ADVERTISEMENT

ಟಾಪ್‌ ಯೋಜನೆಗೆ ಅಂಕಿತಾ ಹೆಸರು ಸೇರ್ಪಡೆ

ಪಿಟಿಐ
Published 28 ಏಪ್ರಿಲ್ 2018, 19:30 IST
Last Updated 28 ಏಪ್ರಿಲ್ 2018, 19:30 IST
ಅಂಕಿತಾ ರೈನಾ
ಅಂಕಿತಾ ರೈನಾ   

ನವದೆಹಲಿ: ಟೆನಿಸ್‌ ಆಟಗಾರ್ತಿ ಅಂಕಿತಾ ರೈನಾ ಅವರನ್ನು ಶನಿವಾರ ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಮ್‌ (ಟಾಪ್‌) ಯೋಜನೆಗೆ ಸೇರ್ಪಡೆ ಮಾಡಲಾಗಿದೆ.

ಅಂಕಿತಾ ಅವರು ಫೆಡರೇಷನ್‌ ಕಪ್‌ ಮತ್ತು ವೃತ್ತಿಪರ ಸರ್ಕಿಟ್‌ನಲ್ಲಿ ಅಮೋಘ ಆಟ ಆಡಿ ಗಮನ ಸೆಳೆದಿದ್ದರು. ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾಗಿದ್ದ ಸಿಂಗಲ್ಸ್‌ ವಿಭಾಗದ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 197ನೇ ಸ್ಥಾನಕ್ಕೇರಿದ್ದರು. ಈ ಮೂಲಕ ರ‍್ಯಾಂಕಿಂಗ್‌ನಲ್ಲಿ ಅಗ್ರ 200ರೊಳಗೆ ಸ್ಥಾನ ಗಳಿಸಿದ ಭಾರತದ ಮೂರನೇ ಆಟಗಾರ್ತಿ
ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT