ADVERTISEMENT

ದತ್ತಾಂಶ ಶೇಖರಣೆಯ ಹಾದಿ

ಗುಲ್ ಮೊಹರ್

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2015, 19:30 IST
Last Updated 31 ಮಾರ್ಚ್ 2015, 19:30 IST

ಕಂಪ್ಯೂಟರ್‌ ಬಳಕೆ ಆರಂಭವಾದ ಮೇಲೆ ದತ್ತಾಂಶ ಶೇಖರಣೆ, ಸುರಕ್ಷತೆಗೆ ಒಂದು ಹೊಸ ವ್ಯವಸ್ಥೆ ಸಿಕ್ಕಿದಂತಾಯಿತು.  ಹಾರ್ಡ್‌ ಡಿಸ್ಕ್‌ಗಳಲ್ಲಿ ಕಡತಗಳು, ಫೋಟೊ, ವಿಡಿಯೊಗಳನ್ನೂ ಶೇಖರಿಸಿಡಬಹುದು. ಹಾರ್ಡ್‌ಡಿಸ್ಕ್‌ನ ಶೇಖರಣಾ ಸಾಮರ್ಥ್ಯ ಹೆಚ್ಚಿದ್ದಷ್ಟೂ ಗರಿಷ್ಠ ದತ್ತಾಂಶ ಶೇಖರಣೆ ಸಾಧ್ಯ. ಈ ದತ್ತಾಂಶಗಳನ್ನು ಬೈಟ್‌ಗಳಲ್ಲಿ ಲೆಕ್ಕಹಾಕಲಾಗುತ್ತದೆ. ಈಗಂತೂ ಟೆರಾ ಬೈಟ್‌ (ಟಿಬಿ) ಲೆಕ್ಕದಲ್ಲಿ ಹಾರ್ಡ್ ಡಿಸ್ಕ್‌ಗಳು ಸಿಗುವುದರಿಂದ ಅವುಗಳ ದತ್ತಾಂಶ ಶೇಖರಣೆ ಸಾಮರ್ಥ್ಯವೂ ಹೆಚ್ಚಿರುತ್ತದೆ.

ಹೀಗೆ ಶೇಖರಣೆಯಾದ ದತ್ತಾಂಶವನ್ನು ಬೇರೆಡೆಗೆ ಸಾಗಿಸಲು ಮೊದಲು ಪ್ಲಾಪಿ ಡಿಸ್ಕ್‌ ಬಳಸುತ್ತಿದ್ದೆವು. ಅದರ ಗರಿಷ್ಠ ಶೇಖರಣಾ ಸಾಮರ್ಥ್ಯ ಇದ್ದಿದ್ದು 1.44 ಎಂಬಿ ಮಾತ್ರ. 1988ರಲ್ಲಿ  ಐಬಿಎಂ 2.88 ಎಂಬಿ ಪ್ಲಾಪಿ ಡಿಸ್ಕ್ ಪರಿಚಯಿಸಿತಾದರೂ ಅದು ಯಶಸ್ಸನ್ನು ಕಾಣಲೇ ಇಲ್ಲ. ನಂತರದಲ್ಲಿ ಸಿ.ಡಿ. ಡಿ.ವಿ.ಡಿ. ಬಂದವು. ಆದರೆ ಇವುಗಳಲ್ಲಿ ಒಮ್ಮೆ ದತ್ತಾಂಶ ತುಂಬಿದರೆ ಅದನ್ನು ಅಳಿಸಿ ಆ ಜಾಗದಲ್ಲಿ ಹೊಸ ದತ್ತಾಂಶ ತುಂಬಲು ಸಾಧ್ಯವಾಗುತ್ತಿರಲಿಲ್ಲ. 

ನಂತರ ಬಂದ ರಿರೈಟೆಬಲ್‌ ಸಿ.ಡಿ ಮತ್ತು ಡಿ.ವಿ.ಡಿಗಳು ಆ ಸಮಸ್ಯೆ ನಿವಾರಿಸಿದವು. ಪೆನ್‌ಡ್ರೈವ್‌, ಮೆಮೊರಿ ಕಾರ್ಡ್‌ ಪ್ರವೇಶದಿಂದ ದತ್ತಾಂಶ ಶೇಖರಣೆ ಮತ್ತು ಬೇಕೆಂದಲ್ಲಿಗೆ ಕೊಂಡೊಯ್ಯುವುದು ಮತ್ತಷ್ಟು ಸರಳ ವಾಯಿತು. ಆರಂಭದಲ್ಲಿ ಇವುಗಳು ದುಬಾರಿಯಾಗಿದ್ದವು. ಆದರೆ ಇದೀಗ ಕೈಗೆಟುಕುವ ಬೆಲೆಗೆ ಲಭ್ಯವಿವೆ. ಬಹುಬಗೆ ಬಳಕೆಯೂ ಸಾಧ್ಯವಿದೆ. ಹೀಗೆ ಪೆನ್‌ಡ್ರೈವ್‌ ಅಥವಾ ಬಾಹ್ಯ ಹಾರ್ಡ್‌ಡಿಸ್ಕ್‌ ಗಳಲ್ಲಿ ಶೆಖರಿಸಿಕೊಂಡು ದತ್ತಾಂಶಗಳನ್ನು ಸಾಗಿಸುವುದು ಸುಲಭವಾಗಿದೆ. ಆದರೆ, ಒಂದೊಮ್ಮೆ ದತ್ತಾಂಶ ಶೇಖರಿಸಿಕೊಂಡು ಅದನ್ನು ಜತೆಯಲ್ಲಿ ಇಟ್ಟು ಕೊಳ್ಳುವುದನ್ನೇ ಮರೆತು ಬಿಟ್ಟರೆ? ಪೆನ್‌ಡ್ರೈವ್, ಬಾಹ್ಯ ಹಾರ್ಡ್‌ ಡಿಸ್ಕ್‌ಗಳು ಇದ್ದೂ ಇಲ್ಲದಂತೆಯೇ ಸರಿ. ಕೆಲಸವನ್ನೂ ಮಾಡಲಾಗುವುದಿಲ್ಲ.

ಇಂತಹ ಸಮಸ್ಯೆ ನಿವಾರಿಸಲೆಂದೇ ಕ್ಲೌಡ್‌ ಸ್ಟೋರೇಜ್‌ ಆರಂಭವಾಗಿದೆ. ಇಂಟರ್‌ನೆಟ್‌ ಸಂಪರ್ಕ ಹೊಂದಿರುವ ಕಂಪ್ಯೂಟರಿನ ನೆರವಿನಿಂದ ದತ್ತಾಂಶ ಗಳನ್ನು ಕ್ಲೌಡ್‌ ಸ್ಟೊರೇಜ್‌ ಸೇವೆ ನೀಡುವ ಕಂಪೆನಿಗಳ ಸೇವ್‌ ಮಾಡಿಬಿಡಬಹುದು. ನಂತರ ಬೇಕೆಂದಾಗ ಅದನ್ನು ತೆರೆದು ತಿದ್ದು,ವ ವರ್ಗಾಯಿಸುವ ಕೆಲಸ ಮಾಡಬಹುದು. ಒಂದು ರೀತಿಯಲ್ಲಿ ನಮ್ಮ ಇ–ಮೇಲ್‌ನಂತೆಯೇ ಕಾರ್ಯ ನಿರ್ವಹಿಸುತ್ತದೆ.

 Dropbox, Google Drive, OneDrive,iCloud.. ಹೀಗೆ ಇನ್ನೂ ಅನೇಕ ಕ್ಲೌಡ್‌ ಸ್ಟೋರೇಜ್‌ ಸೇವೆಗಳಿಗೆ. ಈ ಕಂಪೆನಿಗಳು ತಮ್ಮ ಸರ್ವರ್‌ಗಳಲ್ಲಿ ಗ್ರಾಹಕರಿಗೆ ಸ್ಥಳಾವಕಾಶ ಕೊಡುತ್ತವೆ. ಅವುಗಳಲ್ಲಿ ಗ್ರಾಹಕರು ದತ್ತಾಂಶ ಶೇಖರಿಸಿಡ ಬಹುದು. ಕ್ಲೌಡ್‌ ಸ್ಟೊರೇಜ್‌ ಸೇವೆ ಆಯ್ಕೆ ಮಾಡಿಕೊಳ್ಳುವಾಗಲೂ ಹೆಚ್ಚಿನ ಎಚ್ಚರಿಕೆ ವಹಿಸಲೇಬೇಕು. ಉಚಿತವಾಗಿ ಸಿಗುವ ಸೇವಗಳನ್ನು ಬಳಸಿದರೆ ದತ್ತಾಂಶಕ್ಕೆ ಅಪಾಯ ಹೆಚ್ಚಿರುತ್ತದೆ. ಕಂಪೆನಿಯ ವಿಶ್ವಾಸಾರ್ಹತೆ ಗಮನಿಸಿ ಸೇವೆಗೆ ಮುಂದಾಗುವುದು ಒಳಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.