ADVERTISEMENT

ಮಲಯಾಳ ಚಿತ್ರನಟ ರಿಸಾಬಾವ ನಿಧನ

ಪಿಟಿಐ
Published 13 ಸೆಪ್ಟೆಂಬರ್ 2021, 14:29 IST
Last Updated 13 ಸೆಪ್ಟೆಂಬರ್ 2021, 14:29 IST

ಕೊಚ್ಚಿ: ಮಲಯಾಳ ಚಿತ್ರನಟ ರಿಸಾಬಾವ (54) ಅವರು ಅನಾರೋಗ್ಯದಿಂದ ಸೋಮವಾರ ನಿಧನರಾದರು.

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಮೂರು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

‘ಇನ್‌ ಹರಿಹರ್‌ ನಗರ್‌’ ಮಲಯಾಳ ಚಿತ್ರದ ‘ಜಾನ್‌ ಹೊನೈ’ ಪಾತ್ರದ ಮೂಲಕ ಅವರು ಗಮನ ಸೆಳೆದಿದ್ದರು.

ADVERTISEMENT

‘ಡಾಕ್ಟರ್‌ ಪಶುಪತಿ’, ‘ಕಾಬೂಲಿವಾಲಾ’, ‘ನಿರಂ’,‘ನಸ್ರಾನಿ’ ಮೊದಲಾದ ಚಿತ್ರಗಳಲ್ಲಿ ಗಮನಾರ್ಹ ಪಾತ್ರಗಳಲ್ಲಿ ನಟಿಸಿದ್ದರಿಸಾಬಾವ ಅವರು, ಕಿರುತೆರೆಯ ಹಲವು ಧಾರಾವಾಹಿಗಳಲ್ಲೂ ಅಭಿನಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.