ADVERTISEMENT

‘ರಾಕ್‌ಸಾಲ್ಟ್‌’ನಲ್ಲಿ ರಾಕಿಂಗ್‌ ಫುಡ್‌

ಸಾಂಪ್ರದಾಯಿಕ ಊಟಕ್ಕೆ ಆಧುನಿಕ ಸ್ಪರ್ಷ

ಗವಿ ಬ್ಯಾಳಿ
Published 20 ಮಾರ್ಚ್ 2019, 20:00 IST
Last Updated 20 ಮಾರ್ಚ್ 2019, 20:00 IST
   

ಬೆಂಗಳೂರಿನ ಸೇಂಟ್‌ ಮಾರ್ಕ್ಸ್‌ ರಸ್ತೆಯ ಎಸ್‌ಬಿಐ ಪ್ರಧಾನ ಕಚೇರಿ ಎದುರಿನ ರಾಕ್‌ಸಾಲ್ಟ್‌ ಹೋಟೆಲ್ ಅಪ್ಟಟ ಉತ್ತರ ಭಾರತದ ತಿಂಡಿ, ತಿನಿಸು ಮತ್ತು ಖಾದ್ಯಗಳಿಗಾಗಿಯೇ ಜನಪ್ರಿಯ. ಹೋಟೆಲ್‌ಆರಂಭವಾಗಿ ಇನ್ನೂ ಒಂದೂಕಾಲು ವರ್ಷವಾಗಿಲ್ಲ. ಅದಾಗಲೇ ವಿಭಿನ್ನ ಮತ್ತು ವಿಶಿಷ್ಟರುಚಿಯಿಂದಬೆಂಗಳೂರಿಗರ ಮನಗೆದ್ದಿದೆ. ಉತ್ತರ ಭಾರತದ ಸಾಂಪ್ರದಾಯಿಕ ಖಾದ್ಯಗಳನ್ನು ಆಧುನಿಕ ಶೈಲಿಯಲ್ಲಿ ತಯಾರಿಸಿ ಉಣಬಡಿಸುವುದು ಈ ಹೋಟೆಲ್‌ ವಿಶೇಷತೆ.

ಮೂರನೇ ಮಹಡಿಯಲ್ಲಿರುವ ಆಕರ್ಷಕ ರೂಫ್‌ ಟಾಪ್‌ ಲಾಂಜ್‌ಏರಿಯಾದ ಮಂದ ಬೆಳಕಿನಲ್ಲಿಕುಳಿತು ತಂಗಾಳಿ ಜತೆ ತೇಲಿ ಬರುವ ಇಂಪಾದ ಸಂಗೀತ ಕೇಳುತ್ತ ಉತ್ತರ ಭಾರತದ ಅಥೆಂಟಿಕ್‌ ಫುಡ್‌ ರುಚಿಯನ್ನುಸವಿಯುವ ಮಜಾನೇ ಬೇರೆ.

ದೊಡ್ಡ ಹೊತ್ತಿಗೆಗಳಿಂತಿದ್ದ ಎರಡು ಮೆನುಗಳನ್ನು ಮುಂದಿಟ್ಟ ಹೋಟೆಲ್‌ ಮ್ಯಾನೇಜರ್‌ ಸಾಜಿದ್‌ ಖಾನ್‌ ಏನು ಕೊಡಲಿ ಎಂದು ಕೇಳಿದಾಗ ಗೊಂದಲ ಶುರುವಾಯಿತು. ಹೋಟೆಲ್‌ನ ವಿಶೇಷತೆ ಏನೆಂದು ಕೇಳಿದಾಗ ಉದ್ದನೆಯ ಲಿಸ್ಟ್‌ ಹೇಳಿದರು. ಕೊನೆಗೆ ಸಾಜಿದ್‌,ರಾಕ್‌ಸಾಲ್ಟ್‌ವಿಶೇಷ ಪಾನೀಯ ‘ಮಾರ್ಟಿನ್‌ ಮಾಕ್‌ಟೇಲ್‌’ ಶಿಫಾರಸು ಮಾಡಿದರು. ಕಿತ್ತಳೆ ಹಣ್ಣಿನ ಸ್ವಾದದ ಹುಳಿಯಾದ ಮಾಕ್‌ಟೇಲ್‌ ಬೇಸಿಗೆ ದಾಹ ತಣಿಸಿತು. ಜ್ಯೂಸ್‌ ಮುಗಿಯುತ್ತಲೇ ಸಿಂಗಲ್‌ ಶಾಟ್‌ಚಿಕನ್‌ 65 ಪಾನಿಪೂರಿಮತ್ತು ಕ್ಲಾಸಿಕ್‌ ಆಲೂ ಜಲ್‌ಜೀರಾ ಸ್ಟಾರ್ಟರ್‌ ಟೆಬಲ್‌ಗೆ ಬಂದವು. ಚಿಕ್ಕ ಚಹಾ ಗ್ಲಾಸಿನಲ್ಲಿಪಾನಿ, ಮೊಸರು, ಮಸಾಲೆ, ಪುದಿನಾ ನೀರು ಅದರ ಮೇಲೆ ಪುರಿ. ಅದರಲ್ಲಿ ಚಿಕನ್‌ ಮತ್ತು ಆಲೂ ಹೂರಣವಿತ್ತು.

ADVERTISEMENT

ಆಕರ್ಷಕವಾಗಿ ಜೋಡಿಸಿಟ್ಟ ಪುಟ್ಟ, ಪುಟ್ಟ ಕಸ್ತಾ ರೋಟಿ ಟಾಕೋಸ್‌ ಮತ್ತು ಗ್ಲಾಸಿನಲ್ಲಿದ್ದಸಮೋಸಾ ಕಣ್ಣು ಹೊರಳಿತು. ಸಮೋಸಾಕೈಗೆತ್ತಿಕೊಂಡರೆ ಅತ್ಯಂತ ಮೆದುವಾಗಿತ್ತು. ಅದರಲ್ಲಿ ಅಡುಗೆ ಎಣ್ಣೆಯ ಅಂಶವೇ ಇರಲಿಲ್ಲ. ಬೇಕ್‌ ಮಾಡಿದ ಮೆತ್ತನೆಯ ಸಮೋಸಾ ಒಳಗೆ ಸ್ಟಫ್‌ ಮಾಡಿದ ಹದವಾದ ಮಸಾಲೆ ಸವಿಯಲು ರುಚಿಕರವಾಗಿತ್ತು. ಆರೋಗ್ಯದ ಬಗ್ಗೆ ಕಾಳಜಿ ಇರುವವರಿಗೆ ಈ ಸಮೋಸಾ ಹೇಳಿ ಮಾಡಿಸಿದಂತಿವೆ.

ಕಾಶ್ಮೀರದ ಶೈಲಿಯ ಪಶ್ಮೀನಾ ಚಿಕನ್‌

ರಾಕ್‌ಸಾಲ್ಟ್‌ ಮುಖ್ಯ ಬಾಣಸಿಗ ವರುಣ್‌ ಪ್ರತಾಪ್‌ ಸಿಂಗ್‌, ಪಶ್ಮೀನಾ ಚಿಕನ್‌ ಹಿಡಿದು ಬಂದರು. ಇದು ಈ ಹೋಟೆಲ್‌ನ ಸಿಗ್ನೇಚರ್‌ ಡಿಶ್. ಕಾಶ್ಮೀರ ಶೈಲಿಯ ಖಾದ್ಯ. ಕಾಶ್ಮೀರದ ಪಶ್ಮೀನಾ ಶಾಲುಗಳಂತೆ ಮೆದುವಾಗಿರುವ ಕಾರಣ ಇದಕ್ಕೆ ‘ಪಶ್ಮೀನಾ ಚಿಕನ್‌’ ಎಂಬ ಹೆಸರು ಬಂದಿದೆ. ಮೊಸರು, ಕೊತ್ತಂಬರಿ, ಪುದೀನಾ, ಶುಂಠಿ, ಜೀರಿಗೆಯನ್ನು ಹದವಾಗಿ ಬೆರಿಸಿ ತಯಾರಿಸಿದ ದಹಿ ಕಾ ಕಬಾಬ್‌ ಜತೆ ನೆಂಚಿಕೊಳ್ಳಲು ರುಚಿಕರ ಮೂಲಂಗಿ ಮತ್ತು ಗಜ್ಜರಿ ಚಟ್ನಿ ಹಸಿವಿನ ದಾಹ ತಣಿಸುವಂತಿದ್ದವು. ನಿಂಬೆರಸ ಬೆರಸಿದ ಕಲ್ಲಂಗಡಿ ಹಣ್ಣಿನ ಜ್ಯೂಸ್‌ ಬೇಸಿಗೆಗೆ ಹೇಳಿ ಮಾಡಿಸಿದಂತಿತ್ತು.

ಮುಚ್ಚಿದ ಗಾಜಿನ ಬಾಟಲಿ ತೆಗೆದಾಗ ಉತ್ತರ ಭಾರತೀಯ ಶೈಲಿಯಮಸಾಲೆ ಮತ್ತು ಶುದ್ಧ ಬೆಣ್ಣೆಯಲ್ಲಿತಯಾರಿಸಿದ್ದ ಸ್ಮೋಕ್‌ ಚಿಕನ್‌ಹೊಗೆಯಾಡುತಿತ್ತು. ರಾಜಸ್ಥಾನಿ ಶೈಲಿಯದಾಲ್‌ ತಡ್ಕಾ ಜತೆ ಬೆಳ್ಳೂಳ್ಳಿಯ ನಾನ್‌ ಚಪ್ಪರಿಸುವಂತಿದ್ದವು. ಖಾರ ಮತ್ತು ಮಸಾಲೆ ಪ್ರಿಯರುಲಾಲ್‌ಮಾಸ್‌ ಮಟನ್‌, ಸುಲಾ ಕಬಾಬ್‌ ಯತ್ನಿಸಬಹುದು.

ಕ್ಯಾರಮಲ್‌ ಯೋಗರ್ಟ್‌ ಡಸರ್ಟ್

ಊಟದ ಕೊನೆಗೆ ಬಿಳಿ ನೊರೆಯಲ್ಲಿ ತೇಲುವಂತೆ ಜೋಡಿಸಲಾಗಿದ್ದಸಕ್ಕರೆ ಅಂಶ ಕಡಿಮೆ ಇರುವ ಜಿಲೇಬಿಸವಿದು ಕೈತೊಳೆಯಬೇಕು ಎನ್ನುವಾಗಲೇ ತುಂಬಾ ಅಲಂಕಾರಿಕವಾಗಿದ್ದ ಮತ್ತೆರೆಡು ಸಿಹಿ ತಿನಿಸು ಟೇಬಲ್‌ಗೆ ಬಂತು. ಸಾಕು ಎನಿಸಿದರೂ, ಸ್ವಲ್ಪ ರುಚಿ ನೋಡುವಂತೆ ಮುಖ್ಯ ಬಾಣಸಿಗವರುಣ್‌ ಪ್ರತಾಪ್ ಸಿಂಗ್ ಮತ್ತು ಮ್ಯಾನೇಜರ್‌ ಸಾಜಿದ್‌ ಅಹಮ್ಮದ್‌ ಒತ್ತಡಕ್ಕೆ ಕಟ್ಟು ಬಿದ್ದು ರುಚಿ ನೋಡಿದೆ. ಇಬ್ಬರ ಮಾತು ನಿಜವಾಗಿತ್ತು.

ಒಂದು ಬೇಕ್ಡ್‌ ಗುಲಾಂ ಜಾಮೂನ್‌ ಚೀಸ್‌ ಕೇಕ್‌ ಮತ್ತೊಂದು ಕ್ಯಾರಮಲ್‌ಬೇಕ್‌ ಯೋಗರ್ಟ್ ಡಸರ್ಟ್‌. ಎರಡೂ ಅದ್ಭುತವಾಗಿದ್ದವು.ಎರಡು ಚಿಕ್ಕ ರಸಗುಲ್ಲಾ, ಬ್ಲೂ ಬೆರಿ, ಸಿಹಿ ಮೊಸರು, ಸಕ್ಕರೆ ಬೆರಸಿ ಮಾಡಿದ ಸಿಹಿ ತಿನಿಸು.‘ರಾಕ್‌ಸಾಲ್ಟ್‌’ ಹೋಟೆಲ್‌ಗೆ ಭೇಟಿ ನೀಡಿದರೆ ಈ ಎರಡು ಅದ್ಭುತ ಸಿಗ್ನೇಚರ್‌ ಡಸರ್ಟ್‌ಗಳನ್ನು ತಪ್ಪಿಸಿಕೊಳ್ಳಬೇಡಿ.

ರಾಕ್‌ಸಾಲ್ಟ್‌ ವಿಶೇಷ

‘ರಾಕ್‌ಸಾಲ್ಟ್‌’ ಹೋಟೆಲ್‌ ದಕ್ಷಿಣ ಭಾರತ ಮತ್ತು ಉತ್ತರ ಭಾರತದ ಥಾಲಿಗಳನ್ನು ಆರಂಭಿಸಿದೆ. ಸಸ್ಯಹಾರಿ ಮತ್ತು ಮಾಂಸಾಹಾರಿ ಥಾಲಿ ಲಭ್ಯ. ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ ಮಾತ್ರ ಥಾಲಿ ಊಟ ದೊರೆಯುತ್ತದೆ.

ಸಸ್ಯಹಾರಿ ಥಾಲಿಯಲ್ಲಿ ಕಡಾಯಿ ಪನ್ನೀರ್‌, ಕಮಲದ ದಂಟಿನಿಂದ ತಯಾರಿಸಿದ ಮಲೈ ಕೋಫ್ತಾ ಮತ್ತು ಮಾಂಸಹಾರಿ ಥಾಲಿಯಲ್ಲಿ ಮುರ್ಗ್‌ ಮಖನಿ ಮತ್ತು ಲಾಲ್‌ಮಾಸ್‌ ಎಂಬ ವಿಶೇಷ ಭಕ್ಷ್ಯಗಳಿವೆ.


ವಿಳಾಸ:

ರಾಕ್‌ಸಾಲ್ಟ್‌, 15, ಮದ್ರಾಸ್‌ ಬ್ಯಾಂಕ್‌ ರೋಡ್‌,

ಸೇಂಟ್‌ ಮಾರ್ಕ್ಸ್‌ ರಸ್ತೆಯ ಎಸ್‌ಬಿಐ ಎದುರು

ನೆಕ್ಸಾ ಕಾರು ಶೋರೂಂ ಮೇಲುಗಡೆ, ಅಶೋಕ ನಗರ, ಬೆಂಗಳೂರು–01

ದರ:

ಸಸ್ಯಾಹಾರಿ ಥಾಲಿ: ₹495 (ಜಿಎಸ್‌ಟಿ+ಸೇವಾ ಶುಲ್ಕ)

ಮಾಂಸಾಹಾರಿ ಥಾಲಿ: ₹595 (ಜಿಎಸ್‌ಟಿ+ಸೇವಾ ಶೂಲ್ಕ)

ಸಮಯ:

ಮಧ್ಯಾಹ್ನ 12.30–3.30 ಗಂಟೆ (ಸೋಮವಾರ–ಶುಕ್ರವಾರ)

ಟೇಬಲ್ ಕಾಯ್ದಿರಿಸಲು ಸಂಪರ್ಕ ಸಂಖ್ಯೆ: 080–48909678/+91 9740255099

ಅಥೆಂಟಿಕ್‌ ಫುಡ್

ಬೆಂಗಳೂರಿನಲ್ಲಿ ಅಥೆಂಟಿಕ್‌ ಉತ್ತರ ಭಾರತದ ತಿಂಡಿ, ತಿನಿಸು ಮತ್ತು ಆಹಾರವನ್ನು ಅತ್ಯಾಧುನಿಕ ಶೈಲಿಯಲ್ಲಿ ನೀಡುವುದು ನಮ್ಮ ಹೋಟೆಲ್‌ ವಿಶೇಷತೆ. ಬೆಂಗಳೂರು ಮಾತ್ರವಲ್ಲ, ಹೊರ ರಾಜ್ಯದವರೂ ಇಲ್ಲಿಗೆ ಭೇಟಿ ನೀಡುತ್ತಾರೆ. ದಕ್ಷಿಣ ಭಾರತದ ಭೋಜನ ಕೂಡ ಇಲ್ಲ ಲಭ್ಯ

– ಸಾಜಿದ್‌ ಅಹಮ್ಮದ್‌, (ಒಡಿಶಾ) ರಾಕ್‌ಸಾಲ್ಟ್‌ ಮ್ಯಾನೇಜರ್‌


ಉತ್ತರ ಭಾರತೀಯರಿಗೆ ಹೋಲಿಸಿದರೆ ಬೆಂಗಳೂರಿಗರಿಗೆಚಿಕನ್‌ ಹೆಚ್ಚು ಇಷ್ಟ. ರಾಜಸ್ಥಾನ ಶೈಲಿಯ ಮಸಾಲೆ ಮತ್ತು ಸಿಹಿ ತಿನಿಸು ನಮ್ಮ ವಿಶೇಷ. ಗ್ರಾಹಕರ ಆರೋಗ್ಯಕ್ಕೆ ಒಗ್ಗುವಆಯುರ್ವೇದ ಶೈಲಿಯ ಖಾದ್ಯ ತಯಾರಿಸುವ ಕಲೆ ಗೊತ್ತು.

– ವರುಣ್‌ ಪ್ರತಾಪ್‌ ಸಿಂಗ್‌, ಮುಖ್ಯ ಬಾಣಸಿಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.