ADVERTISEMENT

ಒಂದು ನಿಮಿಷಕ್ಕೆ 350 ಪಂಚ್‌!

ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಬರೆದ ಯುವಕ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 5:13 IST
Last Updated 28 ಜೂನ್ 2021, 5:13 IST
ಅಮ್ಮಂಡ ಹಿತೈಶ್ ಭೀಮಯ್ಯ
ಅಮ್ಮಂಡ ಹಿತೈಶ್ ಭೀಮಯ್ಯ   

ವಿರಾಜಪೇಟೆ: ಸಮೀಪದ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಗ ಮೂರುರಿನ ಅಮ್ಮಂಡ ಹಿತೈಶ್ ಭೀಮಯ್ಯ ಅವರು ಕರಾಟೆಯಲ್ಲಿ ನಿಮಿಷಕ್ಕೆ 350 ಪಂಚ್‌ಗಳನ್ನು ಮಾಡುವ ಮೂಲಕ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಮಾಡಿದ್ದಾರೆ.

ಹಿತೈಶ್ ಅವರು, ಮರಳು ಮೂಟೆಗೆ ಒಂದೇ ಕೈಯಲ್ಲಿ ಒಂದು ನಿಮಿಷಕ್ಕೆ 350 ಪಂಚ್ ಮಾಡಿದ ವಿಡಿಯೊವನ್ನು ಮೇ ತಿಂಗಳಲ್ಲಿ ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಿದ್ದರು. ಇದನ್ನು ಪರಿಶೀಲಿಸಿದ ಹರಿಯಾಣದ ಫರಿದಾಬಾದ್‌ನಲ್ಲಿರುವ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನವರು ಹಿತೈಶ್‌ಗೆ ಪ್ರಮಾಣ ಪತ್ರ ಹಾಗೂ ಚಿನ್ನದ ಪದಕವನ್ನು
ಕಳುಹಿಸಿಕೊಟ್ಟಿದ್ದಾರೆ.

ಈ ಹಿಂದೆ ಒಡಿಶಾದ ಅಭಿನ್ ಕುಮಾರ್ ಎಂಬುವವರು ಒಂದು ನಿಮಿಷದಲ್ಲಿ 292 ಪಂಚ್‌ಗಳನ್ನು ಮಾಡುವ ಮೂಲಕ ಸಾಧನೆ ಮಾಡಿದ್ದರು. ಅಭಿನ್ ಕುಮಾರ್ ದಾಖಲೆ ಮುರಿದಿರುವ ಹಿತೈಶ್ ಅವರಿಗೆ ಗಿನ್ನಿಸ್ ಬುಕ್ ಆಫ್ ರೆಕಾರ್ಡ್‌ ದಾಖಲೆ ಮಾಡುವ ಗುರಿಯಿದೆ.

ADVERTISEMENT

ಅಮ್ಮಂಡ ಸತೀಶ್ ಹಾಗೂ ನೀತಾ ದಂಪತಿಯ ಪುತ್ರ ಹಿತೈಶ್, ವಿರಾಜಪೇಟೆಯ ಗೋಜುರಿಯೋ ಕರಾಟೆ ಶಾಲೆಯ ಶಿಕ್ಷಕ ಎಂ.ಬಿ.ಚಂದ್ರನ್ ಬಳಿ ತರಬೇತಿ ಪಡೆಯುತ್ತಿದ್ದಾರೆ. ಪೊನ್ನಂಪೇಟೆಯ ಸಿಐಟಿ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.