪಿಸಿ ಎಂಟರ್‌ ಒತ್ತಿ. ಈಗ ಎಲ್ಲಾ ಅನ್‌ರೀಡ್‌ ಮೆಸೇಜ್‌ಗಳೂ ಕಾಣುತ್ತವೆ. ಈ ಎಲ್ಲಾ ಅನ್‌ರೀಡ್‌ ಮೆಸೇಜ್‌ಗಳೂ ಲಿಸ್ಟ್‌ ಆದ ಬಳಿಕ ಸೆಲೆಕ್ಟ್‌ ಆಲ್‌ ಮಾಡಿ, ಡಿಲೀಟ್‌ ಕೊಡಿ. ಈಗ ಎಲ್ಲಾ ಅನ್‌ರೀಡ್‌ ಮೆಸೇಜ್‌ಗಳೂ ಒಂದೇ ಬಾರಿ ಡಿಲೀಟ್‌ ಆಗುತ್ತವೆ.

ಹೀಗೆ ಎಲ್ಲಾ ಅನ್‌ರೀಡ್‌ ಮೆಸೇಜ್‌ಗಳನ್ನೂ ಒಮ್ಮೆಗೇ ಡಿಲೀಟ್‌ ಮಾಡುವ ಮುನ್ನ ನಿಮಗೆ ಬೇಕಿರುವ ಮೆಸೇಜ್‌ಗಳು ಡಿಲೀಟ್‌ ಆಗದಂತೆ ನೋಡಿಕೊಳ್ಳಿ. ಆಫೀಸ್‌ನ ಮೇಲ್‌, ಮುಖ್ಯವಾದ ಮೇಲ್‌ಗಳೂ ಅನ್‌ರೀಡ್‌ನಲ್ಲಿದ್ದರೆ ಒಮ್ಮೆ ಸರ್ಚ್‌ ಮಾಡಿ ನೋಡಿ. ಏಕೆಂದರೆ ಅನ್‌ರೀಡ್‌ ಮೆಸೇಜ್‌ಗಳೆಲ್ಲವನ್ನೂ ಒಮ್ಮೆಗೇ ಡಿಲೀಟ್‌ ಕೊಟ್ಟರೆ ಇವು ಬಿನ್‌ನಲ್ಲಿ ಉಳಿಯದೆ ಶಾಶ್ವತವಾಗಿ ಡಿಲೀಟ್‌ ಆಗುತ್ತವೆ. ಹೀಗೆ ಅನ್‌ರೀಡ್‌ ಮೆಸೇಜ್‌ಗಳೆಲ್ಲವನ್ನೂ ಡಿಲೀಟ್ ಮಾಡಿದ ಬಳಿಕ ನಿಮ್ಮ ಗೂಗಲ್‌ ಸ್ಪೋರೇಜ್‌ ಸ್ಪೇಸ್‌ ಹೆಚ್ಚಾಗುತ್ತದೆ.

ಅಂದಂದಿನ ಮೆಸೇಜ್‌ಗಳನ್ನು ಅಂದಂದೇ ತೆರೆದು ನೋಡಿ, ಬೇಕಿಲ್ಲದ ಮೆಸೇಜ್‌ಗಳನ್ನು ಡಿಲೀಟ್‌ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಇದರಿಂದ ನಿಮ್ಮ ಗೂಗಲ್‌ ಸ್ಟೋರೇಜ್‌ ಸ್ಪೇಸ್‌ ಉಳಿಸುವ ಜತೆಗೆ ಒಂದೊಳ್ಳೆ ಇ–ಅಭ್ಯಾಸವೂ ನಿಮ್ಮದಾಗುತ್ತದೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.