ADVERTISEMENT

ನೊಬೆಲ್ ಗರಿಗಳು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 19:30 IST
Last Updated 25 ಫೆಬ್ರುವರಿ 2012, 19:30 IST
ನೊಬೆಲ್ ಗರಿಗಳು
ನೊಬೆಲ್ ಗರಿಗಳು   

ಮಿನುಗು ಮಿಂಚು

ವರ್ಷಗಳ ಪರಿಶ್ರಮ ನೊಬೆಲ್ ಪ್ರಶಸ್ತಿತರಬಲ್ಲದು. 2011ರಲ್ಲಿ ಈ ಪ್ರಶಸ್ತಿಗೆ ಭಾಜನರಾದವರ ಸಂಕ್ಷಿಪ್ತ ಟಿಪ್ಪಣಿ ಇದು.

ಭೌತವಿಜ್ಞಾನ
ಭೌತಶಾಸ್ತ್ರದ ಸಾಧನೆಗೆ ಕೊಡಮಾಡುವ ನೊಬೆಲ್ ಪ್ರಶಸ್ತಿಯ ಅರ್ಧ ಭಾಗ ಅಮೆರಿಕದ ಸಾಲ್ ಪರ್ಲ್‌ಮಟರ್‌ಗೆ ಸಂದಿತು. ಇನ್ನರ್ಧ ಭಾಗ ಆಸ್ಟ್ರೇಲಿಯಾದ ಬ್ರಯಾನ್ ಪಿ.ಶ್ಮಿಟ್ ಹಾಗೂ ಅಮೆರಿಕದ ಆಡಮ್ ಜಿ.ರೀಸ್‌ಗೆ ಜಂಟಿಯಾಗಿ ಕೊಡಲಾಯಿತು. ಸೂಪರ್‌ನೋವಾ ಮೂಲಕ ಇವರು ವಿಶ್ವ ವಿಸ್ತೃತಗೊಳ್ಳುತ್ತಿರುವ ವೇಗದ ಕುರಿತು ಸಂಶೋಧನೆ ನಡೆಸಿದ್ದರು.

ADVERTISEMENT

ವೈದ್ಯಕೀಯ ವಿಜ್ಞಾನ
ಅಮೆರಿಕದ ಬ್ರೂಸ್ ಎ.ಬ್ಯೂಟ್ಲರ್ ಹಾಗೂ ಫ್ರಾನ್ಸ್‌ನ ಜ್ಯೂಲ್ಸ್ ಎ.ಹಾಫ್‌ಮನ್ ಸ್ವಾಭಾವಿಕ ರೋಗನಿರೋಧಕ ಶಕ್ತಿ ವರ್ಧಿಸುವ ಕುರಿತು ನಡೆಸಿದ ಸಂಶೋಧನೆಗಾಗಿ ಪ್ರಶಸ್ತಿಗೆ ಭಾಜನರಾದರು. ಈ ಇಬ್ಬರಿಗೂ ಪ್ರಶಸ್ತಿಯ ಅರ್ಧ ಪಾಲು ಸಂದರೆ, ಉಳಿದರ್ಧ ಕೆನಡಾದ ರಾಲ್ಫ್ ಎಂ. ಸ್ಟೋನ್‌ಮನ್‌ಗೆ ಸಂದಿತು. `ಮಾರ್ಪಡಿಸಿದ ರೋಗ ನಿರೋಧಕ ಶಕ್ತಿ~ ವಿಷಯದಲ್ಲಿ ಅವರು ಸಂಶೋಧನೆ ನಡೆಸಿದ್ದರು.

ಸಾಹಿತ್ಯ
ಸ್ವೀಡನ್‌ನ ಕವಿ ತೊಮಸ್ ತ್ರಾನ್ಸ್ ತೋಮರ್ ವಾಸ್ತವಕ್ಕೆ ಹತ್ತಿರವಾದ ಅದ್ಭುತ ರೂಪಕಗಳನ್ನು ಕೊಟ್ಟಿದ್ದಾರೆಂದು ಅವರಿಗೂ ನೊಬೆಲ್ ಪ್ರಶಸ್ತಿ ಒಲಿಯಿತು. ಎರಡನೇ ವಿಶ್ವಯುದ್ಧದ ನಂತರ ಸ್ಕ್ಯಾಂಡಿವೇನಿಯಾದ ಶ್ರೇಷ್ಠ ಕವಿಗಳಲ್ಲಿ ಒಬ್ಬರೆಂದು ಟ್ರಾನ್ಸ್‌ತೊಮರ್ ಗುರುತಾಗಿದ್ದಾರೆ.

ರಾಸಾಯನಿಕ ಶಾಸ್ತ್ರ
ಇಸ್ರೇಲ್ ವಿಜ್ಞಾನಿ ಡ್ಯಾನ್ ಶೆಚ್‌ಮನ್ `ಕ್ವಾಸಿಕ್ರಿಸ್ಟಲ್ಸ್~ ಶೋಧಕ್ಕೆಂದು ರಾಸಾಯನಿಕ ವಿಜ್ಞಾನದ ನೊಬೆಲ್ ಗೌರವಕ್ಕೆ ಪಾತ್ರರಾದರು. ಹರಳುಗಳ ಕುರಿತ ವ್ಯಾಖ್ಯೆಯಲ್ಲಿ ಬದಲಾವಣೆಗೆ ಅವರ ಈ ಶೋಧ ಕಾರಣವಾಯಿತು.

ಅರ್ಥಶಾಸ್ತ್ರ
ಆರ್ಥಿಕ ಕ್ಷೇತ್ರದಲ್ಲಿ ಥಾಮಸ್ ಜೆ.ಸರ್ಜೆಂಟ್ ಹಾಗೂ ಕ್ರಿಸ್ಟೋಫರ್ ಎ.ಸಿಮ್ಸ  ಸಲ್ಲಿಸಿದ ಸಾಧನೆಗಾಗಿ ನೊಬೆಲ್ ಸ್ಮರಣಾರ್ಥ `ದಿ ಸ್ವರಿಜಿಸ್ ರಿಕ್ಸ್‌ಬ್ಯಾಂಕ್ ಪ್ರಶಸ್ತಿ~ ಸಂದಿತು.

ಶಾಂತಿ ಪ್ರಶಸ್ತಿ
ಲಿಬೇರಿಯನ್ ಅಧ್ಯಕ್ಷ ಎಲೆನ್ ಸಿರ್ಲೀಫ್, ಅದೇ ದೇಶದ ಶಾಂತಿ ಪ್ರಚಾರಕಿ ಲೆಮಾ ಗ್ಬೋವೀ ಹಾಗೂ ಯೆಮೆನ್‌ನ ಹೋರಾಟಗಾರ್ತಿ, ಪತ್ರಕರ್ತೆ ತವಕ್ಕುಲ್ ಕರ್ಮನ್ ಮೂವರಿಗೂ ಶಾಂತಿ ಪ್ರಶಸ್ತಿ ಘೋಷಿಸಲಾಯಿತು. ಮಹಿಳಾ ಸಬಲೀಕರಣಕ್ಕೆ ಈ ಮೂವರೂ ನಡೆಸಿರುವ ಹೋರಾಟಕ್ಕೆ ಸಂದ ಮನ್ನಣೆ ಇದು. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.