ADVERTISEMENT

ಸಣ್ಣ ಉಳಿತಾಯ ಬಡ್ಡಿ ಕಡಿತ

ಪಿಟಿಐ
Published 31 ಮಾರ್ಚ್ 2021, 20:57 IST
Last Updated 31 ಮಾರ್ಚ್ 2021, 20:57 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಸುಕನ್ಯಾ ಸಮೃದ್ಧಿ ಯೋಜನೆ, ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ) ಸೇರಿದಂತೆ ಹಲವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ವಾರ್ಷಿಕ ಬಡ್ಡಿ ದರವನ್ನು ಕಡಿಮೆ ಮಾಡಲಾಗಿದೆ. ಪರಿಷ್ಕೃತ ಬಡ್ಡಿ ದರಗಳು ಏಪ್ರಿಲ್‌ 1ರಿಂದ (ಗುರುವಾರ) ಅನ್ವಯ ಆಗಲಿವೆ.

ಪಿಪಿಎಫ್‌ ಬಡ್ಡಿ ದರ ಕೂಡ ಇಳಿಕೆ ಆಗಿದೆ. ಈ ಇಳಿಕೆಗಳು ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ (2021ರ ಜೂನ್‌ 30ರವರೆಗೆ) ಜಾರಿಯಲ್ಲಿ ಇರಲಿವೆ. ಕಿಸಾನ್ ವಿಕಾಸ ಪತ್ರ ಹೂಡಿಕೆಯ ಅವಧಿ ಇದುವರೆಗೆ 124 ತಿಂಗಳು ಆಗಿತ್ತು. ಇನ್ನು ಮುಂದೆ ಅದು 138 ತಿಂಗಳ ಅವಧಿಯ ಹೂಡಿಕೆ ಆಗಲಿದೆ.

ಸಣ್ಣ ಉಳಿತಾಯ ಯೋಜನೆಗಳ ಮೇಲೆ ಗರಿಷ್ಠ ಶೇ1.1ರವರೆಗೆ ಬಡ್ಡಿ ಇಳಿಕೆ ಆಗಿದೆ. ಈ ಯೋಜನೆಗಳ ಮೇಲಿನ ಬಡ್ಡಿಯನ್ನು ಪ್ರತಿ ಮೂರು ತಿಂಗಳಿಗೆ ಒಮ್ಮೆ ಪರಿಷ್ಕರಣೆ ಮಾಡಲಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.