ADVERTISEMENT

ಪ್ರಾಣಿ ಪ್ರಿಯರ ಮೇಳ ‘ದಿ ಕೈಂಡ್‌ ಫೆಸ್ಟ್’

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 13:26 IST
Last Updated 24 ಮಾರ್ಚ್ 2019, 13:26 IST

ವೈಟ್‌ಫೀಲ್ಡ್‌ ರೈಸಿಂಗ್ ಸಹಭಾಗಿತ್ವದಲ್ಲಿಫೋರಂ ನೇಬರ್‌ಹುಡ್‌ ಮಾಲ್‌ ಇದೇ 31ರಂದು ‘ದಿ ಕೈಂಡ್‌ ಫೆಸ್ಟ್’/ ವೆಗನ್ ಫೆಸ್ಟಿವಲ್‌ ಆಯೋಜಿಸಿದೆ.

ಪ್ರಾಣಿಗಳ ಉತ್ಪನ್ನಗಳನ್ನು ಬಳಸದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ಉತ್ಸವ ಮಹತ್ವದ ಉದ್ದೇಶ. ಪ್ರಾಣಿಗಳನ್ನು ಹಾಲು, ಮೊಸರು, ತುಪ್ಪ, ಮೊಟ್ಟೆ, ಮಾಂಸ, ಉಣ್ಣೆ, ಚರ್ಮದಂತಹ ಉತ್ಪನ್ನಗಳ ಸರಕಾಗಿ ಪರಿಗಣಿಸದೆ, ಮಾನವರಂತೆಯೇ ಸಮಾನವಾಗಿ ಜೀವಿಯಂತೆ ನೋಡಬೇಕು ಎನ್ನುವುದು ಉತ್ಸವ ತಿರುಳು.

ಪ್ರಾಣಿಜನ್ಯ ಉತ್ಪನ್ನಗಳನ್ನು ತ್ಯಜಿಸಲು ಯಾವ ರೀತಿ ಜೀವನಶೈಲಿಯಲ್ಲಿ ಬದಲಾವಣೆ ಅಳವಡಿಸಿಕೊಳ್ಳಬೇಕು ಎನ್ನುವುದನ್ನು ವೇಗನ್‌ ಉತ್ಸವ ಜನರಿಗೆ ತಿಳಿಸಿಕೊಡಲಿದೆ.

ADVERTISEMENT

ಚಾಕೋಲೆಟ್‌, ಚೀಸ್‌, ಹಾಲು, ಕೇಕ್‌, ಸೌಂದರ್ಯವರ್ಧಕ, ಶೂ, ಪಾದರಕ್ಷೆ, ಚೀಲ, ಬಟ್ಟೆ, ಗೃಹಬಳಕೆ ವಸ್ತುಗಳು ಸೇರಿದಂತೆಸಸ್ಯಜನ್ಯ ಉತ್ಪನ್ನಗಳ ಮಾರಾಟ ಮಳಿಗೆಗಳಿರುತ್ತವೆ.

‘ಲೆಟ್ಸ್‌ ಲಿವ್‌ ಟುಗೆದರ್‌’ ಸ್ವಯಂಸೇವಾ ಸಂಸ್ಥೆ ಬೀದಿನಾಯಿ ಮತ್ತು ನಾಯಿಮರಿಗಳನ್ನು ದತ್ತು ನೀಡಲಿದೆ. ತಮ್ಮನ್ನು ದತ್ತು ಪಡೆದು ಸೂರು ನೀಡುವ ಸುರಕ್ಷಿತ ಕೈಗಳಿಗಾಗಿ ಮುದ್ದು ನಾಯಿಮರಿಗಳು ಎದುರು ನೋಡುತ್ತಿವೆ.

ಸ್ಥಳ: ದಿ ಫೋರಂ ನೇಬರ್‌ಹುಡ್‌ ಮಾಲ್‌, # 62, ವೈಟ್‌ಫೀಲ್ಡ್‌ ಮುಖ್ಯರಸ್ತೆ, ಪ್ರೆಸ್ಟೀಜ್‌ ಓಜೋನ್‌, ವೈಟ್‌ಫೀಲ್ಡ್‌, ಬೆಂಗಳೂರು–66

ದಿನ: 31ನೇ ಮಾರ್ಚ್‌ 2019

ಸಮಯ: ಮಧ್ಯಾಹ್ನ 12ರಿಂದ ರಾತ್ರಿ 9ರವರೆಗೆ

ಸಂಪರ್ಕ ಸಂಖ್ಯೆ:7838604758

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.