ADVERTISEMENT

ಊಟ ಚರ್ಚೆಯ ವಿಚಾರವೇ ಅಲ್ಲ: ಎಚ್.ಸಿ. ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2022, 19:42 IST
Last Updated 22 ಆಗಸ್ಟ್ 2022, 19:42 IST
ಎಚ್‌.ಸಿ. ಮಹಾದೇವ‍ಪ್ಪ
ಎಚ್‌.ಸಿ. ಮಹಾದೇವ‍ಪ್ಪ   

ಬೆಂಗಳೂರು: ‘ರಾಜಕಾರಣದಲ್ಲಿ ಊಟ ಎಂಬುದು ಚರ್ಚೆಯ ವಿಚಾರವೇ ಅಲ್ಲ. ಆದರೆ, ಬಿಜೆಪಿ ನಾಯಕರು ಕೆಲಸಕ್ಕೆ ಬಾರದ ವಿಚಾರ ಇಟ್ಟುಕೊಂಡು ಚರ್ಚೆ ಮಾಡುತ್ತಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ದುರಾಡಳಿತದ ಮೂಲಕ ಹಿಂದೂಗಳ ಬದುಕನ್ನು ಸಂಪೂರ್ಣವಾಗಿಮುಳುಗಿ
ಸಿದೆ’ ಎಂದು ಕಾಂಗ್ರೆಸ್‌ ಮುಖಂಡ ಎಚ್.ಸಿ. ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸಾತ್ವಿಕ ಆಹಾರ ಸೇವಿಸುವ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಿಸುತ್ತೇವೆ ಎನ್ನುತ್ತಾರೆ. ತೇಜಸ್ವಿ ‌ಸೂರ್ಯ ಜನಪ್ರತಿನಿಧಿಯಾಗಿದ್ದುಕೊಂಡೇ ಮುಸಲ್ಮಾನರ ಮೇಲೆ ನೇರವಾಗಿ ದ್ವೇಷ ಕಾರುತ್ತಾರೆ. ಸಾತ್ವಿಕ ಆಹಾರ ಸೇವಿಸುವವರು ಹೀಗೆಲ್ಲಾ ಕೆಟ್ಟದಾಗಿ ನಡೆದುಕೊಳ್ಳಬಹುದೇ’ ಎಂದೂ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT