ADVERTISEMENT

ಅಭ್ಯಾಸ ಪ‍ಂದ್ಯ: ಭಾರತ ಮಹಿಳಾ ತಂಡಕ್ಕೆ ಸೋಲಿನ ಕಹಿ

ಪಿಟಿಐ
Published 18 ಸೆಪ್ಟೆಂಬರ್ 2021, 12:58 IST
Last Updated 18 ಸೆಪ್ಟೆಂಬರ್ 2021, 12:58 IST
ದೀಪ್ತಿ ಶರ್ಮಾ– ರಾಯಿಟರ್ಸ್ ಚಿತ್ರ
ದೀಪ್ತಿ ಶರ್ಮಾ– ರಾಯಿಟರ್ಸ್ ಚಿತ್ರ   

ಬ್ರಿಸ್ಬೇನ್‌ (ಪಿಟಿಐ): ಭಾರತ ಮಹಿಳಾ ತಂಡವು ಆಸ್ಟ್ರೇಲಿಯಾ ಪ್ರವಾಸವನ್ನು ಸೋಲಿನ ಕಹಿಯೊಂದಿಗೆ ಆರಂಭಿಸಿದೆ. ಶನಿವಾರ ಇಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ 36 ರನ್‌ಗಳಿಂದ ಆತಿಥೇಯ ತಂಡಕ್ಕೆ ಮಣಿಯಿತು.

50 ಓವರ್‌ಗಳ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ರಾಚೇಲ್ ಹೇನ್ಸ್ (65), ಮೆಗ್‌ ಲ್ಯಾನಿಂಗ್‌ (59) ಮತ್ತು ಬೆಥ್ ಮೂನಿ (59) ಅರ್ಧಶತಕ ಗಳಿಸಿದರು. ತಂಡವು ನಿಗದಿತ ಓವರ್‌ಗಳಲ್ಲಿ ಒಂಬತ್ತು ವಿಕೆಟ್ ಕಳೆದುಕೊಂಡು 278 ರನ್‌ ಗಳಿಸಿತು.

ಭಾರತದ ಪರ ಜೂಲನ್ ಗೋಸ್ವಾಮಿ (36ಕ್ಕೆ 2) ಪರಿಣಾಮಕಾರಿ ಬೌಲಿಂಗ್ ಮಾಡಿದರು.

ADVERTISEMENT

ಆಸ್ಟ್ರೇಲಿಯಾದ ಸವಾಲಿನ ಮೊತ್ತಕ್ಕೆ ಪ್ರತಿಯಾಗಿ ಭಾರತ ಏಳು ವಿಕೆಟ್‌ ಕಳೆದುಕೊಂಡು 242 ರನ್‌ ಗಳಿಸಲು ಮಾತ್ರ ಶಕ್ತವಾಯಿತು. ಪೂಜಾ ವಸ್ತ್ರಕರ್‌ (57) ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದರು. ದೀಪ್ತಿ ಶರ್ಮಾ (49), ಯಾಸ್ತಿಕಾ ಭಾಟಿಯಾ (41) ಕೂಡ ಮಿನುಗಿದರು. ಆದರೆ ಉಳಿದ ಆಟಗಾರ್ತಿಯರ ವೈಫಲ್ಯ ಸೋಲಿಗೆ ಕಾರಣವಾಯಿತು.

ಆಸ್ಟ್ರೇಲಿಯಾದ ಆಲ್‌ರೌಂಡರ್‌ ಎಲಿಸ್‌ ಪೆರಿ (38ಕ್ಕೆ 2), ಸ್ಟೆಲ್ಲಾ ಕ್ಯಾಂಪ್‌ಬೆಲ್‌ (38ಕ್ಕೆ 3) ಬೌಲಿಂಗ್‌ನಲ್ಲಿ ಮಿಂಚಿದರು.

ಮಂಗಳವಾರ ನಡೆಯುವ ಮೊದಲ ಏಕದಿನ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.