ADVERTISEMENT

ತರಕಾರಿ ವ್ಯಾಪಾರಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 4:48 IST
Last Updated 21 ಸೆಪ್ಟೆಂಬರ್ 2021, 4:48 IST
ಪಾವಗಡ ಕೃಷಿ ಮಾರುಕಟ್ಟೆ ಆವರಣದಲ್ಲಿ ಸೋಮವಾರ ಸಂತೆಯಂದು ರಸ್ತೆ ಬದಿ ತರಕಾರಿ ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿ ತರಕಾರಿ ಮಾರಾಟಗಾರರು ಪ್ರತಿಭಟಿಸಿದರು. ವ್ಯಾಪಾರಿಗಳಾದ ಗೋಪಾಲ, ಕೊಂಡಮ್ಮ, ಮಲ್ಲಕ್ಕ, ಉಮಕ್ಕ, ತಿಮ್ಮಕ್ಕ, ಹನುಮಕ್ಕ ಇದ್ದರು
ಪಾವಗಡ ಕೃಷಿ ಮಾರುಕಟ್ಟೆ ಆವರಣದಲ್ಲಿ ಸೋಮವಾರ ಸಂತೆಯಂದು ರಸ್ತೆ ಬದಿ ತರಕಾರಿ ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿ ತರಕಾರಿ ಮಾರಾಟಗಾರರು ಪ್ರತಿಭಟಿಸಿದರು. ವ್ಯಾಪಾರಿಗಳಾದ ಗೋಪಾಲ, ಕೊಂಡಮ್ಮ, ಮಲ್ಲಕ್ಕ, ಉಮಕ್ಕ, ತಿಮ್ಮಕ್ಕ, ಹನುಮಕ್ಕ ಇದ್ದರು   

ಪಾವಗಡ: ಸಂತೆಯ ದಿನದಂದು ರಸ್ತೆ ಇಕ್ಕೆಲಗಳಲ್ಲಿ ತರಕಾರಿ ವ್ಯಾಪಾರಕ್ಕೆ ಅವಕಾಶ ನೀಡದೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ವ್ಯಾಪಾರ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ತರಕಾರಿ ಮಾರಾಟಗಾರರು ಸೋಮವಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಪ್ರತಿಭಟಿಸಿದರು.

ಪ್ರತಿ ಸೋಮವಾರದಂದು ಪಟ್ಟಣದಲ್ಲಿ ಸಂತೆ ನಡೆಯುತ್ತಿದೆ. ಸಂತೆ ದಿನದಂದು ವಾಹನ ಸಂಚಾರ ಹೆಚ್ಚಿರುತ್ತದೆ. ಆದರೆ ಕೆಲ ವ್ಯಾಪಾರಿಗಳು ರಸ್ತೆ ಇಕ್ಕೆಲಗಳಲ್ಲಿ ತರಕಾರಿ ಮಾರಾಟ ಮಾಡುವುದರಿಂದ ಸಂಚಾರ ವ್ಯವಸ್ಥೆಗೆ ಸಮಸ್ಯೆಯಾಗುತ್ತದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ರಸ್ತೆ ಬದಿಯಲ್ಲಿ ಮಾರಾಟಗಾರರಿಂದ ತರಕಾರಿ ಕೊಳ್ಳಲು ವಾಹನ ಸವಾರರು ರಸ್ತೆಯಲ್ಲಿಯೇ ವಾಹನ ನಿಲ್ಲಿಸುವುದರಿಂದ ಅಪಘಾತಗಳು ಹೆಚ್ಚುತ್ತಿವೆ. ಸುಗಮ ಸಂಚಾರಕ್ಕೆ ಇದರಿಂದ ಅಡಚಣೆಯಾಗುತ್ತಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣಕ್ಕೆ ತರಕಾರಿ ಕೊಳ್ಳಲು ಬರುವ ಗ್ರಾಹಕರು ಕಡಿಮೆಯಾಗಿ ಇಲ್ಲಿನ ವ್ಯಾಪಾರಿಗಳಿಗೂ ನಷ್ಟವಾಗುತ್ತಿದೆ ಎಂದು ದೂರಿದರು.

ADVERTISEMENT

ಪುರಸಭೆಯಲ್ಲಿ ಹರಾಜು ಕೂಗಿರುವ ಸುಂಕ ವಸೂಲಿಗಾರರು ಸುಂಕಕ್ಕಾಗಿ ರಸ್ತೆ ಬದಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡುತ್ತಿದ್ದಾರೆ. ಇದರಿಂದ ರಸ್ತೆ ಬದಿ ತರಕಾರಿ ವ್ಯಾಪಾರ ಮಾಡಿಕೊಳ್ಳಲು ಪುರಸಭೆ ವತಿಯಿಂದ ಅವಕಾಶ ಮಾಡಿಕೊಟ್ಟಂತಾಗಿದೆ. ಹಣದ ಆಸೆಗಾಗಿ ಸುಂಕ ವಸೂಲಿ ಮಾಡುವವರು ಪಟ್ಟಣದಲ್ಲಿ ವಾಹನ ದಟ್ಟಣೆ ಹೆಚ್ಚಲು ಕಾರಣಕರ್ತರಾಗುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿ ಸೋಮವಾರದಂದು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ತರಕಾರಿ ಮಾರಾಟ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳು
ಕ್ರಮ ತೆಗೆದುಕೊಳ್ಳಬೇಕು. ರಸ್ತೆ ಬದಿ ತರಕಾರಿ ವ್ಯಾಪಾರ ಮಾಡದಂತೆ ನಿರ್ಬಂಧ ವಿಧಿಸಬೇಕು ಎಂದು ಒತ್ತಾಯಿಸಿದರು.

ವ್ಯಾಪಾರಿಗಳಾದ ಗೋಪಾಲ, ಕೊಂಡಮ್ಮ, ಮಲ್ಲಕ್ಕ, ಉಮಕ್ಕ, ತಿಮ್ಮಕ್ಕ, ಹನುಮಕ್ಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.