ADVERTISEMENT

ನೀರಿನ ಮೇಲೆ ಸಾಗುವ ಟ್ಯಾಕ್ಸಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2018, 19:30 IST
Last Updated 5 ಜೂನ್ 2018, 19:30 IST
ಸೀ ಬಬಲ್ಸ್‌ಕಂಪನಿಯ ವಾಟರ್‌ ಟ್ಯಾಕ್ಸಿ
ಸೀ ಬಬಲ್ಸ್‌ಕಂಪನಿಯ ವಾಟರ್‌ ಟ್ಯಾಕ್ಸಿ   

ವಾಟರ್‌ ಟ್ಯಾಕ್ಸಿ ಹಲವು ದೇಶಗಳಲ್ಲಿ ಈಗಾಗಲೇ ಜನಪ್ರಿಯವಾಗಿದೆ. ಜಲಸಂಪನ್ಮೂಲ ಎಲ್ಲೆಲ್ಲಿ ಲಭ್ಯವಿದೆಯೊ ಅಲ್ಲೆಲ್ಲ ನೀರಿನ ಮೇಲೆ ಸಾಗುವ ಟ್ಯಾಕ್ಸಿಗಳನ್ನು ಕಾಣಬಹುದಾಗಿದೆ. ರಸ್ತೆ ಮೇಲಿನ ಪ್ರಯಾಣಕ್ಕಿಂತ ನೀರಿನ ಮೇಲಿನ ಪ್ರಯಾಣವು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಇದೊಂದು ಮೋಜಿನ ಸವಾರಿಯಂತೆ.

ಈಗ ಈ ವಾಟರ್‌ ಟ್ಯಾಕ್ಸಿಗೆ ಫ್ರಾನ್ಸ್‌ನ ಸ್ಟಾರ್ಟ್ ಅಫ್‌ ಸೀ ಬಬಲ್ಸ್‌ ಸೇರ್ಪಡೆಯಾಗಿದೆ. ಇತ್ತೀಚೆಗೆ ಇದು ತನ್ನದೇ ವಾಟರ್‌ ಟ್ಯಾಕ್ಸಿಯನ್ನು ಪರಿಚಯಿಸಿದೆ. ಮೊಟ್ಟೆಯಾಕಾರದ ಈ ಟ್ಯಾಕ್ಸಿಗಳು ನಗರದ ಹಲವು ಭಾಗಗಳಿಗೆ ಸಂಪರ್ಕ ಕಲ್ಪಿಸಲು ಮುಂದಾಗಿವೆ. ನೀರಿನ ಮಟ್ಟಕ್ಕಿಂತ ಸ್ಪಲ್ಪ ಮೇಲಕ್ಕೆ ಸಾಗುವುದು ಈ ಟ್ಯಾಕ್ಸಿಗಳ ವಿಶೇಷ.

ಅಲನ್ ಮತ್ತು ಆ್ಯಂಡ್ರೂಸ್‌ ಬ್ರಿಂಗ್‌ಡಾಲ್‌ ಎಂಬುವವರು ಈ ‘ಸೀ ಬಬಲ್ಸ್‌ ಸ್ಟಾರ್ಟ್‌ಅಪ್’ ಅನ್ನು 2016ರಲ್ಲಿ ಆರಂಭಿಸಿದರು. ಡ್ರೋನ್‌ ತಯಾರಿಕಾ ಕಂಪನಿ ಮತ್ತು ಫ್ರಾನ್ಸ್‌ ಸರ್ಕಾರ ಸಹ ಈ ಸ್ಟಾರ್ಟ್‌ಅಪ್‌ಗೆ ಹಣಕಾಸಿನ ನೆರವು ಒದಗಿಸಿವೆ. ಸಿಯಾನೆ ನದಿಯಲ್ಲಿ 12ಕ್ಕೂ ಹೆಚ್ಚು ಟ್ಯಾಕ್ಸಿಗಳನ್ನು ಕಾರ್ಯಾರಂಭಿಸುವುದು ಈ ಕಂಪನಿಯ ಉದ್ದೇಶವಾಗಿದೆ.

ADVERTISEMENT

ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯಲ್ ಮ್ಯಾಕ್ರನ್‌ ಸಹ ಈ ರೀತಿಯ ಸ್ಟಾರ್ಟ್‌ಅಪ್‌ಗಳ ಬೆಂಬಲಕ್ಕೆ ನಿಂತಿದ್ದಾರೆ. ಇವರು ಹಣಕಾಸು ಸಚಿವರಾಗಿದ್ದಾಗ ಇಂತಹ ಹೊಸ ಪ್ರಯೋಗಗಳಿಗೆ ಪ್ರೋತ್ಸಾಹ ನೀಡಿದ್ದರು. ಪ್ಯಾರಿಸ್‌ ಮೇಯರ್‌ ಅನ್ನೆ ಹಿಡಾಲ್ಗೊ ಅವರು ಸೀ ಬಬಲ್‌ ಯೋಜನೆಗೆ ಸಹಕಾರ ನೀಡುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.