ADVERTISEMENT

‘ನಾಟಕದ ಮೂಲಕ ಅಶಾಂತಿ ಸೃಷ್ಟಿ’

ಅಡ್ಡಂಡ ಕಾರ್ಯಪ್ಪ ವಿರುದ್ಧ ಜಿಲ್ಲಾಧಿಕಾರಿಗೆ ಹೋರಾಟಗಾರರ ಪತ್ರ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2023, 6:14 IST
Last Updated 22 ಮಾರ್ಚ್ 2023, 6:14 IST
ಮೈಸೂರಿನ ಜಲದರ್ಶಿನಿಯಲ್ಲಿ ಮಂಗಳವಾರ ನಡೆದ ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿದರು.
ಮೈಸೂರಿನ ಜಲದರ್ಶಿನಿಯಲ್ಲಿ ಮಂಗಳವಾರ ನಡೆದ ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿದರು.   

ಮೈಸೂರು: ‘ಟಿಪ್ಪು ನಿಜ ಕನಸುಗಳು’ ನಾಟಕದ ಮೂಲಕ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಸಮಾಜದಲ್ಲಿ ಅಶಾಂತಿ ಹಾಗೂ ಗೊಂದಲ ಸೃಷ್ಟಿಸಿರುವುದಲ್ಲದೇ, ಗಾಂಧಿವಾದಿ ಪ.ಮಲ್ಲೇಶ್‌, ದೇವನೂರು ಮಹದೇವ, ಗಿರೀಶ್‌ ಕಾರ್ನಾಡ್‌ ಅವರನ್ನು ಅಸಭ್ಯವಾಗಿ ಟೀಕಿಸುತ್ತಿದ್ದಾರೆ. ಇವರ ವಿರುದ್ಧ ಕ್ರಮವಹಿಸಬೇಕು’ ಎಂದು ಮೈಸೂರು ಪ್ರಜ್ಞಾವಂತ ನಾಗರಿಕ ಸಂಘಟನೆಗಳು ಆಗ್ರಹಿಸಿವೆ.

ಜಲದರ್ಶಿನಿಯಲ್ಲಿ ಮಂಗಳವಾರ ಸಭೆ ನಡೆಸಿದ ಹೋರಾಟಗಾರರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, ‘ರಂಗಾಯಣ’ ಒಂದು ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಯಾಗಿದ್ದು, ಸರ್ಕಾರದ ನಿಯಮಾವಳಿಯಂತೆ ಸಂಸ್ಥೆ ಯನ್ನು ನೈತಿಕತೆ ಹಾಗೂ ಸಾಂಸ್ಕೃತಿಕ ಎಚ್ಚರದೊಂದಿಗೆ ನಡೆಸಬೇಕು. ಆದರೆ, ನಿರ್ದೇಶಕರು ವಿವಾದ ಸುಳಿಯಲ್ಲಿ ರಂಗಾಯಣವನ್ನು ಸಿಲುಕಿಸುತ್ತಿದ್ದಾರೆ. ‘ಟಿಪ್ಪು ನಿಜ ಕನಸುಗಳು’ ಎಂಬ ನಾಟಕದ ಮೂಲಕ ದ್ವೇಷ ಭಾವನೆ ಮೂಡಿಸುತ್ತಿದ್ದಾರೆ’ ಎಂದರು.

ADVERTISEMENT

‘ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧವೂ ನಾಟಕವೊಂದರಲ್ಲಿ ಅಸಭ್ಯವಾಗಿ ಟೀಕಿಸಲಾಗಿತ್ತು’ ಎಂದರು.

ಲೇಖಕರಾದ ಎಸ್‌.ಜಿ.ಸಿದ್ದರಾಮಯ್ಯ, ನಾ.ದಿವಾಕರ, ರಂಗಕರ್ಮಿ ಎಚ್‌.ಜನಾರ್ಧನ, ಸ.ರ.ಸುದರ್ಶನ, ಕಾಳಚನ್ನೇಗೌಡ, ಮುಖಂಡರಾದ ಎಂ.ಲೋಕೇಶ್‌ ಕುಮಾರ್‌, ಸತ್ಯ, ಪುರುಷೋತ್ತಮ್‌, ಡಾ.ಹರೀಶ್‌ಕುಮಾರ್, ಎನ್‌.ಎಸ್‌.ಗೋಪಿನಾಥ್, ಕೆ.ಆರ್‌.ಗೋಪಾಲಕೃಷ್ಣ, ಉಗ್ರನರಸಿಂಹೇಗೌಡ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.