ADVERTISEMENT

ಪೌರತ್ವ ಮಸೂದೆ ವಿರೋಧಿಸಿ ಅಸ್ಸಾಂ ಉದ್ವಿಗ್ನ: ವಿಮಾನ ಸೇವೆ ರದ್ದು

ಪಿಟಿಐ
Published 12 ಡಿಸೆಂಬರ್ 2019, 12:43 IST
Last Updated 12 ಡಿಸೆಂಬರ್ 2019, 12:43 IST
   

ನವದೆಹಲಿ:ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿಅಸ್ಸಾಂನಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ವಿಮಾನ ಸೇವೆಗಳು ರದ್ದಾಗಿವೆ.

ಇಂಡಿಗೊ, ವಿಸ್ತಾರ, ಏರ್ ಇಂಡಿಯಾ ಮತ್ತು ಸ್ಪೈಸ್ ಜೆಟ್ ವಿಮಾನ ಸಂಸ್ಥೆಗಳು ಗುರುವಾರವಿಮಾನ ಸೇವೆರದ್ದು ಮಾಡಿವೆ. ಅದೇ ವೇಳೆ ಗೋ ಏರ್ ಮತ್ತು ಏರ್ ಏಷ್ಯಾ ಇಂಡಿಯಾ ವಿಮಾನವು ಪ್ರಯಾಣ ದಿನಾಂಕ ಬದಲಿಸಿದರೆ ಯಾವುದೇ ಶುಲ್ಕ ಪಡೆಯುವುದಿಲ್ಲ ಎಂದು ಹೇಳಿವೆ.

ಗುವಾಹಟಿ ಮತ್ತು ದಿಬ್ರುಗಡ್‌ದಿಂದ ಹೊರಡುವ ಕೆಲವು ವಿಮಾನಗಳನ್ನು ರದ್ದು ಮಾಡಲಾಗಿದೆ ಎಂದು ಇಂಡಿಗೊ ವಕ್ತಾರರುಹೇಳಿದ್ದಾರೆ. ಈ ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸಾಗಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಇದಕ್ಕಾಗಿ ಹೆಚ್ಚಿನ ದರ ಪಡೆಯುವುದಿಲ್ಲ ಎಂದಿದೆಇಂಡಿಗೊ.

ಅಸ್ಸಾಂನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿರುವುದರಿಂದ ಸರ್ಕಾರದ ಸಲಹೆ ಮೇಲೆಗೆ ನಾವು ವಿಮಾನ ಸೇವೆ ರದ್ದು ಮಾಡಿದ್ದೇವೆ ಎಂದು ವಿಸ್ತಾರ ವಿಮಾನ ಸಂಸ್ಥೆ ಹೇಳಿದೆ. UK725 (IXB-DIB) ಮತ್ತು UK726 (DIB-IXB) ವಿಮಾನವನ್ನು ರದ್ದು ಮಾಡಲಾಗಿದೆ. ಡಿಸೆಂಬರ್ 15 ಭಾನುವಾರದವರೆಗೆ ಗುವಾಹಟಿ ಮತ್ತು ದಿಬ್ರುಗಡ್ನಡುವಿನ ವಿಮಾನಯಾನದ ಟಿಕೆಟ್ ರದ್ದು ಅಥವಾ ಪ್ರಯಾಣದ ದಿನಾಂಕ ಬದಲಾಯಿಸುವುದಾದರೆ ಅದಕ್ಕೆ ಯಾವುದೇ ಶುಲ್ಕ ಪಡೆಯುವುದಿಲ್ಲ ಎಂದು ವಿಸ್ತಾರ ವಿಮಾನ ಸಂಸ್ಥೆ ಟ್ವೀಟಿಸಿದೆ.

ಕೊಲ್ಕತ್ತ ಮತ್ತು ದಿಬ್ರುಗಡ್ನಡುವಿನವಿಮಾನಗಳನ್ನು ಮಾತ್ರ ರದ್ದು ಮಾಡಲಾಗಿದೆ ಎಂದು ಏರ್ ಇಂಡಿಯಾ ವಕ್ತಾರ ಹೇಳಿದ್ದಾರೆ.

ಗುವಾಹಟಿಗೆ ಹೋಗುವ ಮತ್ತು ಬರುವ ಪ್ರಯಾಣಿಕರು ಪ್ರಯಾಣದ ದಿನಾಂಕ ಬದಲಾವಣೆ ಅಥವಾ ಟಿಕೆಟ್ ಮರು ನಿಗದಿ ಮಾಡುವ ಯಾವುದೇ ಪ್ರಕ್ರಿಯೆಗೆ ಶುಲ್ಕ ಪಡೆಯುವುದಿಲ್ಲ ಎಂದು ಗೋ ಏರ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.