ADVERTISEMENT

ಇವಳೇ ಯಾಕೆ

ಡಾ.ಮಾರ್ಷಲ್ ಶರಾಂ
Published 23 ಆಗಸ್ಟ್ 2014, 19:30 IST
Last Updated 23 ಆಗಸ್ಟ್ 2014, 19:30 IST

ನಾಕು ರಸ್ತೆ ಕೂಡಾಟ
ಸೀರೆ ಸೀಳಿ ಹರಿದ ಬಸಿರು
ಕಾಮಕೇಳಿ ಕೀಚಕ ಉಸಿರು
ತೊಡೆ ನೆತ್ತರ ತೊನೆ
ಅರಸಿದೆ ಎದೆ  ನೋವ ಕೊನೆ

ಎರಗಿ ಗಿಡುಗ ಅವಳ ಜೋಡಾಟ
ಕುಪ್ಪಳಿಸಿ ಹುಡುಗ
ಮೂರರ ಕೂಸು
ಮೊರೆದಿದೆ ಕಾಯೋ ಬೇಗ

ಹೆತ್ತನಕೆ ಬರೆ ಇಟ್ಟ ಗಂಡುದರ್ಪ
ಭಯಭಯಂಕರ ಪುರುಷಗರ್ವ
ಕನಸು ಕೊಂದು ತೆವಳಿದೆ ಸರ್ಪ
ಕಾಮೋತ್ಸವ ಪುಲ್ಲಿಂಗಪರ್ವ

ADVERTISEMENT

ದೊಡ್ಡಿಯ  ಕಂದ ಕೊಟ್ಟಿಗೆಯ ಗೊಡ್ಡಿ
ಮುರುಕು ಮಾಡಿನ ಹುಚ್ಚಿ ಪಾಳಿ ಕೆಲಸದಾಕೆ
ಸುರತ ರಥಗಾಲಿಗೆ ಸಿಕ್ಕು ನಲುಗುವಾಕೆ
ಇವಳೇ ಯಾಕೆ
ಪಕ್ಷಪಾತಿ ರಥಶಿಲ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.