ADVERTISEMENT

ಕುಂತಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 11:21 IST
Last Updated 16 ಜೂನ್ 2018, 11:21 IST
ಕುಂತಿ
ಕುಂತಿ   

ಕುಂತಿಗೆ ಪೃಥಾ ಎನ್ನುವ ಹೆಸರೂ ಇದೆ. ಈಕೆ ಪಾಂಡುವಿನ ತಾಯಿ. ಯುಧಿಷ್ಠಿರ, ಭೀಮ ಮತ್ತು ಅರ್ಜುನರ ತಾಯಿ. ಕುಂತಿ ಚಿಕ್ಕವಳಿದ್ದಾಗ ದೂರ್ವಾಸ ಮುನಿಗಳು ಆಕೆಗೆ ಒಂದು ಮಂತ್ರವನ್ನು ಉಪದೇಶಿಸಿದ್ದರು. ಈ ಮಂತ್ರವನ್ನು ಪಠಿಸಿ, ಕುಂತಿ ತನ್ನ ಇಚ್ಛೆಯ ದೇವರಿಂದ ಸಂತಾನ ಪಡೆಯಬಹುದಿತ್ತು. ಈ ಮಂತ್ರ ಕಲಿತ ಉತ್ಸಾಹದಲ್ಲಿ ಸೂರ್ಯ ದೇವನನ್ನು ಆವಾಹನೆ ಮಾಡಿ, ಕರ್ಣನನ್ನು ಹೆತ್ತಳು.

ಮದುವೆ ಆಗುವ ಮುನ್ನವೇ ಮಕ್ಕಳಾದರೆ ಸಮಾಜದಲ್ಲಿ ಮುಖ ತೋರಿಸುವುದು ಹೇಗೆ ಎಂದು ಕುಂತಿ ಶಿಶು ಕರ್ಣನನ್ನು ತೊರೆದಳು. ಕುಂತಿಯು ಪಾಂಡವರ ಪಾಲಿಗೆ ಅಕ್ಕರೆಯ ಅಮ್ಮನಾಗಿದ್ದಳು. ಮಹಾಭಾರತ ಯುದ್ಧದ ನಂತರ ಕುಂತಿಯು, ಧೃತರಾಷ್ಟ್ರ ಹಾಗೂ ಗಾಂಧಾರಿ ಜೊತೆ ವನವಾಸಕ್ಕೆ ಹೋಗುತ್ತಾಳೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT