ADVERTISEMENT

ಚೀನಾ ಏರ್‌ಲೈನ್ಸ್‌ನಲ್ಲೀಗ ‘ವೈಫೈ’ ಸೌಲಭ್ಯ!

​ಪ್ರಜಾವಾಣಿ ವಾರ್ತೆ
Published 29 ಜುಲೈ 2014, 19:30 IST
Last Updated 29 ಜುಲೈ 2014, 19:30 IST

ಚೀನಾ ಏರ್‌ಲೈನ್ಸ್‌ ಪ್ರಯಾಣಿಕರಿಗೆ ವೈಫೈ (ವೈರ್‌ಲೆಸ್‌ ಫಿಡಿಲಿಟಿ) ಸೇವೆ ಒದಗಿಸಲು ಸಜ್ಜಾಗಿದೆ. ಚೀನಾದ ವೆಸ್ಟ್‌ ಏರ್‌ಲೈನ್ಸ್‌ನಲ್ಲಿ   ಪ್ರಾಯೋಗಿಕ ಹಂತದ ಮೊದಲ ವೈಫೈ ಸೇವೆ ಲಭ್ಯವಿದೆ. ಶಾಂಘೈ–ಬೀಜಿಂಗ್‌ ಮಾರ್ಗದಲ್ಲಿ ಸಂಚರಿಸುವ ಈ ‘ಏರ್‌ಬಸ್‌ ಎ330’ರಲ್ಲಿ ಮೊದಲ ಬಾರಿಗೆ ಪರೀಕ್ಷಾರ್ಥ ವೈಫೈ ಸೇವೆ ಒದಗಿಸಲಾಗಿದೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸಾರ್ವಜನಿಕ ಬಳಕೆಗೆ ದೇಶದ ವಾಯುಯಾನ ವಿಧೇಯಕದಿಂದ ಇನ್ನಷ್ಟೇ ಪರ ವಾನಗಿ ದೊರೆಯಬೇಕಿದೆ. ವೈಫೈ ಬಳಕೆಗೆ ಸಂಬಂಧಿಸಿದ ನಿಯಮ ರೂಪಿಸುವ ಸಲು ವಾಗಿ ಪ್ರಯಾಣಿಕರ ಪ್ರತಿಕ್ರಿಯೆ ಪಡೆಯಲು ಪರೀಕ್ಷಾರ್ಥ ಪ್ರಯೋಗ ಸಹಾಯಕವಾಗಲಿದೆ ಎಂದು ಕ್ಸಿನುವಾ ತಿಳಿಸಿದೆ. ಈ ವೈಫೈ ಸೇವೆ ಸ್ಯಾಟಲೈಟ್‌ನಿಂದ ಕಾರ್ಯಾಚರಿಸಲಿದ್ದು, ಹೆಚ್ಚಿನ ವ್ಯಾಪ್ತಿಯ ಬ್ಯಾಂಡ್‌ವಿಡ್ತ್‌ ಮತ್ತು ಸಿಗ್ನಲ್‌ ಸ್ಥಿರತೆ ಹೊಂದಿದೆ ಎಂದು ಚೀನಾ ಏರ್‌ಲೈನ್ಸ್‌ ಕ್ಸಿನುವಾ ಸುದ್ದಿಸಂಸ್ಥೆಗೆ ತಿಳಿಸಿದೆ.

ಈ ವೈಫೈ ಸೇವೆಯಿಂದಾಗಿ ಚೀನಾ ವಿಮಾನ ಪ್ರಯಾಣಿಕರು ಶೀಘ್ರವೇ ಸ್ಮಾರ್ಟ್‌ಫೋನ್‌ ಬಳಸುವಂತಾಗಲಿದೆ. ಈ ಮೊದಲು 2011ರಲ್ಲಿ ಚೀನಾ ವೈಫೈ ಇಂಟ್ರಾ ನೆಟ್‌ (ಸಂಸ್ಥೆಯೊಳಗಿನ ಆಂತರಿಕ ಸಂಪರ್ಕ) ಪರೀಕ್ಷೆ ನಡೆಸಿತ್ತು. ಅಂದರೆ ಏರ್‌ಲೈನ್ಸ್‌್ ನೆಟ್‌ವರ್ಕ್‌  ಬಳಸಲು ಮಾತ್ರ ಅವಕಾಶ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT