ADVERTISEMENT

ಕಾಡು ಹಾಗಲಕಾಯಿ

ಸಹನಾ ಕಾಂತಬೈಲು
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST

ಇದು ಕಾಡು ಹಾಗಲ. ಕಾಡುಗಳಲ್ಲಿ ಸಹಜವಾಗಿ ಬೆಳೆಯುವುದರಿಂದ ಈ ಹೆಸರು ಬಂದಿದೆ.ಕಾಡು ಹಾಗಲವನ್ನು ಯಾರೂ ವ್ಯವಸ್ಥಿತವಾಗಿ ಬೇಸಾಯ ಮಾಡಿ ಬೆಳೆಯುವುದಿಲ್ಲ. ಕಾಡಿನಲ್ಲಿ, ಹೊಳೆದಂಡೆಯಲ್ಲಿ, ನೀರಿನ ಆಶ್ರಯ ಇರುವಲ್ಲಿ ತಾನಾಗಿ ಬೆಳೆಯುತ್ತದೆ.

ವರ್ಷವಿಡೀ ಫಸಲು ಕೊಡುತ್ತದೆ. ಹಕ್ಕಿಗಳಿಗೆ ಇದರ ಹಣ್ಣು ಪ್ರಿಯ. ಅವು ಹಣ್ಣು ತಿಂದು ಬೀಜವನ್ನು ಎಲ್ಲೆಂದರಲ್ಲಿ ಹಾಕುತ್ತವೆ. ಅಲ್ಲೆಲ್ಲ ಹಾಗಲ ಬಳ್ಳಿಗಳು ಹುಟ್ಟಿ ಬೆಳೆಯುತ್ತವೆ.
ಕಾಡು ಹಾಗಲ ಬಳ್ಳಿ ಎಲ್ಲ ರೀತಿಯಲ್ಲೂ ಹಾಗಲ ಬಳ್ಳಿಯನ್ನು ಹೋಲುತ್ತದೆ.
 
ಆದರೆ ಕಾಯಿಗಳು ಮಾತ್ರ ಭಿನ್ನ. ಆಮಟೆ ಕಾಯಿ ಗಾತ್ರದ ದುಂಡನೆಯ ಕಾಡು ಹಾಗಲ ಕಾಯಿಗಳು ಮೂರು ಇಂಚಿಗಿಂತ ಹೆಚ್ಚು ಉದ್ದ ಬೆಳೆಯುವುದಿಲ್ಲ. ರುಚಿ ಥೇಟ್ ಹಾಗಲಕಾಯಿಯೇ. ಆದರೆ ಔಷಧೀಯ ಗುಣಗಳು ಕಾಡು ಹಾಗಲದಲ್ಲಿ ಹೆಚ್ಚು. ಸಕ್ಕರೆ ಕಾಯಿಲೆಗೆ ಇದು ರಾಮಬಾಣ ಎಂದು ನಾಟಿ ವೈದ್ಯರು ಹೇಳುತ್ತಾರೆ.

ಹಾಗಲಕಾಯಿಗಳಿಂದ ಪಲ್ಯ, ಸಾಂಬಾರ್, ಮೇಲೋಗರ ಮಾಡಬಹುದು. ಗ್ರಾಮೀಣ ಜನರು ಕಾಡುಹಾಗಲ ಹುಡುಕಿಕೊಂಡು ಬೆಟ್ಟ-ಗುಡ್ಡಗಳಿಗೆ ಸಂಚರಿಸುವುದನ್ನು ಮಲೆನಾಡಿನಲ್ಲಿ ನೋಡಬಹುದು.

ಕಾಡು ಹಾಗಲವನ್ನು ಮನೆಯಂಗಳದಲ್ಲಿ ನೆಟ್ಟು ಬೆಳೆಸಬಹುದು. ಬೀಜ ಬೇಕಾದಲ್ಲಿ ಮತ್ತು ಹೆಚ್ಚಿನ ಮಾಹಿತಿ ಬೇಕಿದ್ದರೆ ಕರೆ ಮಾಡಬೇಕಾದ ಮೊಬೈಲ್ ನಂಬರ್-8904488042(ಎಸ್.ಕೆ.ಪುರುಷೋತ್ತಮ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.