ADVERTISEMENT

‘ಸರ್ವತೋಮುಖ ಅಭಿವೃದ್ಧಿಗೆ ಚಿತ್ತ ಹರಿಸಿ’

ಹುಣಸಗಿ: ಸಂಭ್ರಮದ ಕಲ್ಯಾಣ ಕರ್ನಾಟಕ ಉತ್ಸವ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 4:00 IST
Last Updated 18 ಸೆಪ್ಟೆಂಬರ್ 2021, 4:00 IST
ಹುಣಸಗಿ ಪಟ್ಟಣದಲ್ಲಿ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಯೋಧ ಬಸವರಾಜ ಜಕರಡ್ಡಿ, ಪ್ರಗತಿಪರ ರೈತ ಬಸಣ್ಣ ದೇಸಾಯಿ, ಪತ್ರಕರ್ತ ಶಿವಶರಣ ಕಟ್ಟಿಮನಿ, ಎಎಸ್ಐ ಮಾಣಿಕರಡ್ಡಿ ಅವರನ್ನು ಸನ್ಮಾನಿಸಲಾಯಿತು
ಹುಣಸಗಿ ಪಟ್ಟಣದಲ್ಲಿ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಯೋಧ ಬಸವರಾಜ ಜಕರಡ್ಡಿ, ಪ್ರಗತಿಪರ ರೈತ ಬಸಣ್ಣ ದೇಸಾಯಿ, ಪತ್ರಕರ್ತ ಶಿವಶರಣ ಕಟ್ಟಿಮನಿ, ಎಎಸ್ಐ ಮಾಣಿಕರಡ್ಡಿ ಅವರನ್ನು ಸನ್ಮಾನಿಸಲಾಯಿತು   

ಹುಣಸಗಿ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ವಜ್ಜಲ, ಬಲಶೆಟ್ಟಿಹಾಳ, ಕೊಡೇಕಲ್ಲ, ನಾರಾಯಣಪುರ, ಮಾಳನೂರ, ಕಲ್ಲದೇವನಹಳ್ಳಿ ಸೇರಿದಂತೆ ಇತರ ಗ್ರಾಮಗಳಲ್ಲಿ ಕಲ್ಯಾಣ ಕರ್ನಾಟಕ ಉತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ ಧ್ವಜಾರೋಹಣ ಮಾಡಿ ಮಾತನಾಡಿ, ಅಸಂಖ್ಯಾತ ಹೋರಾಟಗಾರರ ಹೋರಾಟದ ಫಲವಾಗಿ ಕಲ್ಯಾಣ ಕರ್ನಾಟಕ ಪ್ರದೇಶವು ಸೆಪ್ಟಂಬರ್ 17ರಂದು ಸ್ವಾತಂತ್ರ್ಯ ಪಡೆಯಿತು. ಈ ಹೋರಾಟದಲ್ಲಿ ದುಮ್ಮದ್ರಿ ಶರಣಗೌಡ, ಅಚ್ಚಪ್ಪಗೌಡ, ಕೋಳೂರ ವಿರುಪಾಕ್ಷಪ್ಪಗೌಡ, ಮಹಾಂತಗೌಡ, ನಿಂಗನಗೌಡರು ಸೇರಿದಂತೆ ಸಾಕಷ್ಟು ನಾಯಕರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ ಎಂದು ಹೋರಾಟಗಾರರನ್ನು ಸ್ಮರಿಸಿದರು.

ಶಿಕ್ಷಕ ಗುರುನಾಥ ನಾವದಗಿ ವಿಶೇಷ ಉಪನ್ಯಾಸ ನೀಡಿದರು.

ADVERTISEMENT

ಉಪಖಜಾನೆ ಅಧಿಕಾರಿ ಸಣ್ಣಕೆಪ್ಪ ಕೊಂಡಿಕಾರ್ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶವು ನಿಜಾಮ ಸರ್ಕಾರದಿಂದ ಮುಕ್ತಿ ಪಡಿದಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಇನ್ನೂ ಪ್ರಗತಿ ಸಾಧಿಸಬೇಕಿದೆ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ದೇಸಾಯಿ, ಸಿಪಿಐ ದೌಲತ್.ಎನ್.ಕೆ, ಉಪ ತಹಶಿಲ್ದಾರ್ ಪ್ರವೀಣ ಸಜ್ಜನ್ ವೇದಿಕೆ ಮೇಲೆ ಇದ್ದರು. ನಾಗನಗೌಡ ಪಾಟೀಲ ನಿರೂಪಿಸಿದರು. ಅಮರೇಶ ಮಾಲಗತ್ತಿ ವಂದಿಸಿದರು.

ಇಲ್ಲಿನ ಸ್ವಾಮಿ ವಿವೇಕಾನಂದ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಉತ್ಸವದಲ್ಲಿ ಪ್ರಾಚಾರ್ಯ ಎಸ್.ಎಂ.ಕಿರಣಗಿ ಧ್ವಜಾರೋಹಣ ಮಾಡಿದರು. ಐಟಿಐ ಕಾಲೇಜು ಪ್ರಾಚಾರ್ಯ ಬಸವರಾಜ ಮರೋಳ, ಉಪನ್ಯಾಸಕರಾದ ಬಸವರಾಜ ತಳ್ಳಳ್ಳಿ, ನಿಂಗುನಾಯಕ, ಶರಣಪ್ಪ ಕಟ್ಟಿಮನಿ ಇದ್ದರು.
ಹುಣಸಗಿ ಪಟ್ಟಣ ಸಹಕಾರಿ ಸಂಘದಲ್ಲಿ ಅಧ್ಯಕ್ಷ ಬಸವರಾಜ ಮೇಲಿನಮನಿ ಧ್ವಜಾರೋಹಣ ಮಾಡಿದರು. ಬಳಿಕ ಮಾತನಾಡಿ, ಸರ್ಧಾರ್ ವಲ್ಲಭಬಾಯಿ ಪಟೇಲ ಅವರ ದಿಟ್ಟ ನಿಲುವಿನಿಂದಾಗಿ 33 ದಿನಗಳ ಹೋರಾಟದ ಫಲವಾಗಿ ಈ ಭಾಗದ ಸ್ವಾತಂತ್ರ್ಯವಾಯಿತು ಎಂದರು.

ಸಂಸ್ಥೆಯ ಪದ್ಮಾವತಿ ದೇಶಪಾಂಡೆ, ಚಂದ್ರಶೇಖರ ದೇಸಾಯಿ, ಗುರುಲಿಂಗಪ್ಪ ಸಜ್ಜನ, ಅಮರೇಶ ವೈಲಿ, ದೇವು ಬೈಚಬಾಳ, ಮಹಾಂತೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.