ADVERTISEMENT

ಗಂಟೆ ಮೆಣಸು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST

ಮಾರುಕಟ್ಟೆಯಲ್ಲಿ ಈಗ ಹಳದಿ, ಕೆಂಪು ಬಣ್ಣದ ದೊಣ್ಣೆ ಮೆಣಸಿನಕಾಯಿಗಳು ಸಿಗುತ್ತವೆ. ನೋಡಲು ಆಕರ್ಷಕವಾಗಿ ಕಾಣುವ ಈ ತರಕಾರಿ ಮೆಣಸಿನಕಾಯಿಗಳು ಹೆಚ್ಚು ದಿನ ಬಾಳಿಕೆ ಬರುವುದಿಲ್ಲ. ದೊಣ್ಣೆ ಮೆಣಸಿನದೇ ರುಚಿ ಹೊಂದಿರುವ  ಈ ಹಳದಿ ಮೆಣಸನ್ನು ಗಂಟೆ ಮೆಣಸು, ಹಳದಿ ಮೆಣಸು ಎಂಬ ಹೆಸರಿನಿಂದ ಕರೆಯುತ್ತಾರೆ.

ಮಲೆನಾಡಿನ ಕೈ ತೋಟಗಳಲ್ಲಿ ಇದು ಕಾಣಸಿಗುತ್ತದೆ. ಹೆಚ್ಚು ದಿನ ಕೆಡದೆ ಉಳಿಯುವ ಗುಣ ಇರುವ ಈ ಮೆಣಸಿನ ಕಾಯಿಗಳಲ್ಲಿ ಖಾರ ಇರುವುದಿಲ್ಲ. ವಿಶಿಷ್ಟ ರುಚಿಯ ಈ ಮೆಣಸಿನ ಕಾಯಿಗಳನ್ನು ಅಲ್ಸರ್, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುವವರೂ ತಿನ್ನಬಹುದು.

ಆಕರ್ಷಕ ಹಳದಿ ಬಣ್ಣದ ವೆುಣಸಿನ ಕಾಯಿ ಗಿಡಗಳು ಎಲ್ಲ  ಬಗೆಯ ವಾತವರಣಕ್ಕೂ ಹೊಂದಿಕೊಂಡು ಬೆಳೆಯುತ್ತವೆ. ವಿಷೇಶ ಆರೈಕೆ ಅಗತ್ಯವಿಲ್ಲ. ಹಣ್ಣಾದ ಕಾಯಿಗಳನ್ನು ಒಣಗಿಸಿ ಪುಡಿಮಾಡಿ ಇಟ್ಟುಕೊಂಡು ಬಳಸಬಹುದು.
 
ಅಡುಗೆ ಪದಾರ್ಥಗಳಿಗೆ ಆಕರ್ಷಕ ಹಳದಿ ಬಣ್ಣದ ಬರುತ್ತದೆ. ಮಾಡಿದ ಅಡಿಗೆಯನ್ನು ಅಲಂಕಾರಕ್ಕೂ ಈ ಮೆಣಸಿನ ಕಾಯಿಗಳನ್ನು ಬಳಸಬಹುದು. ನಗರವಾಸಿಗಳು ಈ ಮೆಣಸಿನ ಕಾಯಿ ಗಿಡಗಳನ್ನು ಕುಂಡಗಳಲ್ಲಿ ಬಳಸಬಹದು. ಬೀಜಗಳಿಗೆ  ತೇಜು ಪೂಜಾರಿ ಅವರನ್ನು ಸಂಪರ್ಕಿಸಬಹುದು ಅವರ ಮೊಬೈಲ್ ನಂಬರ್ 9448421924.      

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.