ADVERTISEMENT

ವಾಚಕರ ವಾಣಿ: ಕನಸು ಛಿದ್ರಗೊಳಿಸಿದ ವಿಭಜನೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2021, 20:30 IST
Last Updated 22 ಆಗಸ್ಟ್ 2021, 20:30 IST

ದೇಶ ‘ವಿಭಜನೆಯ ಕ್ರೌರ್ಯದ ನೆನಪಿನ ದಿನ’ ಆಚರಣೆಗೆ ವಿರೋಧ ವ್ಯಕ್ತಪಡಿಸಿರುವ ಕೆ.ಪಿ.ಸುರೇಶ್ ಅವರ ಲೇಖನವನ್ನು (ಪ್ರ.ವಾ., ಆ. 21) ಓದಿ ಮನಸ್ಸಿಗೆ ಅಹಿತವಾಯಿತು. ದೇಶ ವಿಭಜನೆಯು ಕೋಟ್ಯಂತರ ಜನರ ಕನಸುಗಳನ್ನು, ಭಾವೈಕ್ಯ ಭಾವನೆಗಳನ್ನು ಛಿದ್ರಗೊಳಿಸಿತು. ಎಷ್ಟೋ ಪ್ರದೇಶಗಳು ವಿಭಜನೆಯಿಂದ ದಾಯಾದಿಗಳಂತಾಗಿ ಸಾಮಾಜಿಕ, ಆರ್ಥಿಕ ಹಿನ್ನಡೆ ಅನುಭವಿಸುವಂತೆ ಆಗಿರುವುದು ಸತ್ಯವೇ ಆಗಿದೆ. ಹೀಗಿದ್ದಾಗ್ಯೂ ಇಡೀ ಲೇಖನದಲ್ಲಿ ಪ್ರಧಾನಿಯವರನ್ನು ತಪ್ಪಿತಸ್ಥರೆಂದು ಬಿಂಬಿಸುವ ಪ್ರಯತ್ನ ಢಾಳಾಗಿ ಕಾಣುತ್ತಿದೆ. ಸಾಮರಸ್ಯಕ್ಕಾಗಿ ನರೇಂದ್ರ ಮೋದಿಯವರ ಅಫ್ಗಾನಿಸ್ತಾನ, ಪಾಕಿಸ್ತಾನದ ಭೇಟಿಗಳನ್ನು ಲೇಖಕರು ಏಕೆ ಮರೆತರೋ ತಿಳಿಯುತ್ತಿಲ್ಲ!

ಚಂದನ ಶಂಕರ್,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT