ADVERTISEMENT

ಒಂಚೂರು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 19:59 IST
Last Updated 21 ಸೆಪ್ಟೆಂಬರ್ 2013, 19:59 IST

ಸಿಬ್ಬಂದಿಗೆ ಮೃಗಗಳ ವೇಷ
ಚೀನಾದ ತೈಯುಆನ್‌ನ ಮೃಗಾಲಯದಲ್ಲಿ ಈ ವರ್ಷ ಏಪ್ರಿಲ್‌ನಲ್ಲಿ ಸಿಬ್ಬಂದಿಗಾಗಿ ನಡೆದ ಡ್ರಿಲ್ ಕಾರ್ಯಕ್ರಮವನ್ನು ಕಳೆಗಟ್ಟಿಸಲು ಹೊಸ ಚಿಂತನೆ ನಡೆಸಿದ್ದರು. ಸಿಬ್ಬಂದಿಯೇ ಮೃಗಗಳ ವೇಷ ತೊಟ್ಟು ಅಲ್ಲೆಲ್ಲಾ ಸರ್ಕಸ್ ಮಾಡಿದರು. ಅದನ್ನು ಕಂಡು ಪ್ರಾಣಿಗಳೂ ನಕ್ಕವೇನೋ?

ಪೋಷಕಾಂಶಭರಿತ ಒಂಟೆ ಹಾಲು
ಒಂಟೆಯ ಹಾಲಿನಲ್ಲಿ ಪೋಷಕಾಂಶ ಹೆಚ್ಚಾಗಿರುತ್ತದೆ. ಮರುಭೂಮಿಯಲ್ಲಿ ಹಸುವಿನ ಹಾಲಿಗೆ ಪರ್ಯಾಯವಾಗಿ ಒಂಟೆಗಳ ಹಾಲನ್ನು ಬಳಸುತ್ತಾರೆ. ಒಂಟೆಯ ಹಾಲು ಮೊಸರಾಗುವುದಿಲ್ಲ.

ಎಡಿಸನ್ ಪ್ರಯೋಗ
1885ರಲ್ಲಿ ಥಾಮಸ್ ಎಡಿಸನ್ ‘ಗನ್‌ಕಾಟನ್’ (ಹೊತ್ತಿ ಉರಿಯುವ ರಾಸಾಯನಿಕ) ಬಳಸಿ ಹೆಲಿಕಾಪ್ಟರ್ ಪ್ರಯೋಗಕ್ಕೆ ಕೈಹಾಕಿದರು. ಅದು ಸ್ಫೋಟಿಸಿ ಅವರ ಕಾರ್ಖಾನೆ ಸುಟ್ಟು ಭಸ್ಮವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT