ಯಕ್ಷಗಾನ ಪ್ರದರ್ಶನ
ಸಾಂದರ್ಭಿಕ ಚಿತ್ರ
ಸಿರಿಕಲಾ ಮೇಳ ಹಾಗೂ ಅತಿಥಿ ಕಲಾವಿದರೀಂದ ಯಕ್ಷ ತ್ರಿವಳಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅದರ ಸಮಾರೋಪ ಸಮಾರಂಭ ಅಕ್ಟೋಬರ್ 20ರಂದು ಭಾನುವಾರ ಸಂಜೆ 5 ಗಂಟೆಗೆ ಆಯೋಜಿಸಲಾಗಿದೆ.
ಇದೇ ಸಂದರ್ಭದಲ್ಲಿ ಸಿರಿಕಲಾ ಪುರಸ್ಕಾರ ಮತ್ತು ಸಿರಿಕಲಾಪೋಷಕ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು, ಭಾಗವತರಾದ ಕೆ.ಪಿ.ಹೆಗಡೆ ಅವರಿಗೆ ಸಿರಿಕಲಾಪುರಸ್ಕಾರ ನೀಡಲಾಗುವುದು. ವಕೀಲ ಸುಧಾಕರ ಪೈ ಅವರಿಗೆ ಸಿರಿಕಲಾಪೋಷಕ ಪ್ರದಾನ ಮಾಡಲಾಗುವುದು. ಅತಿಥಿಗಳಾಗಿ ಶಾಸಕ ಕೆ.ಗೋಪಾಲ್ಯ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ , ಕಲಾಪೋಷಕ ಎಚ್.ಪಿ.ವಾಸುದೇವ ರಾವ್ ಇರಲಿದ್ದಾರೆ.
ಪಾಂಚಜನ್ಯ ಪ್ರದರ್ಶನ
ನಂತರ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ವಿರಚಿತ ‘ಪಾಂಚಜನ್ಯ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ರಂಗದಲ್ಲಿ: ಸರ್ವಶ್ರೀ, ಸರ್ವೇಶ್ವರ ಹೆಗಡೆ ಮುರೂರು, ಸುಬ್ರಾಯ್ ಹೆಬ್ಬಾರ್, ವಿನಯ್ ಆರ್ ಶೆಟ್ಟಿ, ಶಶಾಂಕ್ ಆಚಾರ್, ಶ್ರೀನಿವಾಸ ಪ್ರಭು, ಕಾರ್ತಿಕ ಧಾರೇಶ್ವರ, ಶ್ರೀಧರ ಭಟ್ ಕಾಸರಕೋಡು, ಪ್ರಶಾಂತವರ್ಧನ ಮುರೂರು, ವಿನಯ್ ಹೋಸ್ತೋಟ, ಮಂಜುನಾಥ ಭಟ್, ಅರ್ಪಿತಾ ಹೆಗಡೆ, ನಾಗಶ್ರೀ ಗೀಜಗಾರ್, ನಿಹಾರಿಕಾ ಭಟ್, ಸಿಂಧುಶ್ರೀ ಹೆಬ್ಬಾರ್, ಮಾನಸಾ ಉಪಾಧ್ಯಾಯ ಇರಲಿದ್ದಾರೆ.
ಸ್ಥಳ: ಉತ್ತರ ಕನ್ನಡ ಸಂಘದ ಸಭಾಭವನ, ನಂದಿನಿ ಬಡಾವಣೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.