ADVERTISEMENT

ವಿವೇಕದ ಬರಹ

ಪತ್ರ ಭೂಮಿಕೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2016, 19:30 IST
Last Updated 7 ಅಕ್ಟೋಬರ್ 2016, 19:30 IST

ಎ. ಪಿ. ಅಶ್ವಿನ್ ಕುಮಾರ್ ಅವರ ‘ಗಾಂಧೀ ಸ್ವರಣೇಯ ನೋಂಪಿಯ ಕತೆ’ ಲೇಖನ ಓದಿ ಮಹದಾನಂದವಾಯಿತು. ಇತ್ತೀಚಿನ ದಿನಗಳಲ್ಲಿ ಗಾಂಧೀಜಿ ಬಗ್ಗೆ ಮಾತ್ರವಲ್ಲ, ಯಾರ ಬಗ್ಗೆಯೂ ಇಷ್ಟು ಗಂಭೀರವಾದ ಲೇಖನವನ್ನು ಓದಿರಲಿಲ್ಲ. ಬರಹಕ್ಕೂ ಭಕ್ತಿ ಬೇಕು, ಜೊತೆಗೆ ತಾದಾತ್ಮ್ಯವೂ ಬೇಕು.

ಗಾಂಧೀಜಿ ಬಗ್ಗೆ ಮಾತನಾಡುವಾಗ ನೆಹರೂ ಅವರನ್ನು ಟೀಕಿಸುವುದು, ನೆಹರೂ ಬಗ್ಗೆ ಬರೆಯುವಾಗ ಗಾಂಧೀಜಿಯವರನ್ನು ಟೀಕಿಸುವುದು, ಅಂಬೇಡ್ಕರ್‌ ಬಗ್ಗೆ ಬರೆಯುವಾಗ ಗಾಂಧೀ–ನೆಹರೂ ಅವರನ್ನು ಟೀಕಿಸುವುದು ನಡೆದೇ ಇದೆ.

ಪ್ರಸ್ತುತ ಲೇಖನದಲ್ಲಿ ಇನ್ನೊಬ್ಬರನ್ನು ಟೀಕಿಸದೆ, ಭಕ್ತಿಯಿಂದಲೇ ಗಾಂಧಿಜಿಯವರನ್ನು ಟೀಕಿಸಿದ್ದಾರೆ. ಆದರೆ ಅದರಲ್ಲಿ ತಾದಾತ್ಮ್ಯದ ವಿವೇಕವಿದೆ. ಉಳಿದವರೆಲ್ಲರನ್ನೂ ಸಮಾನದೃಷ್ಟಿಯ ಕಾಣೂವ ವಿವೇಕವೂ ಲೇಖಕರಲ್ಲಿ ಇದೆ. ಗಾಂಧೀ ಸ್ಮರಣೆಯ ದಿನ ಗಾಂಧಿಯೊಳಗಿನ ಗಾಂಧಿಯನ್ನು ದರ್ಶನ ಮಾಡಿಸಿದ ದಾರ್ಶನಿಕ ದೃಷ್ಟಿಗೆ ಅಭಿನಂದನೆ.
–ಅರ್ಜುನ ತಾ.ಕೋರಟಕರ, ಜಮಖಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.