ADVERTISEMENT

ಭಾರತದಲ್ಲಿ ಉದ್ಯೋಗಿಗಳಿಗೆ ಶೇ 8.6ರಷ್ಟು ವೇತನ ಹೆಚ್ಚಳ: ಡೆಲಾಯ್ಟ್ ಸಮೀಕ್ಷೆ

ಪಿಟಿಐ
Published 20 ಸೆಪ್ಟೆಂಬರ್ 2021, 11:21 IST
Last Updated 20 ಸೆಪ್ಟೆಂಬರ್ 2021, 11:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತದ ಕಾರ್ಪೊರೇಟ್ ಕಂಪನಿಗಳು ತಮ್ಮ ಉದ್ಯೋಗಿಗಳ ವೇತನವನ್ನು 2021ರಲ್ಲಿ ಸರಾಸರಿ ಶೇಕಡ 8ರಷ್ಟು ಹೆಚ್ಚಳ ಮಾಡಿದ್ದು, 2022ರಲ್ಲಿ ವೇತನವನ್ನು ಸರಾಸರಿ ಶೇ 8.6ರಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಡೆಲಾಯ್ಟ್‌ ಕಂಪನಿಯ ಸಮೀಕ್ಷೆಯು ಹೇಳಿದೆ.

ಆರ್ಥಿಕತೆಯು ಚೇತರಿಸಿಕೊಳ್ಳುತ್ತಿದ್ದು, ಕಂಪನಿಗಳ ವಿಶ್ವಾಸವೂ ವೃದ್ಧಿಸುತ್ತಿದೆ. ಹೀಗಾಗಿ ಕಂಪನಿಗಳು 2022ರಲ್ಲಿ ಈ ಪ್ರಮಾಣದ ವೇತನ ಹೆಚ್ಚಳ ಮಾಡುವ ನಿರೀಕ್ಷೆ ಇದೆ ಎಂದು ಡೆಲಾಯ್ಟ್ ಹೇಳಿದೆ.

ಡೆಲಾಯ್ಟ್‌ ವರ್ಕ್‌ಫೋರ್ಸ್‌ ಆ್ಯಂಡ್‌ ಇನ್‌ಕ್ರಿಮೆಂಟ್‌ ಟ್ರೆಂಡ್ಸ್‌ ಸರ್ವೆ 2021ರ ಪ್ರಕಾರ, 2021ರಲ್ಲಿ ಶೇ 92ರಷ್ಟು ಕಂಪನಿಗಳು ಶೇ 8ರಷ್ಟು ವೇತನ ಏರಿಕೆ ಮಾಡಿವೆ. 2020ರಲ್ಲಿ ಶೇ 60ರಷ್ಟು ಕಂಪನಿಗಳು ಶೇ 4.4ರಷ್ಟು ವೇತನ ಹೆಚ್ಚಳ ಮಾಡಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.