‘ಮಾಸ್ತಿಯವರ ಸಣ್ಣಕಥೆಗಳು’ ಕನ್ನಡದ ಅಪೂರ್ವ ಕೃತಿಗಳಲ್ಲೊಂದು. ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತ ಸಂದರ್ಭದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರನ್ನು ‘ಕನ್ನಡ ಸಾಹಿತ್ಯ ಪರಿಷತ್’ ಆತ್ಮೀಯವಾಗಿ ಅಭಿನಂದಿಸಿತು (ಮಾರ್ಚ್ 12, 1969).
ಅಭಿನಂದನಾ ಸಮಾರಂಭದಲ್ಲಿ ಮಾಸ್ತಿಯವರೊಂದಿಗೆ, ಅಂದಿನ ‘ಕಸಾಪ’ ಅಧ್ಯಕ್ಷರಾದ ಜಿ. ನಾರಾಯಣ ಹಾಗೂ ಹಿರಿಯ ಲೇಖಕರಾದ ವಿ. ಸೀತಾರಾಮಯ್ಯ, ಎ.ಎನ್. ಮೂರ್ತಿರಾವ್, ಪ್ರೊ. ಜಿ. ವೆಂಕಟಸುಬ್ಬಯ್ಯ ಅವರನ್ನು ಕಾಣಬಹುದು.
ಪ್ರಸ್ತುತ ‘ಪ್ರಶಸ್ತಿ ವಾಪಸಾತಿ’ ಘಟನೆಗಳು ಚಾಲ್ತಿಯಲ್ಲಿರುವ ಸಂದರ್ಭದಲ್ಲಿ, ಕನ್ನಡ ಸಾಹಿತ್ಯ ಕ್ಷೇತ್ರದ ಅಮೃತಕ್ಷಣವೊಂದರ ದಾಖಲೆಯಂತಿರುವ ಈ ಚಿತ್ರ ಹಲವು ಸಂಗತಿಗಳನ್ನು ಹೇಳುವಂತಿದೆ.
ಪ್ರಜಾವಾಣಿ ಆರ್ಕೈವ್ಸ್ : ಟಿ.ಎಲ್. ರಾಮಸ್ವಾಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.