ADVERTISEMENT

ಭೂಮಿಕಾ ಲಲಿತಪ್ರಬಂಧ ಸ್ಪರ್ಧೆ - 2017

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2016, 19:30 IST
Last Updated 16 ಡಿಸೆಂಬರ್ 2016, 19:30 IST
ಭೂಮಿಕಾ ಲಲಿತಪ್ರಬಂಧ ಸ್ಪರ್ಧೆ - 2017
ಭೂಮಿಕಾ ಲಲಿತಪ್ರಬಂಧ ಸ್ಪರ್ಧೆ - 2017   

ಭಾವಲೋಕಕ್ಕೆ ನೀಡುವ ಅಕ್ಷರಸ್ಪಂದನವೇ ಲಲಿತಪ್ರಬಂಧ. ನಿಮ್ಮ ಹೃದಯದ ತುಡಿತ, ಭಾವದ ಮಿಡಿತ, ಆಲೋಚನೆಯ ಅಮೃತ ಬರಹವಾಗಿ ಬದುಕಲಿ. ನಿಮ್ಮ ಭಾವಕೋಶದ ಪದರಗಳು ಪ್ರಬಂಧವಾಗಿ ಅರಳಲಿ. ನಿಮ್ಮ ಭಾವನೆಗಳನ್ನು ಹದವಾಗಿಯೂ ಸುಂದರವಾಗಿಯೂ ಪ್ರಕಟಪಡಿಸಲು ಲಲಿತಪ್ರಬಂಧ ಉಚಿತವಾದ ಪ್ರಕಾರ. ನೀವೂ ಲಲಿತಪ್ರಬಂಧವನ್ನು ಬರೆದು ನಮಗೆ ಕಳುಹಿಸಬಹುದು. ಪ್ರತಿ ವರ್ಷದಂತೆ ಈ ವರ್ಷವೂ ಪ್ರಜಾವಾಣಿ ‘ಸಂಕ್ರಾಂತಿ ಲಲಿತಪ್ರಬಂಧ ಸ್ಪರ್ಧೆ’ಯನ್ನು ಆಯೋಜಿಸಿದೆ. ಇದರಲ್ಲಿ  ಮಹಿಳೆಯರೆಲ್ಲರೂ ಭಾಗವಹಿಸಬಹುದು.

ಪ್ರಬಂಧಗಳು ನಮ್ಮನ್ನು ತಲುಪಬೇಕಾದ ಅಂತಿಮ ದಿನಾಂಕ: ಡಿಸೆಂಬರ್‌ 20, 2016

ಬಹುಮಾನಗಳ ವಿವರ:
ಮೊದಲನೆಯ ಬಹುಮಾನ ₹ 7,500
ಎರಡನೆಯ ಬಹುಮಾನ ₹ 5,000
ಮೂರನೆಯ ಬಹುಮಾನ ₹ 2.500

ADVERTISEMENT

ಸ್ಪರ್ಧೆಯ ನಿಯಮಗಳು
*ನಿಮ್ಮ ಬರಹ ಲಲಿತಪ್ರಬಂಧದ ಪ್ರಕಾರಕ್ಕೆ ಸೇರುವಂತಿಬೇಕು.
*ಸ್ವತಂತ್ರ ರಚನೆಯಾಗಿರಬೇಕು.
*ಬ್ಲಾಗ್‌, ಸಾಮಾಜಿಕ ಜಾಲತಾಣ ಸೇರಿದಂತೆ ಯಾವ ಮಾಧ್ಯಮದಲ್ಲೂ ಪ್ರಬಂಧ ಪ್ರಕಟ/ಪ್ರಸಾರ ಆಗಿರಕೂಡದು.
*ಅಂತಿಮ ದಿನಾಂಕದ ಬಳಿಕ ಬಂದ ಪ್ರಬಂಧಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
*‘ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್ ಲಿಮಿಟೆಡ್‌’ನ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ.
*ಬಹುಮಾನಿತ ಪ್ರಬಂಧಗಳನ್ನು ಯಾವುದೇ ಸ್ವರೂಪದಲ್ಲಿ, ಯಾವಾಗ ಬೇಕಾದರೂ ಬಳಸುವ ಹಕ್ಕುಗಳನ್ನು ‘ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್ ಲಿಮಿಟೆಡ್‌’ ಕಾಯ್ದಿರಿಸಿಕೊಂಡಿದೆ; ಸಂಪಾದಕರ ತೀರ್ಮಾನವೇ ಅಂತಿಮ.
*ಪ್ರಬಂಧಗಳು ಒಂದು ಸಾವಿರ ಪದಗಳನ್ನು ಮೀರದಂತಿರಲಿ.
*ನುಡಿ, ಬರಹ ಅಥವಾ ಯೂನಿಕೋಡ್‌ಗಳಲ್ಲಿ ಪ್ರಬಂಧಗಳನ್ನು ಕಳುಹಿಸಬಹುದು.
ಇ–ಮೇಲ್: bhoomika@prajavani.co.in

*ನಿಮ್ಮ ಇತ್ತೀಚಿನ ಭಾವಚಿತ್ರ, ವಿಳಾಸ, ದೂರವಾಣಿ ವಿವರಗಳು ಕಡ್ಡಾಯ.
*ತೀರ್ಪುಗಾರರ ನಿರ್ಣಯವೇ ಅಂತಿಮ; ಪತ್ರವ್ಯವಹಾರಕ್ಕೆ ಅವಕಾಶವಿಲ್ಲ.
*ಪ್ರಬಂಧಗಳನ್ನು ಹಿಂದಿರುಗಿಸಲಾಗುವುದಿಲ್ಲ.
*ಬಹುಮಾನಿತ ಪ್ರಬಂಧಗಳನ್ನು ಭೂಮಿಕಾದಲ್ಲಿ ಪ್ರಕಟಿಸಲಾಗುವುದು.

ವಿಳಾಸ: ಸಂಪಾದಕರು, ಭೂಮಿಕಾ, ಪ್ರಜಾವಾಣಿ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು– 560 001

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.