ADVERTISEMENT

ಚಂದ್ರ ಹಲಸು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2011, 19:30 IST
Last Updated 31 ಆಗಸ್ಟ್ 2011, 19:30 IST
ಚಂದ್ರ ಹಲಸು
ಚಂದ್ರ ಹಲಸು   

ಹಲಸಿನ ಹಣ್ಣುಗಳಲ್ಲಿ ಹಲವಾರು ತಳಿಗಳಿವೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ಜನಪ್ರಿಯ. ಆಯಾ ಪ್ರದೇಶದ ಮಣ್ಣಿನ ಗುಣ ಹೀರಿಕೊಂಡು ಬೆಳೆಯುವ ಮರಗಳಲ್ಲಿ ಬಿಡುವ ಹಣ್ಣುಗಳಿಗೆ ವಿಶಿಷ್ಟ ರುಚಿ ಬರುತ್ತದೆ. ರೈತರು ರುಚಿಯಾದ ಹಣ್ಣಿನ  ಬೀಜಗಳನ್ನು ನಾಟಿ ಮಾಡಿ ಅಥವಾ ಕಸಿ ಕಟ್ಟಿ ಗಿಡ ಬೆಳೆಸಿಕೊಳ್ಳುವುದನ್ನು ಕಾಣಬಹುದು.

ಹಲಸಿನ ಹಣ್ಣುಗಳಿಗೆ ಹೆಚ್ಚು ಬೇಡಿಕೆ ಇದೆ. ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹಲಸಿನ ಹಣ್ಣಿನ ಉತ್ಪನ್ನಗಳಿಗೆ ಮೌಲ್ಯ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ.

ಚಿತ್ರದಲ್ಲಿ ಕಾಣುವ ಹಲಸಿನ ಹಣ್ಣುಗಳು ಚಂದ್ರ ತಳಿಯವು. ವಿಶಿಷ್ಟ ರುಚಿ ಹಾಗೂ ಕೇಸರಿ ಬಣ್ಣದ ತೊಳೆಗಳು ಸೂಜಿಗಲ್ಲಿನಂತೆ ಆಕರ್ಷಿಸುತ್ತವೆ. ಈ ತಳಿಯ ಹಲಸು ಮಂಡ್ಯ ಹಾಗೂ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಕಾಣಬಹುದು.

ನಮ್ಮ ಮನೆಯ ಅಂಗಳದಲ್ಲಿರುವ ಚಂದ್ರ ಹಲಸು ಅತ್ಯಂತ ವಿಶಿಷ್ಟವಾದದು. ಹಣ್ಣಿನಲ್ಲಿ ಶೇ 90 ತೊಳೆಗಳಿರುತ್ತವೆ. ಈ ಮರದ ಹಣ್ಣು ಜುಲೈ- ಆಗಸ್ಟ್ ತಿಂಗಳಲ್ಲಿ ಕೊಯ್ಲಿಗೆ ಬರುತ್ತವೆ.

ವಿಶಿಷ್ಟ ರುಚಿ ಹಾಗೂ ಪರಿಮಳದ ಚಂದ್ರ ಹಲಸಿನ ಮರದ ಬೀಗಳನ್ನು ಸಂಗ್ರಹಿಸಿದ್ದೇನೆ. ಆಸಕ್ತರು ಬೀಜಗಳನ್ನು ಪಡೆಯಬಹುದು. ಕಸಿ ಕಟ್ಟುವ ವಿಧಾನನ ನನಗೆ ಗೊತ್ತಿಲ್ಲ. ಆಸಕ್ತರು ಕಸಿ ಕಟ್ಟುವುದನ್ನು ಕಲಿಸಿಕೊಟ್ಟರೆ ಈ ಮರದ ಕೊಂಬೆಗಳಿಗೆ ಕಸಿ ಕಟ್ಟಿ ಹೊಸ ಸಸಿಗಳನ್ನು ಬೆಳೆಸಿಕೊಳ್ಳಬಹುದು. ಬೀಜ ಬೇಕಾದವರು ಅಂಚೆ ವೆಚ್ಚ ಭರಿಸಿದರೆ ಸಾಕು. ಸಂಪರ್ಕಿಸಬೇಕಾದ ದೂರವಾಣಿ- 9482114173.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.