ADVERTISEMENT

ನಾಲ್ಕು ಭಾಷೆಗಳಲ್ಲಿ ‘ಲಾಸ್ಟ್ ಸೀನ್’ ವಿಡಿಯೋ ಆಲ್ಬಂ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 12:20 IST
Last Updated 1 ಅಕ್ಟೋಬರ್ 2020, 12:20 IST
ವಾಗೀಶ್‌ ಆಯುಷ್‌ ಮತ್ತು ಸಂಗೀತ
ವಾಗೀಶ್‌ ಆಯುಷ್‌ ಮತ್ತು ಸಂಗೀತ   

ಅತ್ಯಾಚಾರಕ್ಕೆ ಒಳಗಾದ ಯುವತಿಯೊಬ್ಬಳು ಅನುಭವಿಸುವ ನೋವು, ಆಕೆಯ ಪ್ರೇಮಿಯಾದವನು ಅನುಭವಿಸುವ ವೇದನೆಯನ್ನೇ ಕೇಂದ್ರವಾಗಿಟ್ಟುಕೊಂಡು ಹೊಸಬರ ತಂಡ‘ಲಾಸ್ಟ್‌ ಸೀನ್‌’ ಎನ್ನುವ ವಿಡಿಯೊ ಆಲ್ಬಂ ಸಿದ್ಧಪಡಿಸಿದೆ.

ನಾಲ್ಕೂವರೆ ನಿಮಿಷಗಳ ಅವಧಿಯವಿಡಿಯೊ ಆಲ್ಬಂಪರಿಕಲ್ಪನೆ ಮತ್ತು ನಿರ್ದೇಶನ ಎನ್.ವಿನಾಯಕ ಅವರದು. ಕನ್ನಡ,ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ನಿರ್ಮಿಸಿರುವ ಈವಿಡಿಯೊ ಆಲ್ಬಂನಲ್ಲಿಟೆಂಟ್ ವಿದ್ಯಾರ್ಥಿ ವಾಗೀಶ್‍ ಆಯುಷ್ ನಾಯಕನಾಗಿ ಮತ್ತು ಟೆಕ್ಕಿ ಸಂಗೀತ ನಾಯಕಿಯಾಗಿ ನಟಿಸಿದ್ದಾರೆ.

ವಿನು ಐಡಿಯಾ ಪ್ರೊಡಕ್ಷನ್ಸ್ ಬ್ಯಾನರ್‌ನಡಿನಿರ್ಮಾಣಗೊಂಡಿರುವ ಕನ್ನಡದ ಈ ವಿಡಿಯೊ ಹಾಡನ್ನು ಆನಂದ್ ಆಡಿಯೊ ಮೂಲಕ ಯೂಟ್ಯೂಬ್‍ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಉಳಿದ ಮೂರು ಭಾಷೆಗಳಲ್ಲಿಯೂ ಸದ್ಯದಲ್ಲೆ ಬಿಡುಗಡೆ ಮಾಡಲು ತಂಡ ನಿರ್ಧರಿಸಿದೆ.

ADVERTISEMENT

ಮೂರು ದಿನಗಳ ಕಾಲ ಬೆಂಗಳೂರು, ಮಂಗಳೂರು, ದಾಬಸ್‍ಪೇಟೆಯಲ್ಲಿ ಚಿತ್ರೀಕರಿಸಲಾಗಿದೆ.ವ್ಯಾಟ್ಸ್ ಆ್ಯಪ್‍ನಲ್ಲಿಕೊನೆ ಸಲ ನೋಡಿದ ಗೆಳತಿ ಬೆಳಿಗ್ಗೆ ಆಗುವುದರೊಳಗೆ ದುರುಳರ ದಾಹಕ್ಕೆಆಹಾರವಾಗಿರುತ್ತಾಳೆ. ಮತ್ತೆ ಯಾವಾಗ ವಾಟ್ಸ್‌ಆ್ಯಪ್‌ನಲ್ಲಿ ಆಕೆ ಉತ್ತರಿಸುತ್ತಾಳೆ ಎಂದು ಆಕೆಯ ಪ್ರಿಯಕರಕಾಯುತ್ತಿರುತ್ತಾನೆ. ಅದಕ್ಕಾಗಿ ‘ಲಾಸ್ಟ್‌ ಸೀನ್‌’ ಶೀರ್ಷಿಕೆ ಇಡಲಾಗಿದೆ ಎನ್ನುತ್ತಾರೆ ಎನ್‌. ವಿನಾಯಕ.

ಆಲ್ಬಂ ಅನಾವರಣಗೊಳಿಸಿದ ನಿರ್ದೇಶಕ ನಿರ್ದೇಶಕ ಮರಡಿಹಳ್ಳಿ ನಾಗಚಂದ್ರ, ನಮ್ಮ ಶಿಷ್ಯ ಈ ಹಾಡನ್ನು ಅದ್ಧೂರಿಯಾಗಿ ಚಿತ್ರೀಕರಿಸಿದ್ದಾರೆ. ರೈನ್ ಎಫೆಕ್ಟ್, ದ್ರೋಣ್, ಕ್ರೇನ್ ಬಳಸಿ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಇಂದು ಐದು ಲಕ್ಷ ರೂಪಾಯಿಯಲ್ಲಿ ಸಿನಿಮಾ ಮಾಡುವವರು ಇದ್ದಾರೆ. ಇಂಥವರ ನಡುವೆ ಆಲ್ಬಂ ಹಾಡಿಗೆ ಅಷ್ಟು ಮೊತ್ತ ವೆಚ್ಚ ಮಾಡಿರುವುದನ್ನು ನೋಡಿದಾಗ ಖುಷಿಯಾಗುತ್ತದೆ. ಭವಿಷ್ಯದಲ್ಲಿ ಹಿರಿತೆರೆಗೆ ನಿರ್ದೇಶಕರಾಗಿ ಬರಲಿ ಎಂದು ಆಶಿಸಿದ್ದಾರೆ.

ಛಾಯಾಗ್ರಹಣ ಮನು.ಬಿ.ಕೆ, ಸಂಗೀತ ಜುಬೇರ್‌ ಮೊಹಮದ್, ಸಾಹಿತ್ಯ ಪ್ರಮೋದ್‍ ಆಚಾರ್ಯ, ಗಾಯನ ವಾಸುಕಿ ವೈಭವ್,ಸಂಕಲನ ಕೃಷ್ಣ ಸುಜಾನ್, ನೃತ್ಯ ಮೋಹನ್‍ ಜಾಕ್ಸನ್ ಅವರದು.

ಲಿಂಕ್‌:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.