ADVERTISEMENT

ಕುವೆಂಪು ಪದ ಸೃಷ್ಟಿ: ಮೂಡುವೆಣ್ಣು

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 2:58 IST
Last Updated 22 ಜೂನ್ 2025, 2:58 IST
<div class="paragraphs"><p>ಕುವೆಂಪು</p></div>

ಕುವೆಂಪು

   

ಮೂಡುವೆಣ್ಣು

ಮೂಡುವೆಣ್ಣು (ನಾ). ಪೂರ್ವದಿಕ್ಕಿನ ಹೆಣ್ಣು

ADVERTISEMENT

ಕುವೆಂಪು ಅವರು ಸೂರ್ಯೋದಯವನ್ನು ‘ಮೂಡುವೆಣ್ಣು’ ಪದದಿಂದ ಹೀಗೆ ವರ್ಣಿಸಿದ್ದಾರೆ:

ಪೂರ್ವದಿಕ್ಕಿನ ಹೆಣ್ಣಿನ ನಿದ್ದೆಗಣ್ಣು ತನ್ನ ಇರುಳು ಎವೆಯ ಕಪ್ಪು ರೆಪ್ಪೆಯನ್ನು ಅರಳಿಸಲು ಬಾನು ಮತ್ತು ಭುವಿಯ ಬೆಸುಗೆ ಹರಿಯಿತು.

‘ಮೂಡುವೆಣ್ಣಿನ ನಿದ್ದೆಗಣ್ಣು ತನ್ನಿರುಳೆವೆಯ

ಕರ್ಪುರೆಪ್ಪೆಯನರಳಿಸಲ್ ಬೆಸುಗೆ ಬಿರ್ಚಿದುದೊ

ಬಾನ್ ಭುವಿಗೆನಲ್.’ 

ಮದನನುರಿ

ಮದನನುರಿ (ನಾ). ಕಾಮದಿಂದ ಉಂಟಾದ ಜ್ವಾಲೆ

ಚಿತ್ರಾಂಗದೆಯ ರೂಪು ಲಾವಣ್ಯಕ್ಕೆ ಮನಸೋತ ಅರ್ಜುನನು ‘ನಿನ್ನ ಸಂಗವೆ ಪರಮ ಮಂಗಲ’ ಎಂದು ಹೇಳುವನು. ತುಂಬು ಹಂಬಲದ ನೇತ್ರ ಸೂತ್ರದಿಂದ ಬಂಧಿಸಿ ಎಳೆಯುವಂತೆ ನೋಡುವನು. ಆಗ ಚಿತ್ರಾಂಗದೆ ಕಾಮಜ್ವಾಲೆಗೆ ಒಳಗಾದುದನ್ನು ಕುವೆಂಪು ‘ಮದನನುರಿ’ ಪದದಿಂದ ಹೀಗೆ ಬಣ್ಣಿಸಿದ್ದಾರೆ:

‘ಮದನನುರಿ

ಗಾತ್ರ ಸಂಪೂರ್ಣದಲಿ ನಾಳನಾಳಂಬೊಕ್ಕು

ದಹಿಸಿದತ್ತೊಡನೊಡನೆ’ 

ಚೆಂಬಳದಿ

ಚೆಂಬಳದಿ (ನಾ). ಕೆಂಪು ಮಿಶ್ರಿತವಾದ ಹಳದಿಯ ಬಣ್ಣ

ಕುವೆಂಪು ಅವರು - ಬಾನು ಮತ್ತು ಭುವಿಯ ಬೆಸುಗೆ ಹರಿದು ಹೊಮ್ಮಿದ ಬೆಳಕಿನ ಹೊನಲನ್ನು- ‘ಚೆಂಬಳದಿ’ ಎಂದು ಹೀಗೆ ವರ್ಣಿಸಿದ್ದಾರೆ:

‘ಬಿರುಕುದೋರ್ದುಳ್ಕಿದುದು ಪೊನಲ್

ಚೆಂಬಳದಿಯಾ, ಮತಂಗನ ಪೆಸರ ಮಡುವಿನೊಳ್

ನೀರು ಓಕುಳಿಯಾಯ್ತು.’ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.