ADVERTISEMENT

22,825 ಟನ್‌ ಕಬ್ಬಿಣ ರಫ್ತು

ಎನ್‌ಎಂಪಿಟಿಗೆ ಮತ್ತೊಂದು ಗರಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 3:56 IST
Last Updated 4 ಸೆಪ್ಟೆಂಬರ್ 2021, 3:56 IST
ಮಂಗಳೂರಿನ ಎನ್‌ಎಂಪಿಟಿಯಿಂದ 22,825 ಟನ್‌ ಕಬ್ಬಿಣದ ಸರಕನ್ನು ಹಡಗಿಗೆ ತುಂಬಲಾಯಿತು.
ಮಂಗಳೂರಿನ ಎನ್‌ಎಂಪಿಟಿಯಿಂದ 22,825 ಟನ್‌ ಕಬ್ಬಿಣದ ಸರಕನ್ನು ಹಡಗಿಗೆ ತುಂಬಲಾಯಿತು.   

ಮಂಗಳೂರು: ನಗರದ ನವ ಮಂಗಳೂರು ಬಂದರು ಟ್ರಸ್ಟ್‌ ಹೊಸ ಸಾಧನೆ ಮಾಡಿದ್ದು, ಇದೇ ಮೊದಲ ಬಾರಿಗೆ ಇಲ್ಲಿಂದ 22,825 ಟನ್‌ ಕಬ್ಬಿಣದ ಸರಕನ್ನು ರಫ್ತು ಮಾಡಲಾಗಿದೆ.

ಆ.29 ರಂದು ಎಂ.ವಿ. ಮಿನಿಯನ್‌ ಗ್ರೇಸ್ ಹಡಗು ನಗರದ ಎನ್‌ಎಂಪಿಟಿಗೆ ಬಂದಿತ್ತು. ಇದರಿಂದ ಜೆಎಸ್‌ಡಬ್ಲ್ಯು ಕಂಪನಿಗೆ ಸೇರಿದ 22,825 ಟನ್‌ ಕಬ್ಬಿಣದ ಸರಕನ್ನು ತುಂಬಲಾಗಿದೆ. ಸರಕು ಹೊತ್ತ ಹಡಗು ಈಜಿಪ್ಟನ ಡ್ಯಾಮಿಯೆಟ್ಟ, ಇಟಲಿಯ ಮರ್ಗೇರಾ ಹಾಗೂ ಸ್ಪೇನ್‌ನ ಸಗುಂಟೋ ಬಂದರಿಗೆ ತೆರಳಲಿದೆ.

ಎನ್‌ಎಂಪಿಟಿಯ 3 ನೇ ದಕ್ಕೆ ಮಿನಿಯನ್‌ ಗ್ರೇಸ್‌ ಹಡಗನ್ನು ನಿಲುಗಡೆ ಮಾಡಲಾಗಿತ್ತು. ಸತತ ಐದು ದಿನಗಳ ಕಾಲ ಹಡಗಿಗೆ ಸರಕನ್ನು ತುಂಬಲಾಗಿದ್ದು, ಶುಕ್ರವಾರ ಈ ಹಡಗು ಇಲ್ಲಿಂದ ಪ್ರಯಾಣ ಬೆಳೆಸಿತು. ಇದಕ್ಕಾಗಿ ಎನ್‌ಎಂಪಿಟಿಯಿಂದ ಅಗತ್ಯ ಸಂಪನ್ಮೂಲ ಒದಗಿಸುವ ಮೂಲಕ ಸರಕು ನಿರ್ವಹಣೆಗೆ ಅಗತ್ಯ ಸಹಕಾರ ನೀಡಲಾಯಿತು.

ADVERTISEMENT

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಎನ್‌ಎಂಪಿಟಿ ಅಧ್ಯಕ್ಷ ಡಾ.ಎ.ವಿ. ರಮಣ್‌, ಜೆಎಸ್‌ಡಬ್ಲ್ಯು ಕಂಪನಿಯ ದೊಡ್ಡ ಪ್ರಮಾಣದ ಕಬ್ಬಿಣದ ಸರಕನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿರುವುದು ಹೆಮ್ಮೆಯ ಸಂಗತಿ. ಉನ್ನತೀಕರಿಸಿದ ದಾಸ್ತಾನು ವ್ಯವಸ್ಥೆ, ಉತ್ತಮ ಸೇವೆಗಳನ್ನು ಕೈಗೆಟುವ ದರದಲ್ಲಿ ಒದಗಿಸಿರುವುದಕ್ಕೆ ಜೆಎಸ್‌ಡಬ್ಲ್ಯು ಕಂಪನಿಯೂ ಸಂತಸ ವ್ಯಕ್ತಪಡಿಸಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.