ADVERTISEMENT

ತುರ್ತು ಸಮಯಕ್ಕೆ ಬೇಸಿಕ್‌ ಎಚ್‌ಟಿಎಂಎಲ್‌

ದಯಾನಂದ ಎಚ್‌.ಎಚ್‌.
Published 5 ಮೇ 2017, 18:43 IST
Last Updated 5 ಮೇ 2017, 18:43 IST
ತುರ್ತು ಸಮಯಕ್ಕೆ ಬೇಸಿಕ್‌ ಎಚ್‌ಟಿಎಂಎಲ್‌
ತುರ್ತು ಸಮಯಕ್ಕೆ ಬೇಸಿಕ್‌ ಎಚ್‌ಟಿಎಂಎಲ್‌   

ಅಂತರ್ಜಾಲ ಬಳಸುವವರಿಗೆಲ್ಲಾ ಒಂದಲ್ಲಾ ಒಂದು ಬಾರಿ ದುರ್ಬಲ ನೆಟ್‌ವರ್ಕ್‌ (ಸ್ಲೋ ಕನೆಕ್ಷನ್‌) ಸಮಸ್ಯೆ ಕಾಡಿಯೇ ಇರುತ್ತದೆ. ಈ ರೀತಿಯ ದುರ್ಬಲ ನೆಟ್‌ವರ್ಕ್‌ನಲ್ಲಿರುವಾಗ ಇಮೇಲ್‌ ಚೆಕ್‌ ಮಾಡಬೇಕಾಗಿ ಬಂದರೆ ನೀವು ಸೈನ್‌ಇನ್‌ ಆದ ಎಷ್ಟು ಹೊತ್ತಾದರೂ ಪೇಜ್‌ ಲೋಡ್‌ ಆಗುವುದಿಲ್ಲ.

ಅಲ್ಲದೆ, ಕೆಲವೊಮ್ಮೆ ಪೇಜ್‌ ಲೋಡ್‌ ಆಗದೆ ಅರ್ಧದಲ್ಲೇ ನಿಂತುಬಿಡುವ ಸಾಧ್ಯತೆಯೂ ಇರುತ್ತದೆ. ಹೀಗೆ ದುರ್ಬಲ ನೆಟ್‌ವರ್ಕ್‌ ರೇಂಜ್‌ನಲ್ಲಿರುವಾಗ ಇಮೇಲ್‌ ಚೆಕ್‌ ಮಾಡಲು ಇರುವ ಒಂದು ತುರ್ತು ಸಹಾಯಕ ವ್ಯವಸ್ಥೆಯ ಬಗ್ಗೆ ಇಂದು ತಿಳಿಯೋಣ.

ಜಿಮೇಲ್‌ಗೆ ನೀವು ಸೈನ್‌ಇನ್‌ ಆಗುವ ವೇಳೆ ದುರ್ಬಲ ನೆಟ್‌ವರ್ಕ್‌ ಇದ್ದರೂ ಬೇಸಿಕ್‌ ಎಚ್‌ಟಿಎಂಎಲ್‌ ಮೂಲಕ ಮೇಲ್‌ ಚೆಕ್‌ ಮಾಡಬಹುದು. ನೀವು ದುರ್ಬಲ ನೆಟ್‌ವರ್ಕ್‌ನ ರೇಂಜ್‌ನಲ್ಲಿದ್ದರೂ ಜಿಮೇಲ್‌ಗೆ ಸೈನ್‌ಇನ್‌ ಆಗಿ. ಸೈನ್‌ಇನ್‌ ಆದ ಪೇಜ್‌ ಲೋಡ್‌ ಆಗಲು ಸಮಯ ತೆಗೆದುಕೊಳ್ಳುತ್ತಿರುತ್ತದೆ. ಆಗ ಪೇಜ್‌ನ ಕೆಳ ಭಾಗದಲ್ಲಿ ಕಾಣುವ load basic HTML ಮೇಲೆ ಕ್ಲಿಕ್‌ ಮಾಡಿ. ಆಗ ಜಿಮೇಲ್‌ನ ಬೇಸಿಕ್‌ ಎಚ್‌ಟಿಎಂಎಲ್‌ ಪೇಜ್‌ ಲೋಡ್‌ ಆಗುತ್ತದೆ.

ADVERTISEMENT

ಸ್ಲೋ ಕನೆಕ್ಷನ್‌ ಇದ್ದಾಗ ಈ ಬೇಸಿಕ್‌ ಎಚ್‌ಟಿಎಂಎಲ್‌ ಹೆಚ್ಚು ಸಹಾಯಕ್ಕೆ ಬರುತ್ತದೆ. ಬೇಸಿಕ್ ಎಚ್‌ಟಿಎಂಎಲ್‌ ಲೋಡ್‌ ಆದ ಪೇಜ್‌ ಸ್ಟ್ಯಾಂಡರ್ಡ್‌ ವ್ಯೂ ಪೇಜ್‌ಗಿಂತ ಭಿನ್ನವಾಗಿರುತ್ತದೆ. ನೀವು ಜಿಮೇಲ್‌ನಲ್ಲಿ ಸೆಟ್‌ ಮಾಡಿಕೊಂಡಿರುವ ಟೆಂಪ್ಲೇಟ್‌ ಇಲ್ಲಿ ಕಾಣಿಸುವುದಿಲ್ಲ. ಸ್ಲೋ ಕನೆಕ್ಷನ್‌ನಲ್ಲೂ ಇಮೇಲ್‌ ಚೆಕ್ ಮಾಡಲು ಹಾಗೂ ತುರ್ತು ಮೇಲ್‌ ಕಳಿಸಲು ಮಾತ್ರ ಈ ಬೇಸಿಕ್‌ ಎಚ್‌ಟಿಎಂಎಲ್‌ ಸಹಾಯಕ.

ನಿಮ್ಮ ಇಮೇಲ್‌ ಐಡಿಗೆ ಬಂದಿರುವ ಅಟ್ಯಾಚ್‌ಮೆಂಟ್‌ಗಳು ಇಲ್ಲಿ ಕಾಣುತ್ತವೆ. ಆದರೆ, ಸ್ಲೋ ಕನೆಕ್ಷನ್‌ ಇದ್ದ ಕಾರಣ ಅವು ಡೌನ್‌ಲೋಡ್‌ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಹೀಗಾಗಿ ತಕ್ಷಣದ ಟೆಕ್ಸ್ಟ್ ರಿಪ್ಲೇ ಅಥವಾ ಟೆಕ್ಟ್ಸ್‌ ಮೇಲ್‌ ಕಳಿಸಲು ಈ ಬೇಸಿಕ್‌ ಎಚ್‌ಟಿಎಂಎಲ್‌ ಪೇಜ್‌ನ ನೆರವು ಪಡೆಯಬಹುದು.

ನೀವು ಎಂದಾದರೂ ಸ್ಲೋ ಕನೆಕ್ಷನ್‌ ರೇಂಜ್‌ನಲ್ಲಿದ್ದರೆ ಆಗ ಬೇಸಿಕ್‌ ಎಚ್‌ಟಿಎಂಎಲ್‌ ಪೇಜ್‌ ಲೋಡ್‌ ಮಾಡಿ ಇಮೇಲ್‌ ಚೆಕ್‌ ಮಾಡಿ ಅಥವಾ ತುರ್ತು ಇಮೇಲ್‌ ಬರೆಯಿರಿ. ಅಂದಹಾಗೆ ನೀವು ಬೇಸಿಕ್‌ ಎಚ್‌ಟಿಎಂಎಲ್ ವ್ಯೂ ಪೇಜ್‌ನಲ್ಲಿದ್ದಾಗಲೇ ನಿಮ್ಮ ನೆಟ್‌ವರ್ಕ್‌ ವೇಗ ಹೆಚ್ಚಾಗಿದ್ದರೆ ಜಿಮೇಲ್‌ನ ಮೇಲ್ಭಾಗದಲ್ಲಿ ಕಾಣುವ Switch to standard view ಮೇಲೆ ಕ್ಲಿಕ್‌ ಮಾಡಿ. ಈಗ ನಿಮ್ಮ ಸಾಮಾನ್ಯ ಜಿಮೇಲ್‌ ಪೇಜ್‌ ನಿಮಗೆ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.