ADVERTISEMENT

ಗರಿಷ್ಠ ಮಟ್ಟಕ್ಕೆ ನಿಫ್ಟಿ, ಸೆನ್ಸೆಕ್ಸ್

ಪಿಟಿಐ
Published 15 ಸೆಪ್ಟೆಂಬರ್ 2021, 11:21 IST
Last Updated 15 ಸೆಪ್ಟೆಂಬರ್ 2021, 11:21 IST
   

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ 476 ಅಂಶ ಏರಿಕೆ ಕಂಡು, ಇದುವರೆಗಿನ ಗರಿಷ್ಠ ಮಟ್ಟವಾದ 58,723 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ವಹಿವಾಟಿನ ನಡುವಿನಲ್ಲಿ 58,777 ಅಂಶಗಳಿಗೆ ಏರಿಕೆ ಕಂಡಿತ್ತು.

ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 139 ಅಂಶ ಹೆಚ್ಚಳ ಆಗಿ, 17,519 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ಇದು ನಿಫ್ಟಿ ತಲುಪಿರುವ ಇದುವರೆಗಿನ ಗರಿಷ್ಠ ಮಟ್ಟ. ವಹಿವಾಟಿನ ನಡುವಿನಲ್ಲಿ ನಿಫ್ಟಿ 17,532 ಅಂಶಗಳಿಗೆ ಒಮ್ಮೆ ತಲುಪಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT