ADVERTISEMENT

ಹುಬ್ಬಳ್ಳಿ: 10 ಆಮ್ಲಜನ ಸಾಂದ್ರಕ ಕೊಡುಗೆ

​ಪ್ರಜಾವಾಣಿ ವಾರ್ತೆ
Published 30 ಮೇ 2021, 10:21 IST
Last Updated 30 ಮೇ 2021, 10:21 IST
ಹುಬ್ಬಳ್ಳಿಯ ಎಸ್.ಎಸ್. ಶೆಟ್ಟರ್ ಫೌಂಡೇಷನ್ ವತಿಯಿಂದ ರಾಷ್ಟೋತ್ಥಾನ ರಕ್ತ ನಿಧಿ ಕೇಂದ್ರಕ್ಕೆ 10 ಆಮ್ಲಜನಕ ಸಾಂದ್ರಕಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು ಭಾನುವಾರ ಹಸ್ತಾಂತರಿಸಿದರು
ಹುಬ್ಬಳ್ಳಿಯ ಎಸ್.ಎಸ್. ಶೆಟ್ಟರ್ ಫೌಂಡೇಷನ್ ವತಿಯಿಂದ ರಾಷ್ಟೋತ್ಥಾನ ರಕ್ತ ನಿಧಿ ಕೇಂದ್ರಕ್ಕೆ 10 ಆಮ್ಲಜನಕ ಸಾಂದ್ರಕಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು ಭಾನುವಾರ ಹಸ್ತಾಂತರಿಸಿದರು   

ಹುಬ್ಬಳ್ಳಿ: ಕೋವಿಡ್–19 ರೋಗಿಗಳಿಗೆ ಆಮ್ಲಜನಕ ಸೌಲಭ್ಯ ಕಲ್ಪಿಸುವುದಕ್ಕಾಗಿ ನಗರದ ಎಸ್.ಎಸ್. ಶೆಟ್ಟರ್ ಫೌಂಡೇಷನ್ ವತಿಯಿಂದ ರಾಷ್ಟೋತ್ಥಾನ ರಕ್ತ ನಿಧಿ ಕೇಂದ್ರಕ್ಕೆ 10 ಲೀಟರ್ ಸಾಮರ್ಥ್ಯದ 10 ಆಮ್ಲಜನಕ ಸಾಂದ್ರಕಗಳನ್ನು ಭಾನುವಾರ ನೀಡಲಾಯಿತು.‌

ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ಯಮ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಜಗದೀಶ ಶೆಟ್ಟರ್ ತಮ್ಮ ಗೃಹ ಕಚೇರಿಯಲ್ಲಿ ಭಾನುವಾರ ಆಮ್ಲಜನಕ ಸಾಂದ್ರಕಗಳನ್ನು ಹಸ್ತಾಂತರಿಸಿದರು.

ರಕ್ತ ನಿಧಿ ಕೇಂದ್ರದ ದತ್ತಮೂರ್ತಿ ಕುಲಕರ್ಣಿ, ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಸಾವಕಾರ, ಸಂಕಲ್ಪ ಶೆಟ್ಟರ್, ಸಂತೋಷ ಚವ್ಹಾಣ, ಗೋಪಾಲ ಬದ್ದಿ, ಅವಿನಾಶ ಹರಿವಾಣ, ಅಶೋಕ ವಾಲ್ಮೀಕಿ, ವಿರೂಪಾಕ್ಷ ರಾಯನಗೌಡರ, ರಜತ್ ಸಿಂಗ್ ಹಜಾರೆ‌ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.