ADVERTISEMENT

ಒಂಚೂರು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 19:30 IST
Last Updated 7 ಡಿಸೆಂಬರ್ 2013, 19:30 IST
ಒಂಚೂರು
ಒಂಚೂರು   

ಪುಣ್ಯಸ್ನಾನದ ಸ್ಥಳ
ಹರಿಯಾಣದ ಕುರುಕ್ಷೇತ್ರದಲ್ಲಿರುವ ಬ್ರಹ್ಮ ಸರೋವರ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಸ್ನಾನ ಮಾಡುವ ಸ್ಥಳ. ಸೂರ್ಯಗ್ರಹಣದ ಸಂದರ್ಭದಲ್ಲಿ ಸುಮಾರು 5 ಲಕ್ಷ ಭಕ್ತರು ಇಲ್ಲಿಗೆ ಸ್ನಾನ ಮಾಡಲು ಬರುತ್ತಾರೆ.

ಪ್ರೀತಿಯ ಚೆಂಡು
ಅಮೆರಿಕದ ಲೈನ್‌ ಬ್ರಯಾಂಟ್‌ ಎಂಬಾಕೆ ತನ್ನ ಪತಿ ಮೃತಪಟ್ಟ ಮೇಲೆ ಅವರ ದೇಹವನ್ನು ಸುಟ್ಟು, ಅದರ ಬೂದಿಯನ್ನು ಬಳಸಿ ಒಂದು ಸಣ್ಣ ಕಾಂಕ್ರೀಟ್‌ ಚೆಂಡನ್ನು ರೂಪಿಸಿದರು. 0.9 ಮೀಟರ್‌ ವ್ಯಾಸದ ಆ ಚೆಂಡನ್ನು ಫ್ಲಾರಿಡಾದ ಕರಾವಳಿಯಲ್ಲಿ ಸಮುದ್ರದೊಳಗೆ ಹಾಕಿದರು. ಪತಿಯ ಪ್ರೀತಿಯ ದ್ಯೋತಕವಾದ ಆ ಚೆಂಡನ್ನು ಹವಳ ಸುತ್ತುವರಿಯುತ್ತದೆ. ಅದರಲ್ಲಿ ಜಲಚರಗಳು ಪ್ರೀತಿಯಿಂದ ವಾಸ ಮಾಡುತ್ತವೆ ಎಂಬುದು ಅವರ ಭಾವನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.