ADVERTISEMENT

16.28 ಲಕ್ಷ ಜನರಿಗೆ ಕೋವಿಡ್ ತಡೆ ಲಸಿಕೆ

60 ವರ್ಷ ಮೇಲಿನ ಶೇ 99.05 ರಷ್ಟು ಜನರಿಗೆ ಮೊದಲ ಡೋಸ್‌

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 3:57 IST
Last Updated 4 ಸೆಪ್ಟೆಂಬರ್ 2021, 3:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆ.1 ರವರೆಗೆ 12,27,410 ಜನರಿಗೆ ಮೊದಲ ಡೋಸ್‌ ಹಾಗೂ 4,01,381 ಜನರಿಗೆ ಎರಡನೇ ಡೋಸ್‌ ಸೇರಿದಂತೆ ಒಟ್ಟು 16,28,791 ಜನರಿಗೆ ಕೋವಿಡ್–19 ತಡೆ ಲಸಿಕೆ ನೀಡಲಾಗಿದೆ.

ಈ ಪೈಕಿ 60 ವರ್ಷ ಮೇಲಿನವರಿಗೆ ಮೊದಲ ಡೋಸ್‌ ಶೇ 99.05 ಹಾಗೂ ಎರಡನೇ ಡೋಸ್‌ ಶೇ 57.20 ರಷ್ಟು ಸಾಧನೆ ಮಾಡಲಾಗಿದೆ. ಮಂಗಳೂರು, ಬಂಟ್ವಾಳ, ಪುತ್ತೂರು ತಾಲ್ಲೂಕಿನ ಎಲ್ಲ ಹಿರಿಯ ನಾಗರಿಕರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಬೆಳ್ತಂಗಡಿಯಲ್ಲಿ ಶೇ 94.82, ಸುಳ್ಯ ತಾಲ್ಲೂಕಿನಲ್ಲಿ ಶೇ 95 ರಷ್ಟು ಹಿರಿಯರಿಗೆ ಮೊದಲ ಡೋಸ್‌ ಲಸಿಕೆ ಹಾಕಲಾಗಿದೆ.

ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಶೇ 96.74, ಎರಡನೇ ಡೋಸ್‌ ಶೇ 68.44 ರಷ್ಟು ಸಾಧನೆ ಮಾಡಲಾಗಿದೆ. ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಡೋಸ್‌ನಲ್ಲಿ ಶೇ 100 ರಷ್ಟು ಸಾಧನೆಯಾಗಿದ್ದರೆ, ಎರಡನೇ ಡೋಸ್‌ ಶೇ 55.16 ರಷ್ಟು ಜನರಿಗೆ ನೀಡಲಾಗಿದೆ. 18–44 ವರ್ಷದೊಳಗಿನ ಶೇ 54.46 ರಷ್ಟು ಮಂದಿಗೆ ಮೊದಲ ಡೋಸ್‌, ಶೇ 14.30 ರಷ್ಟು ಜನರಿಗೆ ಎರಡನೇ ಡೋಸ್ ನೀಡಲಾಗಿದೆ. 45–59 ವರ್ಷದೊಳಗಿನ ಶೇ 83.66 ರಷ್ಟು ಜನರಿಗೆ ಮೊದಲ ಡೋಸ್, ಶೇ 42.60 ರಷ್ಟು ಜನರಿಗೆ ಎರಡನೇ ಡೋಸ್ ನೀಡಲಾಗಿದೆ.

ADVERTISEMENT

ಕೋವಿಶೀಲ್ಡ್‌ ಲಸಿಕೆ: 45–59 ವರ್ಷದೊಳಗಿನ ಒಟ್ಟು 3,14,536 ಜನರು ಮೊದಲ ಡೋಸ್, 1,20,506 ಜನರಿಗೆ ಎರಡನೇ ಡೋಸ್‌ ಲಸಿಕೆ ನೀಡಲಾಗಿದೆ. 60 ವರ್ಷ ಮೇಲಿನ 1,92,473 ಜನರಿಗೆ ಮೊದಲ ಡೋಸ್‌ ಹಾಗೂ 1,03,036 ಜನರಿಗೆ ಎರಡನೇ ಡೋಸ್ ಲಸಿಕೆ ಹಾಕಲಾಗಿದೆ.

ಕೋವ್ಯಾಕ್ಸಿನ್‌: 45–59 ವರ್ಷ ದೊಳಗಿನ 32,980 ಮಂದಿ ಮೊದಲ ಡೋಸ್, 27,213 ಮಂದಿ ಎರಡನೇ ಡೋಸ್‌ ಲಸಿಕೆ ಪಡೆದಿದ್ದಾರೆ. 60 ವರ್ಷ ಮೇಲಿನವರಲ್ಲಿ 24,892 ಜನರು ಮೊದಲ ಡೋಸ್‌ ಹಾಗೂ 21,177 ಜನರು ಎರಡನೇ ಡೋಸ್ ಲಸಿಕೆ ತೆಗೆದುಕೊಂಡಿದ್ದಾರೆ.

ಸ್ಫುಟಿಕ್‌ ವಿ: 45–59 ವರ್ಷದೊಳಗಿನ 613 ಮಂದಿ ಮೊದಲ ಡೋಸ್‌ ಹಾಗೂ 569 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದು, 60 ವರ್ಷ ಮೇಲಿನ 257 ಮಂದಿ ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ.

ಆರು ಗ್ರಾಮಗಳಲ್ಲಿ ಶೇ 100 ಸಾಧನೆ

ದಕ್ಷಿಣ ಕನ್ನಡ ಜಿಲ್ಲೆಯ ಆರು ಗ್ರಾಮಗಳು 18 ವರ್ಷ ಮೇಲಿನ ಎಲ್ಲ ಜನರಿಗೆ ಮೊದಲ ಡೋಸ್‌ ಲಸಿಕೆ ಹಾಕುವ ಮೂಲಕ ಶೇ 100 ರಷ್ಟು ಸಾಧನೆ ಮಾಡಿವೆ. ಬಂಟ್ವಾಳ ತಾಲ್ಲೂಕಿನ ಅಳಿಕೆಯಲ್ಲಿ 3,774, ಪೆರುವಾಯಿ ಮಾಣಿಲದ 4,525, ಪುತ್ತೂರು ತಾಲ್ಲೂಕಿನ ಬಡಗನ್ನೂರು ಗ್ರಾಮದ 2,139, ಪಡುವನ್ನೂರು ಗ್ರಾಮದ 2,388, ಸಿರಿಬಾಗಿಲು ಗ್ರಾಮದ 561 ಹಾಗೂ ಬೆಳ್ತಂಗಡಿ ತಾಲ್ಲೂಕಿನ ಲಾಯಿಲ ಗ್ರಾಮದ 5,070 ಮಂದಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.