ADVERTISEMENT

ಏಕರೂಪದ ಪಠ್ಯ ಅಸಂಗತ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 27 ಮೇ 2020, 20:30 IST
Last Updated 27 ಮೇ 2020, 20:30 IST

ಎಲ್ಲಾ ವಿಶ್ವವಿದ್ಯಾಲಯಗಳಿಗೂ ಏಕರೂಪದ ಪಠ್ಯಕ್ರಮ ಜಾರಿಗೆ ತರಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಅಸಂಗತ. ಉನ್ನತ ಶಿಕ್ಷಣವೆಂಬುದು ಹಲವಿಚಾರಗಳನ್ನು, ವೈವಿಧ್ಯಗಳನ್ನು ಮನನ ಮಾಡಿಕೊಳ್ಳುವುದೇ ಹೊರತು ಉರು ಹೊಡೆದು ಪಾಸಾಗುವುದಲ್ಲ. ಈಗಾಗಲೇ ಓದಲು, ಬರೆಯಲು, ಆಲೋಚಿಸಲು ಕಲಿತಿರುವ ಯುವಜನಾಂಗಕ್ಕೆ ಆ ಕೌಶಲಗಳನ್ನು ಒರೆಗೆ ಹಚ್ಚುವಂತೆ, ಪ್ರಾದೇಶಿಕ ವೈವಿಧ್ಯ, ಭೌಗೋಳಿಕ ವೈವಿಧ್ಯ, ಸಾಂಸ್ಕೃತಿಕ ವೈವಿಧ್ಯ, ಆರ್ಥಿಕ ಏರುಪೇರುಗಳಂತಹ ವಿಚಾರಗಳನ್ನು ಪರಿಗಣಿಸಿ, ಆಯಾ ವಿಶ್ವವಿದ್ಯಾಲಯದ ತಜ್ಞರ ಸಮಿತಿ ಪಠ್ಯಕ್ರಮ ರೂಪಿಸುತ್ತದೆ.

ಸಮಾಜದಲ್ಲಿರುವ ಅಸಮಾನತೆಯನ್ನು ಗುರುತಿಸಿ ರಾಜಕೀಯ, ಆರ್ಥಿಕ ಸಮಾನತೆ ತಂದುಕೊಡುವ ದಿಕ್ಕಿನಲ್ಲಿ ಆಲೋಚಿಸಬೇಕಾದದು ಯುವಜನರ ಆದ್ಯತೆಯಾಗಬೇಕು.

ನಾಗಮಣಿ ಎಸ್.ಎನ್., ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.