ADVERTISEMENT

ಮಹಿಷ ಮರ್ದಿನಿ ದೇವಸ್ಥಾನ: ಮರದ ಕೆತ್ತನೆ ಆರಂಭ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 15:39 IST
Last Updated 21 ಸೆಪ್ಟೆಂಬರ್ 2021, 15:39 IST
ಉಡುಪಿಯ ಕಡಿಯಾಳಿ ಶ್ರೀಮಹಿಷ ಮರ್ದಿನಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕೆಲಸ ನಡೆಯುತ್ತಿದ್ದು ಈಚೆಗೆ ಮರದ ಕೆತ್ತನೆ ಕೆಲಸದ ಮುಹೂರ್ತ ನಡೆಯಿತು.
ಉಡುಪಿಯ ಕಡಿಯಾಳಿ ಶ್ರೀಮಹಿಷ ಮರ್ದಿನಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕೆಲಸ ನಡೆಯುತ್ತಿದ್ದು ಈಚೆಗೆ ಮರದ ಕೆತ್ತನೆ ಕೆಲಸದ ಮುಹೂರ್ತ ನಡೆಯಿತು.   

ಉಡುಪಿ: ನಗರದ ಕಡಿಯಾಳಿ ಶ್ರೀಮಹಿಷ ಮರ್ದಿನಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕೆಲಸ ನಡೆಯುತ್ತಿದ್ದು ಈಚೆಗೆ ಮರದ ಕೆತ್ತನೆ ಕೆಲಸದ ಮುಹೂರ್ತ ನಡೆಯಿತು.

ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಹಲವು ದೇವಸ್ಥಾನಗಳನ್ನು ವೈಭವಯುತವಾಗಿ ಜೀರ್ಣೋದ್ಧಾರ ಮಾಡಲಾಗಿದೆ. ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಸುತ್ತುಪೌಳಿಯ ಕೆಂಪುಕಲ್ಲು ಗೋಡೆ ಕೆತ್ತನೆ ಕೆಲಸ ಮತ್ತು ಕಪ್ಪುಕಲ್ಲಿನ ಆಧಾರ ಸ್ತಂಭಗಳು ಮತ್ತು ಕಪ್ಪುಕಲ್ಲಿನ ಕಿಟಕಿಗಳು ವಿಶಿಷ್ಟವಾಗಿ, ಸುಂದರವಾಗಿ ನಿರ್ಮಾಣವಾಗುತ್ತಿವೆ ಎಂದರು.

ದೇವಸ್ಥಾನದ ಸುತ್ತುಪೌಳಿ ಮತ್ತು ಸುಬ್ರಹ್ಮಣ್ಯ ಗುಡಿಯ ತಳಪಾಯದ ಕೆಲಸವನ್ನು ಗ್ರಾಮಸ್ಥರೇ ಸೇರಿ ಮಾಡಿರುವುದು ಶ್ಲಾಘನೀಯ ಎಂದರು.

ADVERTISEMENT

ಉಡುಪಿ ಜಿಲ್ಲಾ ಬಿಲ್ಡರ್ಸ್ ಅಸೋಸಿಯೇಶನ್ ಅಧ್ಯಕ್ಷ ಜೆರ್ರಿ ವಿನ್ಸೆಂಟ್ ಡಯಾಸ್ ಮಾತನಾಡಿ, ಸಮಗ್ರ ಅಭಿವೃದ್ಧಿ ಕಾಣುತ್ತಿರುವ ದೇವಾಲಯಕ್ಕೆ ಸಂಸ್ಥೆಯಿಂದ ಕೊಡುಗೆ ನೀಡುವುದಾಗಿ ಹೇಳಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ರವಿರಾಜ್ ಆಚಾರ್ಯ, ಉದ್ಯಮಿಗಳಾದ ಸುಭಾಷ್ ಹೆಗ್ಡೆ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಗಣೇಶ ರಾವ್, ಪ್ರಧಾನ ಅರ್ಚಕ ದುರ್ಗಾಪ್ರಸಾದ್ ಉಪಾಧ್ಯ, ಕುಂಜಿತ್ತಾಯ ಶ್ರೀನಿವಾಸ್ ಉಪಾಧ್ಯ ಇದ್ದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗೇಶ್ ಹೆಗ್ಡೆ ಸ್ವಾಗತಿಸಿದರು, ಉಡುಪಿ ನಗರಾಭಿವೃದ್ಧಿ ಪ್ರಾಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾ ಶಾಮಸುಂದರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.