ADVERTISEMENT

ಕಡಿಮೆ ಖರ್ಚಿನ ಸ್ಪ್ರಿಂಕ್ಲರ್

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 19:30 IST
Last Updated 15 ಅಕ್ಟೋಬರ್ 2012, 19:30 IST
ಕಡಿಮೆ ಖರ್ಚಿನ ಸ್ಪ್ರಿಂಕ್ಲರ್
ಕಡಿಮೆ ಖರ್ಚಿನ ಸ್ಪ್ರಿಂಕ್ಲರ್   

`ಮಾರುಕಟ್ಟೆಗಳಲ್ಲಿ ಸಿಗುವ ಮೈಕ್ರೋ ಸ್ಪ್ರಿಂಕ್ಲರ್‌ಗಳನ್ನು ತೋಟದಲ್ಲಿ ಇಟ್ಟರೆ ನೀರು ಒಂದೇ ಕಡೆ ಹಾಯುತ್ತದೆ, ಉಳಿದ ಕಡೆಗಳಲ್ಲಿನ ಬೆಳೆಗಳಿಗೆ ನೀರು ಪೂರೈಕೆ ಸರಿಯಾಗಿ ಆಗುವುದಿಲ್ಲ ಎಂಬ ಚಿಂತೆ ಕಾಡುತ್ತಿದೆಯೇ, ಒಂದು ವೇಳೆ ಎಲ್ಲೆಡೆ ನೀರು ಪೂರೈಸುವ ಯಂತ್ರಗಳು ಇದ್ದರೂ ದುಬಾರಿ ಬೆಲೆ ಕೊಟ್ಟು ಖರೀದಿ ಮಾಡಬೇಕಲ್ಲ ಎಂಬ ಸಮಸ್ಯೆಯೇ. ಈ ಚಿಂತೆ ಬಿಟ್ಟುಬಿಡಿ. ಕಡಿಮೆ ದರದಲ್ಲಿ ತೋಟದ ಎಲ್ಲೆಡೆ ನೀರು ಪೂರೈಸಿ...~

ಇದು ಸಾಗರ ತಾಲ್ಲೂಕಿನ ಮಾವಿನಸರ ಗ್ರಾಮದ ಕೃಷಿಕ  ಶ್ರಿಪಾದ್ ಅವರ ಮಾತು. ಮಾರುಕಟ್ಟೆಯಲ್ಲಿ ದೊರಕುವ ಮೈಕ್ರೋ ಸ್ಪ್ರಿಂಕ್ಲರ್‌ಗಳ್ಲ್ಲಲಿ ನೀರು ಒಂದೇ ಕಡೆ ಹಾರುವುದರಿಂದ ಶ್ರೀಪಾದ್ ಹೊಸ ಆವಿಷ್ಕಾರ ಮಾಡಿದ್ದಾರೆ. ಪೈಪ್ ಹಾಗೂ ತಂತಿಗಳಷ್ಟನ್ನೇ ಬಳಸಿ ಸ್ಪ್ರಿಂಕ್ಲರ್ ತಯಾರಿಸಿ ಎಲ್ಲ ಬೆಳೆಗಳಿಗೆ ಸಮರ್ಪಕ ನೀರು ಪೂರೈಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಪ್ರಿಂಕ್ಲರ್ ತಯಾರಿಸುವ ಬಗೆ: 1 ಅಡಿ ಉದ್ದದ 12 ಎಮ್‌ಎಮ್ ಪೈಪ್, ಅಲ್ಯೂಮಿನಿಯಮ್ ತಂತಿ , 4 ಇಂಚು ಉದ್ದದ 2 ಎಮ್‌ಎಮ್ ಪೈಪ್ ಅಗತ್ಯ ಇದೆ. 12 ಎಮ್‌ಎಮ್ ಪೈಪ್‌ಗೆ ಮಧ್ಯ 2 ಕಡೆ ತೂತು 2 ಎಮ್‌ಎಮ್ ಪೈಪನ್ನು ತೂರಿಸಿ. ಇದರ ತುದಿ ಭಾಗದ್ಲ್ಲಲಿ ಸಣ್ಣ ಸ್ಪ್ರೇಯರ್ ಅಳವಡಿಸಿ. ಕೊನೆಗೆ 2 ಎಮ್‌ಎಮ್ ಪೈಪಿಗೆ ತಂತಿಯನ್ನು ಸುತ್ತಿ. 12 ಎಮ್‌ಎಮ್ ಪೈಪಿನ ತುದಿ ಭಾಗವನ್ನು ಮಡಚಬೇಕು.
 
`ಈ ತಂತಿ ಸುತ್ತಿದ ಸ್ಪ್ರಿಂಕ್ಲರ್‌ನ್ಲ್ಲಲಿ  ಯಾವ ದಿಕ್ಕಿಗೆ ಬೇಕಾದರೂ ನೀರನ್ನು ಹರಿಸಬಹುದು. ಎತ್ತ ಬೇಕಾದರೂ ಬಾಗುವ ಈ ಸ್ಪ್ರಿಂಕ್ಲರ್‌ಗಳು ತೆಂಗಿನ ಮರಗಳಿಗೆ ಹಾಗೂ ನರ್ಸರಿಗಳಿಗೆ ಹೆಚ್ಚು ಸೂಕ್ತ. ನರ್ಸರಿಗಳ್ಲ್ಲಲಿ  ಕೂಡ ಹೆಚ್ಚು ಹೊತ್ತು ನೀರು ಎ್ಲ್ಲಲಿ ಬೇಕಾಗುವುದೋ ಅಂತಹ ಕಡೆ ತಿರುಗಿಸಬಹುದು.
 
ಹಿಂದೆ ನಾನಾ ರೀತಿಯ ಸ್ಪ್ರಿಂಕ್ಲರ್, ಜೆಟ್‌ಗಳನ್ನು ಬಳಸಿದ್ದರೂ ಇದು ಅತ್ಯುತ್ತಮ. ಇದರಿಂದ ನೀರಿನ ಉಳಿತಾಯವೂ ಆಗುತ್ತದೆ, ಕಡಿಮೆ ಖರ್ಚಿನಲ್ಲಿ ಯಂತ್ರವೂ ಸಿದ್ಧ~ ಎನ್ನುತ್ತಾರೆ ಶ್ರೀಪಾದ್.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.