ADVERTISEMENT

ನಾಯಿಯ ಸಣ್ಣತನ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 19:30 IST
Last Updated 12 ಫೆಬ್ರುವರಿ 2011, 19:30 IST

ಅದು ಯಾರಿಗೂ ಒದೆಯದ, ಯಾರಿಗೂ ತಿವಿಯದ ಹಸು. ಅದನ್ನು ಕಂಡರೆ ಮನೆಯವರಿಗೆಲ್ಲ ಅಚ್ಚುಮೆಚ್ಚು. ಅದೇ ಮನೆಯ ಕಾವಲಿಗಿದ್ದ ನಾಯಿಗೆ ಹಸುವನ್ನು ಕಂಡರೆ ಅಸೂಯೆ.

ಒಂದು ದಿನ ಹಸಿ ಹುಲ್ಲು ತಿನ್ನಿಸಲು ಹಸುವನ್ನು ಗದ್ದೆ ಬಯಲಿಗೆ ಕರೆದೊಯ್ಯಲಾಗಿತ್ತು. ಹಸು ಬಿರುಬಿಸಿಲಲ್ಲಿ ನಿಂತಿತ್ತು. ಆಗ ಅಲ್ಲಿಗೆ ಬಂದ ನಾಯಿಗೆ ಎಲ್ಲಿಯೂ ನೆರಳು ಕಾಣದೇ ಬೇಸರವಾಯಿತು. ಹಸುವಿನ ನೆರಳಲ್ಲಿ ಹೋಗಿ ಕುಳಿತುಕೊಳ್ಳಲು ನಿರ್ಧರಿಸಿತು.

ಅದು ನಿಧಾನವಾಗಿ ಹಸುವಿನ ನೆರಳಲ್ಲಿ ಹೋಗಿ ಮಲಗಿ ವಿಶ್ರಾಂತಿ ಪಡೆಯಿತು. ದಣಿವು ಆರಿದ ಮೇಲೆ ಜಂಭದಿಂದ, ‘ನಾನು ಇನ್ನೂ ನಿನ್ನನ್ನು ಕಾವಲು ಕಾಯಬೇಕೆ? ಇಲ್ಲಾ ಹೊರಡಲೇ?’ ಎಂದು ಹಸುವನ್ನು ಕೇಳಿತು.

ಆಗ ಹಸು, ‘ನೀನು ನನ್ನ ನೆರಳಿನಲ್ಲಿ ಕುಳಿತು ವಿಶ್ರಾಂತಿ ಪಡೆದುಕೊಂಡೆ. ಈಗ ನನ್ನ ನೆರವಿಗಾಗಿ ಇಲ್ಲಿದ್ದಂತೆ ವರ್ತಿಸುತ್ತಿರುವೆ. ನನ್ನಿಂದ ಉಪಕಾರ ಪಡೆದ ನೀನು ನನಗೆ ವಂದಿಸಿದ್ದರೆ ಇಷ್ಟು ಚಿಕ್ಕ ಪ್ರಾಣಿಗೆ ಎಷ್ಟು ದೊಡ್ಡ ಗುಣವಿದೆ ಎಂದು ನಾನು ಖುಷಿಯಾದರೂ ಪಡುತ್ತಿದ್ದೆ. ಆದರೆ ನೀನು ನಿನ್ನ ಸಣ್ಣತನವನ್ನು ಪ್ರದರ್ಶಿಸಿದೆ’ ಎಂದಿತು.
ನಾಯಿ ಅಪಮಾನದಿಂದ ತಲೆ ತಗ್ಗಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.